Mar 21, 2018

ಕಾಂಗ್ರೆಸ್ಸನ್ನು ಹೊರಗಿಟ್ಟು ಹುಟ್ಟುಹಾಕುವ ಸಂಯುಕ್ತರಂಗದ ಯಶಸ್ಸು ಮರೀಚಿಕೆಯಷ್ಟೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೇಸ್ಸೇತರ ತೃತೀಯ ರಂಗ ಅಥವಾ ಸಂಯುಕ್ತರಂಗವೊಂದರ ಸ್ಥಾಪನೆಯ ಮಾತು ಮತ್ತೆ ಕೇಳಿ ಬರತೊಡಗಿದೆ. ಕೇಂದ್ರದ ಮಲತಾಯಿ ಧೋರಣೆಯ ವಿರುದ್ದ ಸಿಡಿದೆದ್ದಿರುವ ತೆಲಂಗಾಣ ಮುಖ್ಯಮಂತ್ರಿ ಶ್ರೀ ಕೆ.ಚಂದ್ರೇಖರ್ರಾವ್ ಪ್ರಸ್ತಾಪಿಸಿರುವ ಕಾಂಗ್ರೇಸ್ಸೇತರ ತೃತೀಯರಂಗವೊಂದರ ಬಗ್ಗೆ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನಜರ್ಿಯಂತವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದ ಹಲವಾರು ಪ್ರಾದೆಶಿಕಪಕ್ಷಗಳು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬಹುದೆಂಬ ನಂಬಿಕೆಯಲ್ಲಿ ರಾವ್ ಓಡಾಡುತ್ತಿದ್ದಾರೆ. ಕನರ್ಾಟಕದ ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅದ್ಯಕ್ಷರಾದ ದೇವೇಗೌಡರು ಸಹ ರಾವ್ ಯತ್ನವನ್ನು ಸ್ವಾಗತಿಸಿರುವುದು ವಿಶೇಷವಾಗಿದೆ. ಅದರಲ್ಲೂ ಉತ್ತರಪ್ರದೇಶ ಮತ್ತು ಬಿಹಾರದ ಉಪಚುನಾವಣೆಗಳಲ್ಲಿ ಬಂದ ಬಾಜಪ ವಿರೋಧ ಪಲಿತಾಂಶಗಳ ನಂತರ ಈ ವಾದಕ್ಕೆ ಮತ್ತಷ್ಟು ಪುಷ್ಠಿ ಬಂದಂತೆ ಕಾಣುತ್ತಿದೆ