Dec 9, 2017

ಅಕ್ಷರ ಪ್ರೀತಿ ಬೆಳೆಸಿದ ರವಿ ಬೆಳಗೆರೆಯ ನೆನಪಲ್ಲಿ......

ಡಾ. ಅಶೋಕ್.ಕೆ.ಆರ್

ರವಿ ಬೆಳಗೆರೆ ಅರೆಸ್ಟ್ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದಿಂದ ಟಿವಿ, ಸುದ್ದಿ ಯ್ಯಾಪ್‍ಗಳು, ಎಫ್.ಬಿಯಲ್ಲಿ ರಾರಾಜಿಸಲಾರಂಭಿಸಿದೆ. ರವಿ ಬೆಳಗೆರೆ ಎಂಬ ವ್ಯಕ್ತಿ ಹೊತ್ತು ತಂದ ನೆನಪುಗಳ ಬುತ್ತಿ ಚಿಕ್ಕದಲ್ಲ. 

ಎರಡನೆ ವರ್ಷದ ಪಿ.ಯು.ಸಿಯ ದಿನಗಳವು. ಅವತ್ಯಾವ ಕಾರಣಕ್ಕೋ ನೆನಪಿಲ್ಲ, ಕಾಲೇಜು ಬೇಗ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಸ್ಟೇಡಿಯಂ ಬಳಿ ಚೆಂದದ ಚುರ್ಮುರಿ ಮಾಡುತ್ತಿದ್ದ ಗಾಡಿಯ ಬಳಿ ನಿಂತು ಚುರ್ಮುರಿ ತಿನ್ನುವಾಗ ಎದುರುಗಡೆ ನಗರ ಕೇಂದ್ರ ಗ್ರಂಥಾಲಯ ಅನ್ನೋ ಬೋರ್ಡು ಕಾಣಿಸಿತು. ಹುಣಸೂರಿನಲ್ಲಿದ್ದಾಗ ಅಪರೂಪಕ್ಕೆ ಲೈಬ್ರರಿಗೆ ಹೋಗುತ್ತಿದ್ದೆ, ಮಂಡ್ಯದ ಲೈಬ್ರರಿಗಿನ್ನೂ ಕಾಲಿಟ್ಟಿರಲಿಲ್ಲ. ನಡೀ ಲೈಬ್ರರಿಗಾದ್ರೂ ಹೋಗೋಣ ಅಂದ್ಕೊಂಡು ಒಳಗೆ ಕಾಲಿಟ್ಟೆ. ಒಂದಷ್ಟು ದಿನಪತ್ರಿಕೆ ತಿರುವು ಹಾಕಿ, ರೂಪತಾರ ತರಂಗ ಮಂಗಳ ತಿರುವು ಹಾಕಿದ ನಂತರ ಕಣ್ಣಿಗೆ ಬಿದ್ದಿದ್ದು ಕಪ್ಪು ಸುಂದರಿ! ಕೈಗೆತ್ತಿಕೊಂಡ ಮೊದಲ ಟ್ಯಾಬ್ಲಾಯ್ಡ್ ಪತ್ರಿಕೆ ಹಾಯ್ ಬೆಂಗಳೂರ್! ಆ ವಯಸ್ಸಲ್ಲಿ ಪತ್ರಿಕೆಯಲ್ಲಿದ್ದ ಕ್ರೈಂ – ರಾಜಕೀಯ ವರದಿಗಳ ರಂಜನೀಯ ಟೈಟಲ್ಲುಗಳು ಇಷ್ಟವಾಯ್ತೋ, ಖಾಸ್ ಬಾತ್ ಬಾಟಮ್ ಐಟಮ್ ಹಲೋ ಕೇಳಿ ಅನ್ನೋ ಹೆಸರುಗಳು ಇಷ್ಟವಾಯ್ತೋ ಈಗ ನಿರ್ಧರಿಸುವುದು ಕಷ್ಟದ ಕೆಲಸ. ಹೀಗೆ ಶುರುವಾಗಿತ್ತು ಹಾಯ್ ಬೆಂಗಳೂರ್ ಜೊತೆಗಿನ ಒಡನಾಟ.

ಕನ್ಯತ್ವವೂ ಕನ್ಯಾಪೊರೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮೊದಲಿಗೆ ನಿರಂಜನ ವಾನಳ್ಳಿ ಅಂತವರು ಅದರಲ್ಲೂ ಪತ್ರಿಕೋದ್ಯಮದ ಬಗ್ಗೆ ಶಿಕ್ಷಣ ನೀಡುವಂತವರು ಕನ್ಯತ್ವದ ಬಗ್ಗೆ ಮಾತನಾಡಿರುವುದೇ ಅತ್ಯಂತ ಅಸಹ್ಯಕರವಾದ ಮತ್ತು ಅಸಂಗತವಾದ ವಿಚಾರ.

ಅಷ್ಟಕ್ಕೂ ಈ ಕನ್ಯತ್ವಎಂದರೇನು? ಯೋನಿಯೊಳಗಿನ ಕನ್ಯಾಪೊರೆಯನ್ನು ಉಳಿಸಿಕೊಳ್ಳುವುದೇ ಕನ್ಯತ್ವವೇ ವಾನಳ್ಳಿಸರ್?

ಹೆಣ್ಣೊಬ್ಬಳ ಯೋನಿನಾಳದ ಆವರಣದ ತೆಳುವಾದ ಪೊರೆಯನ್ನು ಕನ್ಯಾಪೊರೆ ಎಂದು ಕರೆಯುವುದುಂಟು. ಯಾವತ್ತಿಗೂ ಸಂಭೋಗ ಕ್ರಿಯೆಯಲ್ಲಿ ಬಾಗವಹಿಸದ ಹೆಣ್ಣಿನ ಕನ್ಯಾಪೊರೆ ಹರಿಯುವುದಿಲ್ಲ ಎಂಭ ಭ್ರಮೆಯೊಂದು ಸಮಾಜದಲ್ಲಿ ಬೆಳೆದು ಬಂದಿದೆ.