Jun 24, 2018

ಪಕ್ಷಿ ಪ್ರಪಂಚ: ಕೆಮ್ಮೀಸೆ ಪಿಕಳಾರ.

ಚಿತ್ರ ೧: ಲಂಟಾನದ ಕಾಯಿಯೊಂದಿಗೆ ಪಿಕಳಾರ 

ಡಾ. ಅಶೋಕ್. ಕೆ. ಆರ್. 

ಇರುವ ಹತ್ತಲವು ರೀತಿಯ ಪಿಕಳಾರಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪಿಕಳಾರವೆಂದರೆ ಕೆಮ್ಮೀಸೆ ಪಿಕಳಾರ. ಲಂಟಾನದ ಪೊದೆಗಳೋ ಚಿಕ್ಕ ಪುಟ್ಟ ಹಣ್ಣಿನ ಗಿಡಗಳೋ ಇದ್ದುಬಿಟ್ಟರೆ ನಗರವಾಸಕ್ಕೂ ಸೈ ಎನ್ನುವಂತಹ ಪಕ್ಷಿಗಳಿವು. 


ಆಂಗ್ಲ ಹೆಸರು: Red whiskered bulbul (ರೆಡ್ ವಿಸ್ಕರ್ಡ್ ಬುಲ್ಬುಲ್) 
ವೈಜ್ಞಾನಿಕ ಹೆಸರು: Pycnonotus jocosus (ಪಿಕ್ನೋನಾಟಸ್ ಜೊಕೊಸುಸ್) 


ತಲೆಯ ಮೇಲೊಂದು ಕಪ್ಪು ಕಿರೀಟವಿದೆ, ತಲೆ ಮತ್ತು ಕೊಕ್ಕು ಕಪ್ಪು ಬಣ್ಣದ್ದು. ಕಣ್ಣಿನ ಕೆಳಗೆ ಕೆಂಪು ಪಟ್ಟಿಯಿದೆ. ಎದೆಯ ಹೆಚ್ಚಿನ ಭಾಗ ಬಿಳಿ ಬಣ್ಣದ್ದು, ಅಲ್ಲಲ್ಲಿ ತೆಳು ಕಂದು ಬಣ್ಣವನ್ನೂ ಗಮನಿಸಬಹುದು. ಎದೆಯ ಮೇಲ್ಭಾಗದಲ್ಲಿ ಬೆನ್ನಿನ ಕಂದು - ಕಪ್ಪು ಸ್ವಲ್ಪ ದೂರದವರೆಗೆ ಹರಡಿಕೊಂಡಿದೆ. ಬೆನ್ನಿನ ಮೇಲೆ ಹಾಕಿಕೊಂಡ ಟವಲ್ಲು ಎದೆಯ ಮೇಲೆ ಬಿದ್ದಂತಿದೆ ಈ ಪಟ್ಟಿ. ಬೆನ್ನು ಮತ್ತು ಬಾಲ ಕಂದು ಬಣ್ಣದ್ದು. ಹೆಣ್ಣು ಗಂಡಿನಲ್ಲಿ ವ್ಯತ್ಯಾಸಗಳಿಲ್ಲ. 

ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. 

Jun 17, 2018

ಪಕ್ಷಿ ಪ್ರಪಂಚ: ಗುಬ್ಬಚ್ಚಿ.

house sparrow female
ಹೆಣ್ಣು ಗುಬ್ಬಚ್ಚಿ
ಡಾ. ಅಶೋಕ್. ಕೆ. ಆರ್.
ಮನುಷ್ಯರ ಜೊತೆಗೆ ಸರಾಗವಾಗಿ ಬದುಕಲು ಕಲಿತು ಮನುಷ್ಯನ ವಾಸದ ರೀತಿಯಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಮಾರ್ಪಾಟುಗಳಿಂದ ಅಪಾಯಕ್ಕೊಳಗಾಗಿರುವ ಪಕ್ಷಿಗಳಲ್ಲಿ ಗುಬ್ಬಚ್ಚಿ ಪ್ರಮುಖವಾದುದು. ಆಧುನಿಕ ನಗರಗಳಿಂದ ಮರೆಯಾಗುತ್ತಿದ್ದ ಗುಬ್ಬಚ್ಚಿಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳುವ ಪ್ರಕ್ರಿಯೆಗೆ ನಿಧಾನಕ್ಕೆ ಚಾಲನೆ ನೀಡುತ್ತಿರುವಂತೆ ಕಾಣಿಸುತ್ತಿದೆ.

ಆಂಗ್ಲ ಹೆಸರು: House sparrow (ಹೌಸ್ ಸ್ಪ್ಯಾರೋ)
ವೈಜ್ಞಾನಿಕ ಹೆಸರು: Passer domesticus (ಪ್ಯಾಸರ್ ಡೊಮೆಸ್ಟಿಕಸ್)

ಪುಟ್ಟ ಮುದ್ದು ಪಕ್ಷಿಗಳಿವು. ಹೆಣ್ಣು ಗಂಡಿನ ನಡುವೆ ಹೆಚ್ಚಿನ ವ್ಯತ್ಯಾಸಗಳಿರುವುದರಿಂದಾಗಿ ಗುರುತಿಸುವಿಕೆ ಸುಲಭದ ಕೆಲಸ.

ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Jun 10, 2018

ಪಕ್ಷಿ ಪ್ರಪಂಚ: ಬಣ್ಣದ ಕೊಕ್ಕರೆ.

ಚಿತ್ರ ೧: ಮಡಿವಾಳದಲ್ಲಿ ಸಿಕ್ಕ ಬಣ್ಣದ ಕೊಕ್ಕರೆ
ಡಾ. ಅಶೋಕ್. ಕೆ. ಆರ್
ಮಂಡ್ಯ ಜಿಲ್ಲೆಯಲ್ಲಿರುವ ಕೊಕ್ಕರೆ ಬೆಳ್ಳೂರಿಗೆ ಆ ಹೆಸರು ಬರಲು ಈ ಬಣ್ಣದ ಕೊಕ್ಕರೆಯೇ ಕಾರಣ. ಚಳಿಯ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಈ ಪಕ್ಷಿಗಳು ಸಂತಾನವನ್ನು ಬೆಳೆಸಿಕೊಂಡು ಇಲ್ಲಿ ಬೇಸಿಗೆ ಶುರುವಾಗುವ ನಂತರದಲ್ಲಿ ಮರಳಿಹೋಗುತ್ತವೆ. ಕೆಲವು ಕೊಕ್ಕರೆಗಳು ಇಲ್ಲಿನ ವಾತಾವರಣಕ್ಕೆ  ಪೂರ್ಣವಾಗಿ ಹೊಂದಿಕೊಂಡು ಇಲ್ಲೇ ಶಾಶ್ವತವಾಗಿ ನೆಲೆಸುವುದೂ ಇದೆ.

ಆಂಗ್ಲ ಹೆಸರು: Painted Stork (ಪೇಂಟೆಡ್ ಸ್ಟಾರ್ಕ್)
ವೈಜ್ಞಾನಿಕ ಹೆಸರು: Mycteria Leucocephala (ಮೈಕ್ಟೀರಿಯಾ ಲ್ಯೂಕೊಕೆಫಾಲ)

Jun 4, 2018

ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಪಿಯು ಶಿಕ್ಷಣ!

ಕು.ಸ.ಮಧುಸೂದನ
ಸುದ್ದಿವಾಹಿನಿಯೊಂದರಲ್ಲಿ ಉಪಚುನಾವಣೆಯ ಪಲಿತಾಂಶ ನೋಡುತ್ತಿದ್ದಾಗ ಪ್ರಸಾರವಾದ ಜಾಹೀರಾತೊಂದು ನನ್ನ ಗಮನ ಸೆಳೆಯಿತು. ಅದು ಬೆಂಗಳೂರಿನ ಹಲವು ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ನಡೆಸುತ್ತಿರುವ ಬೃಹತ್ ಎಜುಕೇಶನ್ ಎಕ್ಸಪೊ ಕುರಿತದ್ದು. ಅದೇ ಸಮಯಕ್ಕೆ ಸರಿಯಾಗಿ ನನ್ನ ಪರಿಚಿತರೊಬ್ಬರು ಒಂದು ಸಮಸ್ಯೆಯೊಂದಿಗೆ ಮನಗೆ ಬಂದರು. ಅವರ ಮಗ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 74ರಷ್ಟು ಅಂಕ ಪಡೆದಿದ್ದರೂ ಯಾವುದೇ ಒಳ್ಳೆಯ( ಅವರ ದೃಷ್ಠಿಯಲ್ಲಿ ನೂರಕ್ಕೆ ನೂರು ಪಲಿತಾಂಶ ನೀಡುವ) ಕಾಲೇಜುಗಳಲ್ಲಿ ಅವನಿಗೆ ಸೀಟು ಸಿಗಲು ಸಾದ್ಯವಿರಲಿಲ್ಲ. ಪ್ರವೇಶದ ಅರ್ಜಿ ಪಾರಂ ತರಲು ಹೋದಾಗಲೇ ಸಿಬ್ಬಂದಿ ಈ ಬಗ್ಗೆ ಅವರಿಗೆ ಸೂಚನೆ ನೀಡಿ ಮ್ಯಾನೇಜುಮೆಂಟ್ ಕೋಟಾದಲ್ಲಿ ಒಂದೂವರೆ ಲಕ್ಷ ಕಟ್ಟಿದರೆ ಮಾತ್ರ ಸೀಟು ಸಿಗುವುದಾಗಿಯೂ, ಅದಕ್ಕೆ ಮುಂಗಡವಾಗಿ ಟೋಕನ್ ಅಡ್ವಾನ್ಸ್ ನೀಡಿ(ಸೈಟು ವ್ಯಾಪಾರ ಮಾಡುವ ರಿಯಲ್ ಎಸ್ಟೇಟ್ ದಂದೆಯವರಂತೆ) ಸೀಟು ಬುಕ್ ಮಾಡಿ ಎಂದಿದ್ದಾರೆ. ಇವರೊ ನೋಡುವ ಮತ್ತೆ ಬರುವೆ ಅಂತ ಹೇಳಿ ಇನ್ನೂ ಮೂರ್ನಾಲ್ಕು ಕಾಲೇಜುಗಳಲ್ಲಿ ವಿಚಾರಿಸಿದಾಗ ಬಹುತೇಕ ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಅಂತಹುದೇ ಉತ್ತರ ಸಿಕ್ಕಿದೆ. ಈಗೇನು ಮಾಡಲಿ ಎಂದು ಕೇಳಲು ಎಂದು ನನ್ನ ಮನೆಗೆ ಬಂದಿದ್ದರು. ನಾನು ನಿಮ್ಮ ಮಗನಿಗೆ ಸೈನ್ಸೇ ಆಗಬೇಕೆ ಆರ್ಟ್ಸ್ ಓದಲು ಆಗುವುದಿಲ್ಲವೇ ಎಂದಾಗ ಮುಖ ಕಿವುಚಿ (ನನ್ನನ್ನು ತಮ್ಮ ಹೊಸ ಶತ್ರುವಂತೆನೋಡುತ್ತ) ಏನು ಸಾರ್ ಹೀಗೆ ಹೇಳ್ತೀರಿ. ದುಡ್ಡಿಗಾಗಿ ಅವನ ಭವಿಷ್ಯ ಹಾಳು ಮಾಡೋಕಾಗುತ್ತ? ಅದಕ್ಕೆ ಬೆಲೆ ಎಲ್ಲಿದೆ? ಪಿಯುಸಿ ಆದ ಮೇಲೆ ಬಿಎ, ಎಂಎ ಬಿಟ್ಟರೆ ಬೇರೇನು ಓದೋಕಾಗುತ್ತೆ. ಅವನ್ನು ಓದಿದರೆ ಕೆಲಸ ಎಲ್ಲಿ ಸಿಗುತ್ತೆ? ಅಂತ ನನಗೇನೆ ಹತ್ತಾರು , ಉತ್ತರವಿರದ ಪ್ರಶ್ನೆಗಳನ್ನು ಕೇಳಿದರು. ಸದ್ಯದ ಸ್ಥಿತಿಯಲ್ಲಿ ಅವರ ಮಾತು ನಿಜ ಅನಿಸಿತು. ನನಗೂ ಬೇರೇನು ಹೇಳಲು ತೋಚದೆ ನೋಡುವ ತಡೆಯಿರಿ ಸೀಟುಗಳು ಅಧಿಕೃತವಾಗಿ ಅನೌನ್ಸ್ ಆಗಲಿ. ನಾನೂ ನಿಮ್ಮ ಜೊತೆ ಬರುತ್ತೇನೆ. ಹೇಗಾದರು ಮಾಡಿ ಫೀಸು ಕಡಿಮೆ ಮಾಡಿಸೋಣ ಅಂತ ಹೇಳಿ ಕಳಿಸಿ ನಿಟ್ಟುಸಿರುಬಿಟ್ಟೆ. 
ಕು.ಸ. ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Jun 3, 2018

ಪಕ್ಷಿ ಪ್ರಪಂಚ: ನೇರಳೆ ಸೂರಕ್ಕಿ

ಗಂಡು ನೇರಳೆ ಸೂರಕ್ಕಿ. 
ಡಾ. ಅಶೋಕ್.ಕೆ.ಅರ್ 
ಭಾರತದಲ್ಲಿ ರೆಕ್ಕೆಯನ್ನು ಪಟಪಟನೆ ಬಡಿಯುವ ಹಮ್ಮಿಂಗ್ ಬರ್ಡುಗಳಿಲ್ಲ. ಅವುಗಳ ಬದಲಿಗೆ ನಮ್ಮಲ್ಲಿ ವಿಧವಿಧದ ಸೂರಕ್ಕಿಗಳಿವೆ. ಸೂರಕ್ಕಿಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವುದು ನೇರಳೆ ಸೂರಕ್ಕಿ.

ಆಂಗ್ಲ ಹೆಸರು: - Purple sunbird (ಪರ್ಪಲ್ ಸನ್ ಬರ್ಡ್)

ವೈಜ್ನಾನಿಕ ಹೆಸರು: - Cinnyris asiaticus (ಸಿನಿರಿಸ್ ಏಷಿಯಾಟಿಕಸ್)

ಗುಬ್ಬಿ ಗಾತ್ರದ ಪಕ್ಷಿಯಿದು. ಹೂವಿನ ಮಕರಂದವನ್ನು ಹೀರಲು ಅನುಕೂಲ ಮಾಡಿಕೊಡುವಂತೆ ಚೂರೇ ಚೂರು ಬಾಗಿದ ಉದ್ದನೆಯ ಕೊಕ್ಕಿದೆ. ನೇರಳೆ ಸೂರಕ್ಕಿ ಎಂಬ ಹೆಸರು ಬಂದಿರುವುದು ಗಂಡು ಪಕ್ಷಿಯ ಬಣ್ಣದ ದೆಸೆಯಿಂದ. ದೂರದಿಂದ ನೋಡಿದರೆ, ಪಕ್ಷಿಯು ನೆರಳಿನಲ್ಲಿದ್ದಾಗ ಗಮನಿಸಿದರೆ ಇಡೀ ಪಕ್ಷಿ ಕಪ್ಪಾಗಿ ಕಾಣುತ್ತದೆ. ಸೂರ್ಯನ ಬೆಳಕಿನಲ್ಲಿ ಪಕ್ಷಿ ದೇಹ ಮಿಂದಾಗಷ್ಟೇ ತಲೆಯ ಭಾಗ ಮತ್ತು ದೇಹದ ಮೇಲ್ಭಾಗ ನೇರಳೆ ಬಣ್ಣದಿಂದ ಹೊಳೆಯುತ್ತಿರುವುದನ್ನು ಗಮನಿಸಬಹುದು.
Click here to read in English.

Jun 2, 2018

ಕಥೆ: ತಂದೂರಿ.

ಅಭಿಗೌಡ
ಊರಲ್ಲಿ ಯಾರದೇ ಬರ್ತ್‍ಡೇ ಆಚರಣೆಯಾದ್ರು ಶಿವನ ಅಂಗಡಿ ಕಬಾಬಿಗೆ ಭಾರಿ ಬೇಡಿಕೆ. ಏಕೆಂದರೆ ಕಬಾಬ್ ಜೊತೆ ಕಾಂಪ್ಲಿಮೆಂಟರಿ ಕಾಪಿ ಥರ ಒಂದು ತಂದೂರಿ ಚಿಕನ್ ಕೊಡುತ್ತಿದ್ದ. ಕೇಕ್ ಕತ್ತರಿಸುವುದರ ಬದಲು ಅದನ್ನೆ ಆತ ಮಾರ್ಕ್ ಮಾಡಿರುವ ಜಾಗದಲ್ಲಿ ಚಾಕುವಿನಿಂದ ಕಟ್ ಮಾಡಿದರೆ ಸರಾಗವಾಗಿ ಕೇಕ್ ಪೀಸ್‍ನಂತೆಯೇ ಎಲ್ಲರ ಬಾಯಿಗು ಹಾಕಿ ಬರ್ತ್‍ಡೇ ಸಂಭ್ರಮ ಆಚರಿಸಿಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಇರಿಸು-ಮುರಿಸು ತೋರಿದ ಜನ ದಿನೇ ದಿನೇ ಕೇಕ್ ಜೊತೆ ಇದನ್ನು ಕತ್ತರಿಸಲು ಶುರು ಮಾಡಿದ್ರು. ಈಗ ಕೇಕ್ ಬಿಟ್ಟೇ ಬಿಟ್ಟಿದ್ದಾರೆ. ಜನರೇ ಅವರಿಗೆ ಇಷ್ಟವಾದ ಮಾಂಸದ ತುಂಡು ತಂದು ಬರ್ತ್‍ಡೇ ಪಾರ್ಟಿಲಿ ಕತ್ತರಿಸಲು ರೆಡಿ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಹೆಚ್ಚು ಕೇಕ್ ಸೇಲ್ ಆಗ್ತಿದ್ದ ಬೇಕರಿಯ ರವೀಂದ್ರ ಸ್ವಲ್ಪ ದಿನ ‘ಛೇ ಕೇಕ್ ಬಿಸಿನೆಸ್‍ಗೆ ಕುತ್ ತಂದ್ ಬಿಟ್ನಲ್ಲ ಈ ಕಬಾಬ್ ಶಿವ’ ಎಂದು ಮನದೊಳಗೆ ಗೊಣಗಿಕೊಳ್ಳುತ್ತಿದ್ದರು. ಆತ ನೀಡುತ್ತಿದ್ದ ಆ ಬರ್ತ್‍ಡೇ ಸ್ಪೆಷಲ್ ತಂದೂರಿ ಚಿಕನ್ ರುಚಿ ನೆನಪಾದೊಡನೆ ಯಾರಾದ್ರು ಬರ್ತ್‍ಡೇಗೆ ಕರೆದಿದ್ದಾರ ಎಂದು ನೆನೆಪಿಸಿಕೊಳ್ಳುತ್ತಿದ್ದ.
 
ಇನ್ನಷ್ಟು ಕತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Jun 1, 2018

ಹೋಗಿಬನ್ನಿ ಸಿದ್ದರಾಮಯ್ಯನವರೆ......

ಕು.ಸ.ಮಧುಸೂದನ ರಂಗೆನಹಳ್ಳಿ
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.