Dec 7, 2011

ಶಿಕ್ಷಣದ ಮಾಧ್ಯಮ ಯಾವುದಿರಬೇಕು?

ಡಾ ಅಶೋಕ್. ಕೆ. ಆರ್
ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ ಪ್ರಮುಖವಾಗುತ್ತಿವೆ ಏಕೆ?

Dec 1, 2011

ಶುಚಿಗೊಳ್ಳದ ಮನಗಳು ಮತ್ತು ಮಡೆ ಮಡೆ ಸ್ನಾನ


 
ಜನರ ನಂಬಿಕೆಗಳೇ ಮೌಡ್ಯದಿಂದ ಕೂಡಿರುವಾಗ ಆಳುವ ‘ಜವಾಬ್ದಾರಿಯುತ’ ಸರಕಾರಗಳು ಆ ಮೌಡ್ಯವನ್ನು ಮತ್ತಷ್ಟು ಉತ್ತೇಜಿಸಬೇಕೋ ಅಥವಾ ಇಂದಿನವರ ಭಾವನೆಗಳಿಗೆ ಕೊಂಚ ಧಕ್ಕೆಯಾದರೂ ಚಿಂತಿಲ್ಲ ಎಂಬ ಧೃಡಮನಸ್ಸಿನಿಂದ ಆ ಮೌಡ್ಯಗಳನ್ನು ತೊಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೋ?

Nov 25, 2011

ಪತ್ರಕರ್ತನ ಹತ್ಯೆಗೆ ಪತ್ರಕರ್ತೆಯ ಸಹಾಯ ಹಸ್ತ?!

ಜೆ ಡೆ source - youthkiawaaz.com

ಜೂನ್ ಹನ್ನೊಂದು ೨೦೧೧ರಲ್ಲಿ ಹತ್ಯೆಯಾದ ಮಿಡ್ ಡೇ ಪತ್ರಿಕೆಯ ಪತ್ರಕರ್ತ ಜೆ ಡೆಯ ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಏಶಿಯನ್ ಏಜ್ ನ ಪತ್ರಕರ್ತೆ, ಡೆಪ್ಯುಟಿ ಬ್ಯುರೋ ಚೀಫ್ 'ಜಿಗ್ನ ವೋರ'ಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

Oct 26, 2011

ಕೊನೆಯ ಪುಟಗಳು


ಡಾ. ಅಶೋಕ್. ಕೆ. ಆರ್.
          ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು, ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು. ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ. ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ ಜರ್ಝರಿತನಾಗಿದ್ದೇನೆ.

Oct 15, 2011

ಅಂತ್ಯ ಕಾಣದ ತೆಲಂಗಾಣ ಚಳುವಳಿ

telangana;source - wikipedia
ಡಾ. ಅಶೋಕ್. ಕೆ. ಆರ್
           ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ ಹಿಂಗ್ಯಾಕೆ?!ಯಲ್ಲಿ.

Oct 11, 2011

ಅನ್ನದ ಉತ್ಪಾದಕರಿಗೆ ಮೂರು ಫೇಸು ಮೂರೇ ತಾಸು

-      ಡಾ.ಅಶೋಕ್. ಕೆ. ಆರ್
ಅನಧಿಕೃತವಾಗಿ ಹೋಗುತ್ತಿದ್ದ ವಿದ್ಯುತ್ತಿಗೆ ಈಗ ಅಧಿಕೃತೆಯ ಮುದ್ರೆ ಬಿದ್ದಿದೆ; ಅಷ್ಟೇ ವ್ಯತ್ಯಾಸ! ಆಳುವ ವರ್ಗದ ಹಿತಾಸಕ್ತಿಗಳೇನು ಎಂಬುದನ್ನು ಅರಿಯಲು ಸರಕಾರದ ಈ ಅಧಿಕೃತ ಲೋಡ್ ಶೆಡ್ಡಿಂಗ್ ವಿವರವನ್ನು ಪರಿಶೀಲಿಸಬೇಕು. ಬೆಂಗಳೂರು ನಗರದಲ್ಲಿ ಲೋಡ್ ಶೆಡ್ಡಿಂಗಿಲ್ಲ, ಇತರೆ ನಗರಗಳಲ್ಲಿ ಒಂದು ತಾಸಿನ ಶೆಡ್ಡಿಂಗ್. ಹಳ್ಳಿಗಳಿಗೆ ಮೂರು ತಾಸು ಮಾತ್ರ ಮೂರು ಫೇಸಿನ ವಿದ್ಯುತ್. ಸಂಜೆ ಆರರಿಂದ ಮಾರನೇ ಬೆಳಿಗ್ಗೆ ಆರರವರೆಗೆ ಬಲ್ಬುಗಳು ಹತ್ತುವುದಕ್ಕೇ ಏದುಸಿರುಬಿಡುವ ಒಂದು ಫೇಸಿನ ವಿದ್ಯುತ್. ಆರು ತಾಸು ಕೊಡಲಾಗುತ್ತಿದ್ದ ಮೂರು ಫೇಸಿನ ವಿದ್ಯುತ್ತನ್ನು ಈಗ ಮೂರು ತಾಸಿಗೆ ಇಳಿಸಲಾಗಿದೆ. ಕಾರಣ?- ಬೆಂಗಳೂರು ಮತ್ತಿತರ ನಗರಗಳಿಗೆ ಅಭಾದಿತ ವಿದ್ಯುತ್ ಪೂರೈಕೆ ಮಾಡಬೇಕಿರುವುದು.

Oct 3, 2011

ಸುಳ್ಯದಲ್ಲಿ ನಲವತ್ತನೇ ವರ್ಷದ ದಸರಾ ಮಹೋತ್ಸವ.


ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ಜಂಟಿಯಾಗಿ ನಡೆಸುತ್ತಿರುವ ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ಇದು ನಲವತ್ತನೇ ವರ್ಷದ ಮಹೋತ್ಸವ ಎಂಬುದು ವಿಶೇಷ. ಪ್ರಾರಂಭೋತ್ಸವದ ಒಂದಷ್ಟು ಚಿತ್ರಗಳು. 

Sep 27, 2011

ಪೀಠದ ಬಾಗಿಲಲ್ಲಿ ಅಜ್ಞಾನದ ಪ್ರಭೆ!

-      ಡಾ ಅಶೋಕ್. ಕೆ. ಆರ್.

ಚಂದ್ರಶೇಖರ ಕಂಬಾರರಿಗೆ ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಸಿಕ್ಕಿದೆ. ಕನ್ನಡಕ್ಕೆ ದಕ್ಕಿದ ಎಂಟನೇ ಜ್ಞಾನಪೀಠ. ಈ ಬಗ್ಗೆ ಸಮಸ್ತರೂ ಸಂತಸ ಪಡಬೇಕಾದ ಸಮಯದಲ್ಲಿ ‘ಅಯ್ಯೋ ನಮ್ಮ ಭೈರಪ್ಪನವರಿಗೆ ಸಿಗಲಿಲ್ಲವಲ್ಲ. ಬರೀ ರಾಜಕೀಯ’ ಎಂದು ಕೆಲವರು ಹಲುಬುತ್ತಿದ್ದಾರೆ. ನನ್ನ ಗೆಳೆಯನೊಬ್ಬ ‘ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠ ಅದು ಅಜ್ಞಾನಪೀಠ’ ಎಂದು ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಬರುವ ‘ಹಿಂದೂ’ ಧರ್ಮದ ರಕ್ಷಕನಂತೆಯೇ ಉಗ್ರವಾಗಿ ಮೆಸೇಜು ಕಳುಹಿಸಿದ್ದ. ಮೂರು ವರ್ಷದ ನಂತರ ಭೈರಪ್ಪನವರಿಗೆ ಜ್ಞಾನಪೀಠ ದೊರಕಿದಾಗಲೂ ಆಗಲೂ ಈ ಭಕ್ತಿವೃಂದ ‘ರಾಜಕೀಯವಿದು’ ಎಂದು ಹಲುಬುತ್ತಾರಾ?!

Sep 22, 2011

ಕರ್ನಾಟಕದ ಸೊಮಾಲಿಯ ಮತ್ತು ಬಡತನ ರೇಖೆ.

ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದ ಕೆಳಗಿನ ಎರಡು ವರದಿಗಳು ಮೇಲ್ನೋಟಕ್ಕೆ ಸಂಬಂಧಪಟ್ಟಿಲ್ಲದವು ಎಂದು ತೋರಿದರೂ ಎರಡಕ್ಕೂ ನೇರಾ ನೇರ ಸಂಬಂಧವಿದೆ. ಒಂದು ಕಡೆ ಬಡವರನ್ನು ‘ಬಡವನಲ್ಲ ಶ್ರೀಮಂತ’ನೆಂದು ಗುರುತಿಸಲು ಸಾಧ್ಯವಾಗುವಂಥ ಸರಕಾರದ ವರದಿ. ಮತ್ತೊಂದೆಡೆ ಆಹಾರದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕರುಣಾಜನಕ ಕಥನ. “Shining India”ದ ಮತ್ತೊಂದು ರೂಪ.

TV 9 report about malnutrition in raichur


Sep 15, 2011

ಚಿಂತನೆಗೆ ತಡೆಯೊಡ್ಡುವ ಆಧುನಿಕತೆ?

ಡಾ ಅಶೋಕ್. ಕೆ. ಆರ್.
          ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಳ್ಳುವ ಸಲುವಾಗಿ ಗೆಳೆಯ ಮಂಜನ ಜೊತೆ ಯುನಿವರ್ಸಿಟಿಗೆ ಹೋಗಿ ಅರ್ಜಿ ಕೊಟ್ಟೆ. ಮಧ್ಯಾಹ್ನದ ನಂತರ ಬರಲು ತಿಳಿಸಿದರು. ಅಲ್ಲಿಯವರೆಗೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಮಂಜು ‘ಫೋರಮ್’ ಮಾಲಿಗೆ ಹೋಗೋಣವಾ? ಎಂದ. ಬೆಂಗಳೂರಿಗರ ಬಾಯಲ್ಲಿ ಪದೇ ಪದೇ ಕೇಳಿಬರುತ್ತಿದ್ದ ಫೋರಮ್ ನಲ್ಲಿ ಏನಿದೆ ಎಂಬ ಕುತೂಹಲ ನನ್ನಲ್ಲೂ ಇತ್ತು. ನಡಿಯಪ್ಪ ಹೋಗೋಣ ಎಂದೆ. ‘ಓಹೋ! ಇದೇನಾ ನಮ್ಮ ದೇಶದ ಯುವಜನತೆ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಜಾಗ’ - ಫೋರಮ್ಮಿಗೆ ಕಾಲಿಡುತ್ತಿದ್ದಂತೆಯೇ ಬಂದ ಯೋಚನೆಯಿದು. ‘ಲೇ ಇಲ್ಲಿ ನಾವೇನು ಮಾಡೋದೋ ಮಾರಾಯಾ? ಏನನ್ನೂ ತೆಗೆದುಕೊಳ್ಳೋ ಅವಶ್ಯಕತೆಯೂ ಇಲ್ಲ; ಜೇಬಿನಲ್ಲಿ ಹೆಚ್ಚು ದುಡ್ಡೂ ಇಲ್ಲ. ನಡಿ ವಾಪಸ್ಸಾಗೋಣ’ ಎಂದೆ. ‘ಲ್ಯಾಂಡ್ ಸ್ಟೋನ್ ಪುಸ್ತಕದಂಗಡಿ ಇದೆ’ ಎಂದ. ‘ನಮಗೆ ಇಷ್ಟವಾಗೋ ಜಾಗ ಇದೊಂದೇ ಇರಬೇಕು ಇಲ್ಲಿ’ ಎಂದುಕೊಳ್ಳುತ್ತಾ ಆ ಅಂಗಡಿಗೆ ಹೊಕ್ಕು ಘಂಟೆಯ ಮೇಲೆ ಪುಸ್ತಕಗಳನ್ನು ಜಾಲಾಡಿದೆವು. ಹಣದ ಅಭಾವವಿದ್ದ ಕಾರಣ ಇಬ್ಬರಿಗೂ ಒಂದೊಂದು ಪುಸ್ತಕ ಖರೀದಿಸಲಷ್ಟೇ ಶಕ್ಯವಾಯಿತು. ನಂತರ ಏನನ್ನೋ ವಿಚಾರಿಸಲು ಮೊಬೈಲ್ ಅಂಗಡಿಗೆ ಹೋದೆವು. ಆ ಅಂಗಡಿಯಲ್ಲಿ ಹಿನ್ನೆಲೆಯಲ್ಲಿ ಸಂಗೀತವಿತ್ತು. ಅಂದು ಆರಂಭವಾದ ಈ ಕೆಳಗಿನ ಯೋಚನೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ಒಂದು ವರದಿಯಿಂದಾಗಿ ಮೂರ್ತ ರೂಪ ಪಡೆದುಕೊಳ್ಳಲಾರಂಭಿಸಿದೆ.

Sep 10, 2011

ಅಮ್ಮಂದಿರ ಮರೆತ ‘ರಾಮ’ಭಕ್ತರ ನಾಡಿನಲ್ಲಿ. . .


           ಸೆಪ್ಟೆಂಬರ್ 3, 2006: - ಕರ್ನಾಟಕ – ಆಂಧ್ರಪ್ರದೇಶ ಗಡಿಯಲ್ಲಿನ ಬಳ್ಳಾರಿಯ ಹಳ್ಳಿಯೊಂದರಲ್ಲಿದ್ದ 200 ವರ್ಷಗಳಷ್ಟು ಹಳೆಯದಾದ ಸುಗ್ಗಾಲಮ್ಮ ದೇವಾಲಯವನ್ನು ರೆಡ್ಡಿ ಬೆಂಬಲಿತ ವ್ಯಕ್ತಿಗಳು ದ್ವಂಸ ಮಾಡಿದರು, ಹಳ್ಳಿಯವರ ವಿರೋಧದ ನಡುವೆ. ಕಾರಣ? ಅಮ್ಮನ ಪಾದದಡಿಯಲ್ಲಿ ಕಬ್ಬಿಣದ ಅದಿರಿತ್ತು! ಪೂಜಾರಿಗಳನ್ನು ಕರೆಯಿಸಿ ಹೋಮ – ಹವನ – ಶಾಂತಿ ವಗೈರೆ ವಗೈರೆ ಮಾಡಿಸಿ ದೇವಾಲಯವನ್ನು ಕೆಡವಿದ್ದರಾದರೂ ಊರ ಜನರ ಕೋಪ ಶಮನವಾಗಿರಲಿಲ್ಲ. ಪೋಲೀಸ್ ಕೇಸ್ ಮಾಡಿದರು. ಅದೂ ಕೂಡ ಈಗ ರೆಡ್ಡಿಯ ವಿರುದ್ಧವಿದೆ.

Sep 8, 2011

ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?


ಪ್ರಜಾವಾಣಿ
ಭ್ರಷ್ಟಾಚಾರ ಕೇವಲ ಸರಕಾರಿ ನೌಕರರ ಮತ್ತು ಸರಕಾರಕಷ್ಟೇ ಸೀಮಿತವಾಗಿಸಬಹುದಾದ ಸಂಗತಿಯಾ? ಅನಧಿಕೃತವಾಗಿ ಸಾವಿರ – ಲಕ್ಷ ರುಪಾಯಿಗಳನ್ನು ಪಡೆಯುವ ಶಾಲಾ ಕಾಲೇಜುಗಳು ಇದರ ವ್ಯಾಪ್ತಿಗೆ ಬರುವುದಿಲ್ಲವಾ? ಎಂ. ಆರ್. ಪಿ ದರಕ್ಕಿಂತ ಹೆಚ್ಚು ಹಣ ಪಡೆಯುವ ಅಂಗಡಿಗಳು? ನಾರ್ಮಾಲ್ಲಾಗೇ ಆಗುವ ನಾರ್ಮಲ್ ಡೆಲಿವರಿಗೆ 50,000 – ಒಂದು ಲಕ್ಷದವರೆಗೆ ಪಡೆಯುವ ಪಂಚತಾರಾ ಆಸ್ಪತ್ರೆಗಳು?

Sep 5, 2011

ಕಿಚ್ಚು ಹಚ್ಚಿದ ರಹಮತ್ ರಿಗೊಂದು ಥ್ಯಾಂಕ್ಸ್ ಹೇಳುತ್ತಾ. . .


ನಾನು ಅಧಿಕೃತವಾಗಿ ಸಾಹಿತ್ಯದ ವಿದ್ಯಾರ್ಥಿಯಲ್ಲ. ವೈದ್ಯಕೀಯ, ಇಂಜಿನಿಯರಿಂಗ್ ವಿಭಾಗಗಳಲ್ಲಿ ಓದಿ ಕೆಲಸಕ್ಕೆ ಸೇರಿರುವ ನನ್ನ ಬಹಳಷ್ಟು ಗೆಳೆಯರೂ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಮೊದಮೊದಲು ಸಮಯ ಕಳೆಯಲು, ನಂತರ ಸ್ವಲ್ಪ ಮನೋರಂಜನೆಗೆ ಸ್ವಲ್ಪ ಙ್ಞಾನಕ್ಕೆ ಪಠ್ಯೇತರ ಪುಸ್ತಕಗಳನ್ನು ಓದಲಾರಂಭಿಸಿದವರು ನಾವು. ಗೃಂಥಾಲಯಗಳಲ್ಲಿ ಸಿಕ್ಕುವ ಪುಸ್ತಕಗಳನ್ನೆಲ್ಲ ಓದುತ್ತಿದ್ದೆವು. ಹೆಚ್ಚು ಹಣವಿದ್ದರೆ ಒಂದಷ್ಟು ಖರೀದಿ ಮಾಡುತ್ತಿದ್ದೆವು. ನಮ್ಮ ಅರಿವಿಗೆ ಬಂದಷ್ಟನ್ನು ಹಂಚಿಕೊಳ್ಳುತ್ತಿದ್ದೆವು. ಕಥೆ ಕಾದಂಬರಿ ಪ್ರಕಾರಗಳಿಂದ ನಾಟಕ, ಆತ್ಮಕಥೆ, ರಾಜಕೀಯ, ಆರ್ಥಿಕ ವಿಷಯಗಳ ಕಡೆ ಹೊರಳಲಾರಂಭಿಸಿದೆವು.

Aug 25, 2011

ಅಪೆಕ್ಸ್ ಕೋರ್ಟಿನ ಅಂಗಳದಲ್ಲಿ ದೆಹಲಿಯ ಬಡ ರೋಗಿಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಬಟ್ಟೆ, ಮನೆಗೆ ಹಣ ಹೊಂದಿಸಲೂ ಕಷ್ಟಪಡುವ ಜನರೇ ಹೆಚ್ಚಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಂಪೂರ್ಣ ಹೊಣೆ ಸರಕಾರದ್ದೇ ಆಗಿರಬೇಕಾಗಿತ್ತು. ಜಾಗತೀಕರಣದ ಪ್ರಭಾವ, ಉದ್ಯಮವಾದ ಖಾಸಗಿ ಆಸ್ಪತ್ರೆಗಳು, ನಿರೀಕ್ಷೆಯ ಗುಣಮಟ್ಟ ಒದಗಿಸಲು ವಿಫಲವಾದ ಸರಕಾರಿ ಆಸ್ಪತ್ರೆ ಮತ್ತು ಉಳಿದೆಲ್ಲರಂತೆ ವೈದ್ಯರಿಗೂ ಹಣಗಳಿಕೆಯೇ ಪ್ರಮುಖ ಸಂಗತಿಯಾದ ಕಾರಣ ಸರ್ವರಿಗೂ ಉಚಿತ ಆರೋಗ್ಯವೆಂಬುದು ಕನಸಿನಲ್ಲೂ ಯೋಚಿಸಲಾಗದ ಸಂಗತಿಯಾಗಿದೆ. ಪಶ್ಚಿಮೀಕರಣದ ಫಲವಾಗಿ ಆರೋಗ್ಯಕ್ಕೂ ವಿಮೆ ಮಾಡಿಸಲೇಬೇಕಾದದ್ದು ಇಂದಿನ ಜರೂರತ್ತು. ಬಡವರ ಪಾಲಿಗೆ ವಿಮೆ ಮಾಡಿಸುವುದು ಅಸಾಧ್ಯ.

Aug 23, 2011

The religion and its fanaticism

-->
Out of many meanings of the word religion, the one which should have been the most important for human nature is “the religion is to resolve to mend one’s errant ways”. But unfortunately the mankind except few exceptions has restricted its meaning to “belief in and worship of a god or other superhuman agency”. The foundation for all the man made problems that rose from the religion is because of the followers of respective religion who accept and believe in the latter meaning of religion and either they ignore the former meaning as it is difficult to follow in life or they just reject that view as it will not help in their false propaganda and expansion of false religion.

Aug 22, 2011

ಪ್ರಭುತ್ವ ಮಣಿಸುವ ಅತ್ಯಾತುರದಲ್ಲಿ...          ಕಳೆದ ನಲವತ್ತೆರಡು ವರ್ಷಗಳಿಂದ ಭಾರತವನ್ನು ‘ಆಳಿದ’ ಯಾವೊಂದು ಪಕ್ಷವೂ ಒಂದು ಪ್ರಬಲ ಲೋಕಪಾಲ ಮಸೂದೆಯನ್ನು ಮಂಡಿಸಲು ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿಲ್ಲ. ಬಹುಶಃ ಶಾಂತರಾಮ್ ಕಾದಂಬರಿಯಲ್ಲಿ ಬರುವ the problem with corruption is it works very fine!  ಎಂಬ ವಾಕ್ಯದಂತೆ ನಾವೆಲ್ಲರೂ ಭೃಷ್ಟಾಚಾರಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮದು ಸಂಪ್ರದಾಯಬದ್ಧ ದೇಶ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವ ಪರಿಣಾಮ ನಮಗೆ ಆರಾಧಿಸಲು ಒಬ್ಬ ದೇವರು ಬೇಕು. ಸದ್ಯ ಅಣ್ಣಾ ಹಜಾರೆಗೆ ಆ ದೇವರ ಸ್ಥಾನ ಕೊಟ್ಟು ಬೀದಿಗಿಳಿದಿದ್ದೇವೆ. ಬೆಚ್ಚಗೆ ಮನೆಯಲ್ಲಿ ಕುಳಿತು ಯಾವೊಂದು ಚಳಿವಳಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸದೇ ಇದ್ದ ಜನರನ್ನು ಬೀದಿಗಿಳಿದು ದನಿತೆಗೆಯುವಂತೆ ಮಾಡಿದ್ದು ಅಣ್ಣಾರ ನಿಜವಾದ ಸಾಧನೆಯೇ ಹೊರತು ಅವರ ಹೋರಾಟದಿಂದ ಜಾರಿಯಾಗುವ ಅಥವಾ ಜಾರಿಯಾಗದೆ ಇರುವ ಜನಲೋಕಪಾಲ ಮಸೂದೆಯಲ್ಲ. 

Aug 21, 2011

ಮಣ್ಣಿನ ಸಿನಿಮಾ ಮತ್ತು ಕಂಪ್ಯೂಟರ್ ಪ್ರಿಂಟ್ ಔಟ್.


-->
ಮಾನ್ಯ ಮುನಿರತ್ನರವರಿಗೆ,
ಶುಭಾಷಯಗಳು, karnataka film producers associationನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ. ಅಧ್ಯಕ್ಷರಾದ ಸಂತಸದಲ್ಲಿ ನೀವು ಉದುರಿಸಿದ ಅಣಿಮುತ್ತುಗಳನ್ನು ಪ್ರಜಾವಾಣಿಯ ಸಿನಿಮಾ ಪುರವಣಿಯಲ್ಲಿ ಕಂಡು ಯಾವ ಭಾವನೆಯನ್ನು ವ್ಯಕ್ತಪಡಿಸಬೇಕೆಂಬುದು ತಿಳಿಯದೆ ಗೊಂದಲವೇರ್ಪಟ್ಟಿದೆ! ‘ಮೂರು ಕೋಟಿಯವರೆಗಷ್ಟೇ ಮಾರ್ಕೆಟ್ ಇರುವ ಗಣೇಶನಂತಹ ನಟ ಎರಡು ಕೋಟಿ ಸಂಭಾವನೆ ಕೇಳುತ್ತಾನೆ, ಅವನೆಗಿಂತ ಹೆಚ್ಚು ಮಾರ್ಕೆಟ್ ಇರುವ ಪುನೀತ್ ನಷ್ಟೇ ದುಡ್ಡು ಕೇಳುತ್ತಾನೆ, ಇದು ತಪ್ಪು. ಇಂಥದು ನಡೆಯಬಾರದು; ಮೊದಲಿವನ್ನು ಸರಿಪಡಿಸಬೇಕು’ ಎಂದು ಆದೇಶ ನೀಡಿದ್ದೀರಿ. ಯಾರು ಸರಿಪಡಿಸಬೇಕೆಂಬುದನ್ನೂ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು, ಇರಲಿ.

Aug 14, 2011

ಕಡ್ಡಿಗೀರಿ ......................ಹಚ್ಚಿದನು

-->
ಹಳ್ಳಿಹೈದ. S. ಅBಹನಕೆರೆ
          ಟೀ ಸ್ಟಾಲ್ ಬಳಿ ಕುಳಿತಿದ್ದವನ ಕೆಣಕಿದವನು ಮೋಗ್ಲಿಯೇ. ಅಲ್ಲಿಂದ ಉರ್ಕೊಂಡು ಹೋಗುವಂತೆ ಮಾಡಿದವನೂ ಮೋಗ್ಲಿಯೇ. ಬೈಕ್ ನಿಲ್ಲಿಸಿ ಒಳಬಂದವನೆ “ಅಣ್ಣಾ ಎರಡ್ ಕಿಂಗ್ ಎರಡ್ ಟೀ” ಅಂದ. ತಕ್ಷಣ ಸುತ್ತಮುತ್ತ ನೋಡಿದೆ, ಯಾರೂ ಇರಲಿಲ್ಲ, mostly ನನಗೇ ಆರ್ಡರ್ ಮಾಡಿರಬೇಕೆಂದುಕೊಂಡು “ನನಗೆ ಬೇಡ” ಅಂದೆ.

Aug 10, 2011

ವ್ವಕ್ತಿತ್ವ ಬದಲಾಗಬೇಕು ವ್ವಕ್ತಿಯಲ್ಲ

-->
ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ತೆರೆ ಬಿದ್ದು ಮತ್ತೊಂದು ಅಂಕದ ಆರಂಭವಾಗಿದೆ. ಸಿಟ್ಟಿನ ಜಾಗಕ್ಕೆ ನಗು ಬಂದಿದೆ ಅರ್ಥಾತ್ ಮೂಗಿನ ತುದಿಯಲ್ಲೇ ಕೋಪ ಸಾಕಿಕೊಂಡಿದ್ದ ಯಡಿಯೂರಪ್ಪನವರ ಜಾಗದಲ್ಲಿ ತಮ್ಮ ದೇಹ ರಚನೆಯ ಕಾರಣದಿಂದಲೋ ಅಥವಾ ನಿಜಕ್ಕೂ ಖುಷಿಯ ಮನಸ್ಸಿನ ಕಾರಣದಿಂದಲೋ ಯಾವಾಗಲೂ ನಗುತ್ತಿರುವಂತೆ ತೋರುವ ಸದಾನಂದಗೌಡರು ಮುಖ್ಯಮಂತ್ರಿಯ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದ ವರಿಷ್ಠರ ಮಾತನ್ನು ನಂಬುವುದಾದರೆ “ಡೆಮಾಕ್ರೆಟಿಕ್” ರೀತಿಯಲ್ಲಿ ಆಯ್ಕೆಯಾಗಿದ್ದಾರೆ.

Aug 7, 2011

India as a leader in 21st century.

Narasimhan Khadri.
-->
internet source.

Reading newspapers nowadays has been a very disturbing exercise even for strong hearted. Whole world is anxious to know what the immediate future holds for them. Recent developments in the North eastern part of Africa can only be described as horrific. Somalia is not new to hunger and terrorism. Its a part of their psyche. But terrorism and hunger of this magnitude is shocking and hurting. But then you will never get used to hunger no matter how much you have seen it. Somalia is in its worst drought situation and it is in need of help from every quarter of the world. Even India can play a very constructive role. Somalia would have got sufficient financial help from the western developed nations, if not for the crisis that they  themselves are in.

Aug 5, 2011

Incendies Movie Review.


-->

We all wait for good stories and this is one for sure. Well I will have to be cautious about how much I write about the story as such as not to spoil the impression. Story is adapted from a play ‘scorched’ by wajdimouawad.

Aug 1, 2011

ಮತ್ಸ್ಯಗಂಧಿಯ ಮೀನುಗಳು

-->
ಮತ್ಸ್ಯಗಂಧಿ 
ಬೆಳಗಿನ ಜಾವ ಮೂರಕ್ಕೆ ನಂತರ ಪ್ರಯತ್ನಪಟ್ಟರೂ ನೆನಪಿಗೆ ಬಾರದ ಸ್ವಪ್ನವೊಂದರಿಂದ ಎಚ್ಚರವಾಯಿತು. ಅರ್ಧ ಗಂಟೆ ಹೊರಳಾಡಿದೆನಾದರೂ ನಿದ್ರೆ ಹತ್ತಲಿಲ್ಲ. ಎದ್ದು ಕುಳಿತು ಕೊನೆಯ ಕೆಲವು ಪುಟಗಳಷ್ಟೇ ಉಳಿದಿದ್ದ ‘ನನ್ನ ತೇಜಸ್ವಿ’ ಪುಸ್ತಕವನ್ನು ಕೈಗೆತ್ತಿಕೊಂಡೆ. ಆರಾಗುವಷ್ಟರಲ್ಲಿ ಪುಸ್ತಕದ ಪುಟಗಳು ಮುಗಿದುಹೋದವು. ರೂಮಿನಲ್ಲೇ ಅತ್ತಿಂದಿತ್ತ ಹೆಜ್ಜೆ ಹಾಕಿದೆ. ಇಂದೇಕೋ ಮಳೆಯಿರಲಿಲ್ಲ. ಏನು ಮಾಡಬೇಕೆಂದು ತೋಚದೆ ಮೊಬೈಲೆತ್ತಿಕೊಂಡು ಗೂಗಲ್ ಗೆ ಹೋಗಿ ಸುಳ್ಯ ಎಂದು ಟೈಪಿಸಿ ಮೂಡುವ ಪುಟಗಳಿಗೆ ಕಾದೆ. ಮೊದಲ ಪುಟ ವಿಕಿಪೀಡಿಯಾದಾಗಿತ್ತು. ಅದನ್ನೇ ತೆರೆದೆ. ಸುಳ್ಯದ ಹತ್ತಿರದ ಜಾಗಗಳ ಹೆಸರುಗಳನ್ನು ನೋಡುತ್ತಿದ್ದಾಗ ತೊಡಿಕಾನ, ಮತ್ಸ್ಯಗಂಧಿ, ದೇವರಗುಂಡಿಯ ಹೆಸರುಗಳು ಕಂಡವು. ಸುಳ್ಯದಿಂದ ಹತ್ತಿರದಲ್ಲೇ ಇದ್ದ ಜಾಗಗಳವು. ಸರಿ ನಡಿ ಹೊರಡೋಣ ಎಂದು ಶರ್ಟು ಪ್ಯಾಂಟು ತೊಟ್ಟು ಜರ್ಕಿನ್ನಿನ ಒಳಜೇಬಿಗೆ ಕ್ಯಾಮೆರಾ, ಮೊಬೈಲನ್ನು ಹಾಕಿ ಜರ್ಕಿನ್ನನ್ನು ಹೆಗಲಿಗೇರಿಸಿ ಬೈಕೇರಿ ಹೊರಟೆ. ದಾರಿ ಕೇಳಲು ರಸ್ತೆಯಲ್ಲಿ ಜನ ಸಂಚಾರವೇ ಆರಂಭವಾಗಿರಲಿಲ್ಲ. ಎಲ್ಲರೂ ಭಾನುವಾರದ ರಜೆಯ ಮೋಜನ್ನು ನಿದ್ರೆಯಲ್ಲಾನಂದಿಸುತ್ತಿರುವಾಗ ನನಗ್ಯಾವ ಹುಕಿ ಇದು? ಎಂದು ನಗೆ ಬಂತು. ಬಸ್ ನಿಲ್ದಾಣದ ಬಳಿ ಹೋಗಿ ಆಟೋದವರನ್ನು ತೊಡಿಕಾನಕ್ಕೆ ಹೋಗುವ ದಾರಿ ಕೇಳಿದೆ. ಮಡಿಕೇರಿಯೆಡೆಗೆ ಹೋಗುವ ರಸ್ತೆಯಲ್ಲೇ ಹೋಗಿ ಅರಂತೋಡುವಿನ ಬಳಿ ಬಲಕ್ಕೆ ಹೊರಳಿ ಐದು ಕಿ.ಮಿ ಕ್ರಮಿಸಿದರೆ ತೊಡಿಕಾನ ಸಿಗುತ್ತದೆ ಎಂದರು.

Jul 27, 2011

25,228 ಪುಟಗಳು ರದ್ದಿಗಾ??!

Individual photos from net edited by author

-->
ಅಶೋಕ್. ಕೆ.ಅರ್
ಪತ್ರಕರ್ತ ಗೆಳೆಯ ಅವಿಗೆ ಹಿಂದೊಮ್ಮೆ ನಿಮಗೆ ಬಿಡಪ್ಪ ಜನ ಸತ್ತರೂ ಖುಷಿಯಾಗ್ತೀರಾ ಬರೆಯೋದಿಕ್ಕೆ ಸರಕು ಸಿಗ್ತು ಅಂತ ರೇಗಿಸಿದ್ದಾಗ “ನೋಡಪ್ಪಾ ಆ್ಯಕ್ಸಿಡೆಂಟ್ ಆಗಿದ್ದು ಕೊಲೆ ಆಗಿದ್ದು ಒಳ್ಳೆ ಘಟನೆ ಅಲ್ಲ ಆದರೆ ಸುದ್ದಿಯ ಸಂಗ್ರಹದ ವಿಚಾರಕ್ಕೆ ಬಂದರೆ ಅದು ಒಳ್ಳೆ ಸುದ್ದಿ” ಎಂದು ಒಂದಷ್ಟು ಖಾರವಾಗೇ ಪ್ರತಿಕ್ರಯಿಸಿದ್ದ. ಸುದ್ದಿಗೂ ಘಟನೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದ. ಒಬ್ಬ ಪತ್ರಕರ್ತನಿಗೆ ಒಳ್ಳೆ ಸುದ್ದಿಯಾಗುವ ಇಂಥ ಸಂಗತಿಗಳು ಕೆಟ್ಟ ಘಟನೆಯಾಗಿ ಓದುಗರ ಮನ ತಲುಪಿದರೆ ಆಗ ಆ ಪತ್ರಕರ್ತನನ್ನು ಯಶಸ್ವಿಯೆಂದು ಕರೆಯಬಹುದೇನೋ? ಆದರೆ ಈಗಿನ ದಿನಗಳಲ್ಲಿ ಕೆಟ್ಟ ಘಟನೆಗಳು ಕೂಡ ಓದುಗರಿಗೆ ಕೇವಲ ಸುದ್ದಿಯಾಗಷ್ಟೇ ತಲುಪುತ್ತಿದೆ. ಇದು ಪತ್ರಕರ್ತರ ಸೋಲಾ ಅಥವಾ ಜನರ ಮನಸ್ಸಿನ ಸೂಕ್ಷ್ಮತೆಯ ಮಟ್ಟವೇ ಕಡಿಮೆಯಾಗುತ್ತಿದೆಯಾ?

Jul 22, 2011

ತೊಡಿಕಾನ, ದೇವರಗುಂಡಿ ಮತ್ತು ಸರಕಾರದ ಹುಂಡಿ!!

ಅಶೋಕ್. ಕೆ.ಅರ್
ಒಂದು ಕಡೆ ಎಕ್ಸಪ್ರೆಸ್ ಹೈವೇ,ಬೆಂಗಳೂರು ಮೈಸೂರು  ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ, ಆರು ಲೇನ್ - ಎಂಟು ಲೇನ್ ರಸ್ತೆ, ದೊಡ್ಡ ನಗರಗಳಲ್ಲಿ ಹೆಜ್ಜೆಗೊಂದರಂತೆ ಫ್ಲೈಓವರ್ ಗಳು, ಸಬ್ವೇಗಳು - ಆಹಾ!! ಸಂಪೂರ್ಣ  ಅಭಿವೃದ್ಧಿಯಾಗಿಬಿಟ್ವಲ್ಲ!! ಇನ್ನೊಂದೆಡೆ ಪ್ರಾಚೀನ ಯುಗದಲ್ಯಾವಾಗಲೋ ಟಾರು ಕಂಡಿದ್ದ ರಸ್ತೆಗಳು. ದಪ್ಪ ಜಲ್ಲಿ ಕಲ್ಲಿನ ಮೊನಚಾದ ತುದಿಗಳು ನಮ್ಮ ಸ್ವಾಗತಕ್ಕೆ ಮುಗಿಲೆಡೆಗೆ ಮುಖ ಮಾಡಿ ನಿಂತಿರುವ ರಸ್ತೆಗಳು. ಇಂತಿಪ್ಪ ರಸ್ತೆಗಳನ್ನು ದಾಟಿ ಮುನ್ನಡೆದರೆ ಮತ್ತಷ್ಟು ಹಿಂದಿನ ಯುಗವನ್ನೂ ತೋರಿಸುವ ಮಣ್ಣಿನ ರಸ್ತೆಗಳು. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಗಳು.
ತೊಡಿಕಾನದಿಂದ ದೇವರಗುಂಡಿಯೆಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸಿದಾಗ ಬಂದ ಭಾವನೆಯಿದು. ಇಂಥ ರಸ್ತೆಗಳನ್ನು ಬಯಲುಸೀಮೆಯಲ್ಲೂ ಕಾಣಬಹುದಾದರೂ ಇಲ್ಲಿ ಅದೂ ಮಳೆಗಾಲದಲ್ಲಿ ಇಂಥ ರಸ್ತೆಗಳಲ್ಲಿ ಸಂಚರಿಸುವುದು ಹೊಸಬರಿಗೆ ಸಾಹಸವೇ ಸರಿ. ಅದೂ ಬೈಕಿನಲ್ಲಿ ಮತ್ತಷ್ಟು ಕಷ್ಟದ ಕೆಲಸ.

Jul 21, 2011

ಭಿನ್ನಹ

ಮನದ ಮೂಲೆಯ
ಕತ್ತಲು ಕೋಣೆಯಾದರೂ ಸರಿಯೇ
ನನಗೊಂದು ಪುಟ್ಟ ಜಾಗವಿರಲಿ.
ನಿನ್ನ ಗರ್ಭದೊಳಗೆನ್ನ
ಬೆಚ್ಚಗೆ ಪೋಷಿಸು
ತಿಂಗಳಅಂತ್ಯಕ್ಕೆ ಹೊರದಬ್ಬಬೇಡ.
ಕಾಡುವ ಬೇಡುವ ಆಸೆಯಿಲ್ಲ
ಒಂದಾಗಬೇಕು
ನಿನ್ನೊಳಗೆ ಒಂದಾಗಬೇಕು .
-ಅಶೋಕ್. ಕೆ.ಅರ್

Apr 25, 2011

ಮುಕ್ತಿ.

ಖೊಟ್ಟಿ
ದೇವರುಗಳ
ಹತ್ಯೆ ಮಾಡದೆ
ಮುಕ್ತಿಯಿಲ್ಲ.
-ಅಶೋಕ್. ಕೆ.ಅರ್ 

Apr 3, 2011

??

ಅರ್ಥ ಹುಡುಕುವ
ಸಡಗರದಲ್ಲಿ
ಬದುಕು ಕಳೆದುಹೋಗಿದೆ.
-ಅಶೋಕ್. ಕೆ.ಅರ್

Apr 1, 2011

ಬೆತ್ತಲು

ಬೆತ್ತಲಾಗಬೇಕು!
ಕತ್ತಲ ಕಳೆಯಲು
ಮನಸ್ಸು ಬೆತ್ತಲಾಗಬೇಕು!
-ಅಶೋಕ್. ಕೆ.ಅರ್