Mar 2, 2016

ದೆಹಲಿ ಸರಕಾರವೇಕೆ ಕರ್ನಾಟಕದಲ್ಲಿ ಜಾಹೀರಾತು ನೀಡಬೇಕು?

delhi government ad in karnataka
02/03/2016
ದೆಹಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರ ಒಂದು ವರ್ಷ ಪೂರೈಸಿದೆಯಂತೆ. ಸಂತೋಷ. ಒಂದಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ ಒಂದಷ್ಟು ಬೇಡದ ಕೆಲಸಗಳನ್ನೂ ಮಾಡಿದ್ದಾರೆ. ಉಳಿದ ರಾಜಕಾರಣಿಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಮತ್ತವರ ಸಹೋದ್ಯೋಗಿಗಳು ಹತ್ತಲವು ಸಲ ತೋರಿಸಿದ್ದಾರೆ. ಅವೆಲ್ಲ ಹೇಗಾದರೂ ಇರಲಿ ಅರವಿಂದರು ಕೇಜ್ರಿವಾಲಾರದು ದೆಹಲಿಯ ಸ್ಥಳೀಯ ಸರಕಾರ. ದೆಹಲಿಗೆ ರಾಜ್ಯದ ಸ್ಥಾನಮಾನವಿಲ್ಲದೇ ಹೋದರೂ ಭಾರತದ ರಾಜಧಾನಿಯಾಗಿರುವುದರಿಂದ ಒಂದಷ್ಟು ಹೆಚ್ಚು ಸುದ್ದಿಯಾಗುತ್ತದೆ. ಎಎಪಿ ರಾಜಕೀಯಕ್ಕೆ ಬಂದ ನಂತರ ಸುದ್ದಿಗಳು ಮತ್ತಷ್ಟು ಹೆಚ್ಚಾಗಿವೆ. 

ಒಂದು ವರುಷ ತುಂಬಿದ ಸಂಭ್ರಮಕ್ಕೆ ಸ್ಥಳೀಯವಾಗಿ ಜಾಹೀರಾತು ಕೊಡುವುದನ್ನೇನೋ ಒಪ್ಪಬಹುದು. ಅವರ ಸರಕಾರದ ಕೆಲಸಗಳನ್ನು ಜನರಿಗೆ ನೆನಪಿಸಲು, ನಾವೂ ಕೆಲಸ ಮಾಡುತ್ತಿದ್ದೇವೆಂದು ತೋರಿಸಲು ಅದು ಅವಶ್ಯಕ. ಆದರೆ ದೆಹಲಿಯ ಸರಕಾರವೊಂದು ಲಕ್ಷಾಂತರ, ಕೋಟ್ಯಾಂತರ ಹಣ ಖರ್ಚು ಮಾಡಿ ದೂರದ ಕರ್ನಾಟಕದ ವಾಹಿನಿಗಳಲ್ಲಿ ಜಾಹೀರಾತು ನೀಡುವ ಅನಿವಾರ್ಯತೆ ಏನಿದೆ? ದೆಹಲಿಯ ಆಪ್ ಸರಕಾರದ ಈ ನಡೆ ನಾಳೆ ದಿನ ಎಲ್ಲ ರಾಜ್ಯ ಸರಕಾರಗಳಿಗೂ ವ್ಯಾಪಿಸಿಬಿಟ್ಟರೆ ಜನರ ಹಣದ ಗತಿಯೇನು? ಸರಕಾರಕ್ಕೆ, ಪಕ್ಷಕ್ಕೆ ಒಂದಷ್ಟು ಪ್ರಚಾರ ಬೇಕೇ ಬೇಕು. ಆದರೆ ದೂರದ ರಾಜ್ಯದಲ್ಲೂ ಪ್ರಚಾರ ನಡೆಸುವ ಸಂಪ್ರದಾಯ ಖಂಡಿತ ಒಳ್ಳೆಯದಲ್ಲ. ಆಪ್ ಸರಕಾರ ಏನು ಒಳ್ಳೆಯದನ್ನು ಮಾಡಿತೋ ಬಿಟ್ಟಿತೋ, ಜನರ ಹಣವನ್ನು ಪೋಲು ಮಾಡಲು ಹೊಸ ಹೊಸ ವಿಧಾನಗಳನ್ನಂತು ಕಂಡುಹಿಡಿದಿದೆ.  

ಎಎಪಿ ಎಂದರೆ ಆಮ್ ಆದ್ಮಿ ಪಕ್ಷವೋ ಅಥವಾ Always advertising partyಯೋ?

5 comments:

  1. I am not a spokesperson of AAP. But I will tell you what I feel. And it applies to all the government spending (India shining Swacch Bharat etc etc)

    AAP has national ambitions. It does not want to stop in Delhi(and soon in Punjab) itself. It wants to launch itself to the national stage using Delhi as a platform.

    So what's wrong if a party showcases its achievements. Is there any rule to prohibit such spending.

    As far as money on Advertisements by governments is concerned, it is often blown out of proportions. Its hardly 0.5 percent of the total government spending. Government has many other areas where it can curb its spending and increase its revenues.

    We should not be like 'Aane na kalsi aane baala hidkondnanthe'

    ReplyDelete
    Replies
    1. ನೀತಿ ನಿಯಮಗಳು ಇರಲಿಕ್ಕಿಲ್ಲ... ರಾಷ್ಟ್ರೀಯ ಹಿತಾಸಕ್ತಿಗಳು ಇರಬಹುದು (ಇತ್ತೀಚಿಗೆ ಎನ್ ಡಿ ಟಿ ವಿಗೆ ಕೊಟ್ಟ ಸಂದರ್ಶನದಲ್ಲಿ ಸ್ವತಃ ಅರವಿಂದ ಕೇಜ್ರಿವಾಲ್ ರಾಷ್ಟ್ರೀಯ ಆಸಕ್ತಿಗಳಿಲ್ಲ, ದೆಹಲಿ ಬಿಟ್ರೆ ಪಂಜಾಬು ಎಂದ್ಹೇಳಿದ್ದರು, ಇರಲಿ). ಲೀಗಲಿ ಇದು ತಪ್ಪೂ ಇರಲಿಕ್ಕಿಲ್ಲ. ನಾಳೆ ದಿನ ಸಿದ್ಧರಾಮಯ್ಯ ತಮ್ಮ ಸರಕಾರದ ಸಾಧನೆಗಳನ್ನು ಕಾಶ್ಮೀರದ್ದೋ ಅಸ್ಸಾಮಿನದ್ದೋ ಟಿವಿ ವಾಹಿನಿಗಳಲ್ಲಿ ಜಾಹೀರಾತು ಕೊಟ್ಟರೆ ಅದು ಸರಿಯೇ? ಎನ್ನುವುದು ಪ್ರಶ್ನೆ. ಅವರದೇ ದುಡ್ಡಲ್ಲಿ ಅಥವಾ ಪಕ್ಷದ ದುಡ್ಡಲ್ಲಿ ಜಾಹೀರಾತು ಕೊಟ್ಟರೆ ಅದೇನು ದೊಡ್ಡ ಮಾತಲ್ಲ, ಆದರೆ ಸರಕಾರದ ದುಡ್ಡನ್ನು, ಜನರ ದುಡ್ಡನ್ನು ಹೀಗೆ ಪೋಲು ಮಾಡುವುದು (ಅದು ಎಷ್ಟೇ ಕಡಿಮೆ ಇರಬಹುದು) ಅದು ಸರಿಯೇ? ಇಂಡಿಯಾ ಶೈನಿಂಗ್, ಸ್ವಚ್ಛ ಭಾರತ ಅಭಿಯಾನ ಕೇಂದ್ರ ಸರಕಾರದ್ದೇ ಹೊರತು ದೆಹಲಿಯ ಸ್ಥಳೀಯ ಸರಕಾರದಲ್ಲ...

      Delete
  2. When you talk about 'waste of money' you must bear these things in mind.
    Many of our neo-liberal economists believe that spending on MNREGA, ICDS, Food Security, Anna Bhagya, PHCs, Subsidies on petrol and diesel, Mid day meal scheme etc etc etc as WASTE OF MONEY.I am not saying spending on social security is the same as spending it on advertising for political purposes. Instead I am saying no government spending is wasted if its used for its intended purpose. If it does not serve its intended purpose then it is 'wasted'. Government has excess money to fulfil both 'swami karya' and 'swa karya' . What is missing is will.

    We must not ask our governments to have surplus budget. Keynesian economics suggests that government spending is a way of increasing jobs, GDP rate and alleviation of poverty.

    PS: The possible argument is what will happen if a government over does its advertisements at the cost of public exchequer. The answer to that question is 'india shining ' campaign which completely backfired and BJP was voted out of power. People are very astute in these sort of things. So we need not be too worried







    ReplyDelete
  3. In fact supreme court in a historical verdict last year, stopped short from putting a limit on government's spending on advertisements and it is purely policy decision left to the governments. If siddaramaiah deems it politically fit to advertisements in Manipur and Nagaland then he should go ahead and do it

    ReplyDelete
  4. And what's wrong if aap is always advertising party? Greatest indian of the modern era, m k gandhi ,advertised his ideas so well that could easily embarass an iim ahmedabad graduate. Shah rukh is shah rukh purely because he can market himself so intelligently. A carbonated water with added sugar became the coolest product because of its relentless advertising(read pepsi cola)

    ReplyDelete