Nov 26, 2013

ನೋಡುವ ‘ದೃಷ್ಟಿ’ ಬದಲಿಸಬಲ್ಲ ‘ನೈನ್ ಲೈಫ್ಸ್’



ಡಾ ಅಶೋಕ್ ಕೆ ಆರ್

ಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives).

Nov 21, 2013

ಕೇವಲ ಮನುಷ್ಯನಾಗುವುದೆಂದರೆ....

ದೇವನೂರ ಮಹಾದೇವ
(ಕೃಪೆ: ಚಂದ್ರಶೇಖರ್ ಐಜೂರರ ಫೇಸ್ಬುಕ್ ಪುಟ )
ಕನ್ನಡ ಕಾದಂಬರಿ 'ಇಂದಿರಾಬಾಯಿ'ಗೆ ಇಂದಿಗೆ ನೂರು ವರ್ಷ. ಈ ನೂರು ವರ್ಷಗಳಲ್ಲಿ ಶ್ರೇಷ್ಠವಾದ ಕಾದಂಬರಿ ಯಾವುದು ಎಂದು ತಿರುಗಿ ನೋಡಿದಾಗ- ಅದು 'ಮಲೆಗಳಲ್ಲಿ ಮದುಮಗಳು'. ಈ ಎರಡೂ ಕೃತಿಗಳಿಗೂ ಕೃತಜ್ಞತೆ ಸಲ್ಲಿಸುವುದರ ಮೂಲಕ ಮಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿರುವ- 'ಯಜಮಾನ್ಯ ಮತ್ತು ಪ್ರತಿರೋಧದ ನೆಲೆ' ಎಂಬ ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡುತ್ತಿದ್ದೇನೆ.

Nov 20, 2013

ಧರ್ಮ ಮರೆತ ನಾಡಿನಲ್ಲಿ....



ಡಾ ಅಶೋಕ್ ಕೆ ಆರ್.

ಅದು ದೈವಗಳ ನಾಡು, ಧಾರ್ಮಿಕತೆಯ ಧರ್ಮಸೂಕ್ಷ್ಮರ ನಾಡು. ಅದು ದಕ್ಷಿಣ ಕನ್ನಡ. ಹಸಿರ ಪರಿಸರದಲ್ಲಿ ಕಾನನದ ನಡುವೆ ಅರಳಿರುವ ಊರು. ದಟ್ಟ ಕಾನನ ನಮ್ಮ ಪೂರ್ವಿಕರಿಗೆ ಹುಟ್ಟಿಸಿದ ಭೀತಿಯ ಕಾರಣದಿಂದಲೋ ಏನೋ ಇಲ್ಲಿರುವ ದೇವಳಗಳ ಸಂಖೈಯೂ ಅಧಿಕ. ದೈವಾರಾಧನೆಯ ಜೊತೆಜೊತೆಗೆ ಭೂತಾರಾಧಾನೆ ಕೂಡ ಇಲ್ಲಿನ ವಿಶೇಷ. ಶಿಕ್ಷಿತರ ಅನುಪಾತ ಗಮನಿಸಿದಾಗ ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಉತ್ತಮ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ನಾಗರೀಕತೆಯ ಅತ್ಯುನ್ನತ ಮಜಲನ್ನು ಕಾಣಬೇಕಿತ್ತು ಆದರೆ ಧಾರ್ಮಿಕ ಮೂಲಭೂತವಾದತನ ಇಲ್ಲಿರುವ ಎಲ್ಲ ಧರ್ಮಗಳಲ್ಲೂ ಸಮಾನರೀತಿಯಲ್ಲಿ ಪ್ರವಹಿಸುತ್ತ ದಕ್ಷಿಣ ಕನ್ನಡಕ್ಕೆ ಮೂಲಭೂತವಾದಿಗಳ, ಸಂಕುಚಿತ ಮನೋಭಾವದವರ ಊರೆಂಬ ಅಪಖ್ಯಾತಿ ದೊರೆಯುವಂತೆ ಮಾಡಿಬಿಟ್ಟಿರುವುದು ದುರಂತ. ಒಂದು ಅಪರಾಧಕ್ಕೆ ಸಿಗುವ ಪ್ರತಿಕ್ರಿಯೆ ಅಪರಾಧಿಯ ಧರ್ಮವನ್ನಾಧರಿಸುತ್ತದೆಯೇ ಹೊರತು ಅಪರಾಧಿಯ ಕೃತ್ಯಕ್ಕಲ್ಲ ಎಂಬುದೇ ಇಲ್ಲಿನ ದುರಂತ.

Nov 9, 2013

ಗಾನ ಮುಗಿಸಿದ ಮನ್ನಾ ಡೇ



ಡಾ ಅಶೋಕ್ ಕೆ ಆರ್
ಭಾರತೀಯ ಚಲನಚಿತ್ರಗಳಿಗೂ ಸಂಗೀತ – ಹಾಡಿಗೂ ಬಿಡಿಸಲಾರದ ನಂಟು. ವಿಶ್ವದ ಇತರೆ ಚಿತ್ರೋದ್ಯಮಕ್ಕೂ ನಮ್ಮ ವಿವಿಧ ಚಿತ್ರೋದ್ಯಮಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವಿದು. ನಮ್ಮಲ್ಲೂ ಅಲ್ಲೊಂದು ಇಲ್ಲೊಂದು ಪ್ರಾಯೋಗಿಕವಾಗಿ ಹಾಡಿಲ್ಲದ ಚಿತ್ರಗಳು ಬರುತ್ತವಾದರೂ ಅವುಗಳ ಸಂಖೈ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದು ಹಾಸ್ಯ ಚಿತ್ರವಿರಲಿ, ಸಾಹಸ ಪ್ರಧಾನವಿರಲಿ, ಒಂದು ಗಂಭೀರ ಕಥೆಯ ಚಿತ್ರವಾಗಲಿ ಹಾಡುಗಳಿಲ್ಲದೆ ಭಾರತೀಯ ಚಿತ್ರಗಳು ಅಷ್ಟಾಗಿ ರುಚಿಸುವುದಿಲ್ಲ. ಶಾಸ್ತ್ರೀಯ ಸಂಗೀತ, ರಾಕ್ ಪಾಪ್ ಸಂಗೀತಗಳು ಸೀಮಿತ ಆಸಕ್ತ ಜನರನ್ನು ಮಾತ್ರ ತಲುಪಿದರೆ ಎಲ್ಲ ರೀತಿಯ ಸಂಗೀತವನ್ನು ತನ್ನದೇ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಸಿನಿಮಾರಂಗದ್ದು. ಸಂಗೀತದೊಡನೆ ಬೆರೆತ ಸಾಹಿತ್ಯವನ್ನು ಜನರ ಮನ ಮುಟ್ಟಿಸಿದ್ದು ಅತ್ಯಮೋಘ ಗಾಯಕರು.

Nov 8, 2013

ಅತ್ಯಾತುರದ ಬದುಕಿನಲ್ಲಿ ಚಿಂತನೆಗಳ ಅಬಾರ್ಷನ್!



ಡಾ ಅಶೋಕ್ ಕೆ ಆರ್.
‘ನಮ್ಮೂರ ತಿಂಡಿ’ ಎದುರಿಗಿನ ಅಂಡರ್ ಪಾಸ್. ಸಮಯ ರಾತ್ರಿ ಎಂಟು ಘಂಟೆ. ಗೆಳೆಯನೊಬ್ಬನನ್ನು ನೋಡಲು ಬೈಕಿನಲ್ಲಿ ಹೋಗುತ್ತಿದ್ದೆ. ಅಂಡರ್ ಪಾಸ್ ಕೆಳಗಿನ ಜಂಕ್ಷನ್ನಿನಲ್ಲಿ ಎಡಬದಿಯಿಂದೊಂದು ಆಟೋ ಬರುತ್ತಿತ್ತು. ಬೈಕ್ ನಿಧಾನಿಸಿದೆ. ಆಟೋ ರಸ್ತೆಯ ಮಧ್ಯೆ ಬಂದು ಮುಂದೆ ಹೋಗದೆ ನಿಂತುಬಿಟ್ಟಿತು. ‘ಥೂ ಈ ಆಟೋದವ್ರು...’ ಎಂದು ಮನದಲ್ಲೇ ಬಯ್ದುಕೊಂಡು ಹಾರ್ನ್ ಒತ್ತಿದೆ. ಪೀಕ್ ಅವರ್ರಿನ ಟ್ರಾಫಿಕ್ಕಿನಲ್ಲಿ ಮನೆಗೆ ಹೋಗಲವಣಿಸುತ್ತಿದ್ದ ನನ್ನ ಜೊತೆಯಿದ್ದ ಇತರೆ ವಾಹನದವರೂ ಹಾರ್ನ್ ಒತ್ತುವುದರಲ್ಲಿ ಹಿಂದೆ ಬೀಳಲಿಲ್ಲ. ಎರಡು ನಿಮಿಷದ ಸತತ ಹಾರ್ನ್ ಹಾವಳಿಯ ನಂತರ ಆಟೋ ನಿಧಾನಕ್ಕೆ ಮುಂದೆ ಸಾಗಿತು. ಆಟೋ ದಾಟಿ ಹೋಗುತ್ತಿದ್ದವನಿಗೆ ನಾಚಿಕೆಯಾಯಿತು.

Nov 5, 2013

ಭಾಷೆಯೊಂದರ ಜನನ ಮರಣದ ಸುತ್ತ...


ಡಾ ಅಶೋಕ್ ಕೆ ಆರ್


ಭಾವನೆಗಳ ಅಭಿವ್ಯಕ್ತಿಗೆ, ಸಂವಹನದ ಸರಾಗತೆಗಾಗಿ ಹುಟ್ಟಿದ್ದು ಭಾಷೆ. ಶಬ್ದ, ಮುಖದ ಹಾವಭಾವಗಳ ಮುಖಾಂತರ ಭಾವನೆಗಳು ವ್ಯಕ್ತವಾಗುವುದಕ್ಕೂ ಮುಂಚಿತವಾಗಿ ಕೈಸನ್ನೆ ‘ಭಾಷೆ’ಯಾಗಿ ಬಳಕೆಯಾಗುತ್ತಿತ್ತು ಎಂದು ತಿಳಿಸುತ್ತದೆ ಮಾನವನ ನಿಕಟ ಸಂಬಂಧಿ ಚಿಂಪಾಂಜಿಯ ಮೇಲೆ ನಡೆದ ಕೆಲವು ವೈಜ್ಞಾನಿಕ ಅಧ್ಯಯನಗಳು. ಕೈಸನ್ನೆ, ಹಾವಭಾವಗಳೆಲ್ಲ ಸಮ್ಮಿಲನಗೊಂಡು ಶಬ್ದಕ್ಕೊಂದು ಮಾಧುರ್ಯ ದೊರೆತು ಹುಟ್ಟಿದ್ದು ಮನುಷ್ಯ ಭಾಷೆ. ಸಾವಿರಾರು ವರುಷಗಳ ಹಿಂದೆ ಪ್ರಪಂಚದ ನಾನಾ ಕಡೆಗಳಲ್ಲಿ ನಾನಾ ರೂಪದಲ್ಲಿ ಹುಟ್ಟಿದ ಭಾಷೆಗೂ ಒಂದು ಆಯಸ್ಸಿದೆ. ದಿನನಿತ್ಯದ ಸಂಗಾತಿಯಾಗಿ ತನ್ನನ್ನು ಬಳಸುವವರ ಸಂಖ್ಯೆ ಕಡಿಮೆಯಾಗಲು ಶುರುವಾದ ದಿನವೇ ಭಾಷೆಯ ಅವನತಿಯೂ ಪ್ರಾರಂಭವಾಗುತ್ತದೆ. ಸರಿಸುಮಾರು ಹತ್ತು ಸಾವಿರ ವರುಷಗಳ ಹಿಂದೆ ಅಂದಾಜು ಇಪ್ಪತ್ತು ಸಾವಿರ ಭಾಷೆಗಳಿದ್ದವು. ಸಂಪೂರ್ಣ ನಶಿಸುತ್ತ, ಮಗದೊಂದು ಭಾಷೆಯ ಜೊತೆಗೆ ಬೆರೆತು ಹೋಗಿ ಈಗ ಉಳಿದಿರುವ ಭಾಷೆಗಳ ಸಂಖೈ ಏಳು ಸಾವಿರ ಮಾತ್ರ. ಇನ್ನೂ ಆಘಾತದ ಅಂಶವೆಂದರೆ ಅಧ್ಯಯನವೊಂದರ ಪ್ರಕಾರ ಎರಡು ವಾರಕ್ಕೊಂದು ಭಾಷೆ ವಾರಸುದಾರರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ! 2100ರ ವೇಳೆಗೆ ಇರುವ ಭಾಷೆಗಳಲ್ಲಿ ಅರ್ಧದಷ್ಟು ನಶಿಸುವ ಸಂಭವವಿದೆ!

Nov 3, 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ

medical-malpractice
ಡಾ ಅಶೋಕ್ ಕೆ ಆರ್ 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ.