Feb 27, 2017

ಡೈರಿ-ಸಿ.ಡಿ.ಇತ್ಯಾದಿಗಳು ಮತ್ತು ರಾಜಕೀಯ ಪಕ್ಷಗಳ ಪಾರದರ್ಶಕತೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವಕ್ಕೆ ರಾಜಕೀಯ ಪಕ್ಷಗಳೇ ಜೀವಾಳ. ಅದರಲ್ಲೂ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದೆ ಸಾಗಲು ಸಿದ್ದಾಂತಗಳ ಮೂಲದಿಂದ ಹುಟ್ಟಿದ ಬಲಾಢ್ಯ ರಾಜಕೀಯ ಪಕ್ಷಗಳು ಅತ್ಯವಶ್ಯ. ಹಾಗೆ ಪಕ್ಷಗಳ ಸಂಖ್ಯಾದೃಷ್ಠಿಯಿಂದ ನೋಡಿದರೆ ನಾವು ಭಾರತೀಯರು ಶ್ರೀಮಂತರೇನೆ! ಯಾಕೆಂದರೆ ನಮ್ಮ ದೇಶದಲ್ಲಿ ಈಗ 7 ರಾಷ್ಟ್ರೀಯ ಪಕ್ಷಗಳು ಹಾಗು ಸುಮಾರು 48 ಮಾನ್ಯತೆ ಪಡೆಯಲ್ಪಟ್ಟ ಪ್ರಾದೇಶಿಕ ಪಕ್ಷಗಳು ಇವೆ, ಇನ್ನು ನೊಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ನೂರಕ್ಕೂ ಹೆಚ್ಚು ಪಕ್ಷಗಳಿವೆ. ಸಾವಿರಾರು ಜಾತಿ ಉಪಜಾತಿಗಳಿರುವನಮ್ಮಲ್ಲಿ ಮುಂದೊಂದು ದಿನ ಜಾತಿಗಳ ಸಂಖ್ಯೆಯನ್ನೂ ಮೀರಿ ಪಕ್ಷಗಳು ಸೃಷ್ಠಿಯಾದರೆ ಅಚ್ಚರಿ ಪಡಬೇಕಿಲ್ಲ. ಇವೆಲ್ಲ ಮಾತುಗಳನ್ನು ಈಗ ಹೇಳಲು ಕಾರಣ. ಕಳೆದೊಂದು ವಾರದಿಂದ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಠಿಸಿರುವ ಕಾಂಗ್ರೆಸ್ ಪರಿಷದ್ ಸದಸ್ಯರೊಬ್ಬರ ಡೈರಿ ಪ್ರಕರಣ. ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿರುವ ಈ ಡೈರಿಯಲ್ಲಿ ಕಾಂಗ್ರೆಸ್ಸಿನ ಸಚಿವರುಗಳಿಂದ ಹಣ ಸಂಗ್ರಹಿಸಿ ಪಕ್ಷದ ಹೈಕಮ್ಯಾಂಡಿಗೆ ದೇಣಿಗೆ ನೀಡಿದ್ದಾರೆಂಬ ವಿವರಗಳು ಅದರಲ್ಲಿವೆಯೆಂದು ಬಾಜಪದ ರಾಜ್ಯಾದ್ಯಕ್ಷರಾದ ಶ್ರೀ ಯಡಿಯೂರಪ್ಪನವರು ಆರೋಪಿಸಿದ ಬೆನ್ನಲ್ಲೆ ಆಂಗ್ಲಬಾಷೆಯ ವಾಹಿನಿಯೊಂದು ಸದರಿ ಡೈರಿಯದು ಎನ್ನಲಾದ ಕೆಲವು ಪುಟಗಳನ್ನು ಪ್ರಕಟಿಸಿದೆ. ಇದೀಗ ಇದು ಬಾರಿ ವಿವಾದಕ್ಕೆ ಕಾರಣವಾಗಿದ್ದು, ಆರೋಪ ಪ್ರತ್ಯಾರೋಪಗಳು ಎಗ್ಗಿರದೆ ನಡೆಯುತ್ತಿವೆ. ಈ ಡೈರಿಯ ಸತ್ಯಾಸತ್ಯತೆಯನ್ನಾಗಲಿ, ಅದರಲ್ಲಿರುವ ಹೆಸರು ಮೊತ್ತಗಳ ಬಗ್ಗೆ ನಾನು ಮಾತನಾಡಲು ಇಲ್ಲಿ ಇಚ್ಚಿಸುವುದಿಲ್ಲ. ನನ್ನ ಕುತೂಹಲ ಮತ್ತು ವಿಷಾದ ಇರುವುದು ಈ ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಹೈಕಮ್ಯಾಂಡಿಗೆ ಪಕ್ಷವನ್ನು ನಡೆಸಲು ಮತ್ತು ಇತರೆ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಹಣ ನೀಡುತ್ತಲೇ ಬಂದಿರುವ ಕೆಟ್ಟ ಸಂಪ್ರದಾಯದ ಬಗ್ಗೆ ಮಾತ್ರ. 

ದುಸ್ವಪ್ನ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅದೇಗೆ ಬಂದುಬಿಟ್ಟೆ ನೀನು
ಅಮಂಗಳಕರವಾದ ಕನಸೊಂದು
ಮುಂಜಾನೆಯೊಳಗೆ ನನಸಾಗಿಬಿಡುವಂತೆ
ಅದ್ಯಾವ ಎದೆಗಾರಿಕೆಯ ಅಮಲು ನಿನ್ನದು

Feb 24, 2017

ರಾಜಕೀಯ ಪಕ್ಷಗಳ ಮ್ಯಾನೇಜರುಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೆಸ್ಸಿಗೆ ಬೇಕಾಗಿರುವುದು ಮ್ಯಾನೇಜರುಗಳು ಮಾತ್ರ, ನಾಯಕರುಗಳಲ್ಲ! ಮಾಜಿಮುಖ್ಯಮಂತ್ರಿಗಳಾದ ಶ್ರೀಎಸ್.ಎಂ.ಕೃಷ್ಣಾ ಎವರು ಹೇಳಿದ ಈ ಮಾತು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆಯೊ ಬಿಡುತ್ತದೆಯೊ ಗೊತ್ತಿಲ್ಲ. ಆದರೆ ಜನರಲ್ ಆಗಿ ನೋಡಿದರೆ ಈ ಮಾತು ಬಹುತೇಕ ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯಾಕೆಂದರೆ ಇವತ್ತು ಒಂದು ರಾಜಕೀಯ ಪಕ್ಷವನ್ನು ನಡೆಸಲು ನಾಯಕನಾಗಲಿ, ಸಿದ್ದಾಂತವಾಗಲಿ ಬೇಕಾಗಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ನಾಯಕನೊಬ್ಬನ ಮರ್ಜಿಯಿಂದ, ಸಿದ್ದಾಂತಗಳ ಹಂಗಿನಿಂದಲೇ ಒಂದು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಕಾಲ ಬದಲಾಗಿದೆ. ಈಗೇನಿದ್ದರೂ ಪಕ್ಷದ ಕಛೇರಿ ಮತ್ತು ಅದರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬಲ್ಲ, ಜಾತಿಜಾತಿಗಳ ಸಮಾವೇಶವನ್ನು ಸಂಘಟಿಸಬಲ್ಲ, ಚುನಾವಣಾ ಸಮಯದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಬಲ್ಲ, ಸ್ಪರ್ದಿಸಿದ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಅಗತ್ಯವಿರುವ ಹಣವನ್ನು ಅಥವಾ ಪಕ್ಷದ ನಿದಿಯನ್ನು ಕ್ರೋಡೀಕರಿಸುವ ಮತ್ತು ವಿತರಿಸುವ ಸಾಮಥ್ರ್ಯವುಳ್ಳ ವ್ಯಕ್ತಿಯೊಬ್ಬ ಸಹಜವಾಗಿಯೇ ಪಕ್ಷದ ನಾಯಕನಾಗಿ ಬಿಡುವುದು ಇವತ್ತಿನ ರಾಜಕಾರಣದ ಶೈಲಿಯಾಗಿದೆ. ಇಂಡಿಯಾದ ರಾಜಕೀಯದಲ್ಲಿ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ತೀರಾ ಇತ್ತೀಚಿನದೆ ಒಂದು ನಿದರ್ಶನವೆಂದರೆ, ತಮಿಳುನಾಡಿನ ರಾಜಕೀಯದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ವಹಿಸಿದ ಪಾತ್ರ!

Feb 19, 2017

ಅಲೆಮಾರಿಯ ಹಾದಿಯೊಳಗೆ……

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾವ ಅಪರಿಚಿತ ಹಾದಿಯಲಿ ಅಡ್ಡಾಡಿದೆ?
ನಡೆದಷ್ಟೂ ಸಾಗದ ಪಯಣ
ಕಲ್ಲು ಮುಳ್ಳುಗಳ ಸಹಯಾನ
ಮುಂದೆ ಹೋಗಿ ತಲುಪಿದವರು ಕಾಯಲಿಲ್ಲ ನಮ್ಮ ಬರುವಿಕೆಗೆ

Feb 18, 2017

ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಡಾ. ಸುಶಿ ಕಾಡನಕುಪ್ಪೆ
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್‌ನ್‌ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು. 

ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ. 

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕು ನೂರಾ ಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ ಕೇಂದ್ರ ಸುಮಾರು ಒಂದು ಸಾವಿರದ ಏಳುನೂರು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು ಸಾವಿರ ಕೋಟಿರೂಪಾಯಿಗಳನ್ನು! ಇರಲಿ, ಬಿಡುಗಡೆಯಾದ ಪರಿಹಾರ ಮೊತ್ತದ ಬಗ್ಗೆ ನಾನಿಲ್ಲ ಮಾತನಾಡಲು ಇಚ್ಚಿಸುವುದಿಲ್ಲ. ನನ್ನ ತಕರಾರು ಇರುವುದು ಬರದ ಅಧ್ಯಯನಕ್ಕೆಂದು ರಾಜ್ಯಗಳಗೆ ಬೇಟಿ ನೀಡುವ ಕೇಂದ್ರದ ತಂಡಗಳು ಬರಪ್ರದೇಶಗಳ ವೀಕ್ಷಣೆ ಮಾಡುವ ರೀತಿಯ ಬಗ್ಗೆ.

Feb 14, 2017

ಸಮಾಜದ ಕ್ರೌರ್ಯದ ಗುಂಡಿಯೊಳಗಿಳಿಸುವ 'ಅಮರಾವತಿ'

ಡಾ. ಅಶೋಕ್. ಕೆ. ಆರ್
ಕನ್ನಡದಲ್ಲಿ ಇಂತಹುದೊಂದು ಹಸಿ ಹಸಿ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿನ್ನೆ ರಾತ್ರಿ ಮೂಗಿಗಂಟಿದ ಮಲದ ಗುಂಡಿಯ ವಾಸನೆಯು ಇನ್ನೂ ಹೋಗಿಲ್ಲ ಎನ್ನುವುದಷ್ಟೇ ಸಾಕು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲು. ಪೌರ ಕಾರ್ಮಿಕರ ಬಗ್ಗೆ ವರದಿಗಳು ಬರುತ್ತವೆ, ಡಾಕ್ಯುಮೆಂಟರಿಗಳೂ ಸಿಗುತ್ತವೆ, ಅವರ ಸುತ್ತಲೇ ಸುತ್ತುವ ಪೂರ್ಣ ಪ್ರಮಾಣದ ಚಿತ್ರವೊಂದು ಇಲ್ಲಿಯವರೆಗಂತೂ ಬಂದಂತಿಲ್ಲ. ಪೌರ ಕಾರ್ಮಿಕರ ಬದುಕಿನ ಸಂಗತಿಗಳನ್ನು ಕತೆಯಾಗಿಸಿ ಸಿನಿಮಾ ಮಾಡುವ ಧೈರ್ಯವನ್ನು ನಿರ್ದೇಶಕ ಗಿರಿರಾಜ್ ತೆಗೆದುಕೊಂಡಿರುವುದರಲ್ಲಿ ಹೆಚ್ಚಿನ ಅಚ್ಚರಿಯೇನಿಲ್ಲ. ನವಿಲಾದವರು ಎಂಬ ಯ್ಯೂಟ್ಯೂಬ್ ಸಿನಿಮಾ, ಜಟ್ಟ, ಮೈತ್ರಿ ಚಿತ್ರಗಳಲ್ಲೂ ಅವರು ವಿಭಿನ್ನ ಕತೆಯನ್ನೇ ಆಯ್ದುಕೊಂಡಿದ್ದರು. ಮುಖ್ಯವಾಹಿನಿಯ ಜನರು ನೋಡದ ಬದುಕನ್ನು, ಊಹಿಸದ ಜೀವನ ರೀತಿಯನ್ನು ತೆರೆಯ ಮೇಲೆ ನೇಯ್ದಿದ್ದರು. ಆ ಎಲ್ಲಾ ಸಿನಿಮಾಗಳಿಗಿಂತಲೂ ಕಷ್ಟಕರವಾದ ಕತೆಯನ್ನು ಈ ಬಾರಿ ಆಯ್ದುಕೊಂಡಿದ್ದಾರೆ, ಅದರಲ್ಲವರು ಸಂಪೂರ್ಣವಾಗಿ ಗೆದ್ದಿದ್ದಾರಾ?

ಮಹಾರಾಷ್ಟ್ರ-ಸ್ಥಳೀಯ ಚುನಾವಣೆಗಳು: ಬಾಜಪ-ಶಿವಸೇನೆಗಳ ಪ್ರತ್ಯೇಕ ಸ್ಪರ್ದೆಯು, ಕಾಂಗ್ರೆಸ್ಸಿಗೆ ಗೆಲ್ಲಲೇಬೇಕಾದ ಅನಿವಾರ್ಯತೆಯೂ!

ಕು.ಸ.ಮಧುಸೂದನ್
ಇದೇ ತಿಂಗಳ 16ನೇ ಮತ್ತು 21ನೇ ತಾರೀಖಿನಂದು ಮಹಾರಾಷ್ಟ್ರದ 10ಮುನ್ಸಿಪಲ್ ಕೌನ್ಸಿಲ್ಲುಗಳಿಗೆ, 283 ಪಂಚಾಯತ್ ಸಮಿತಿಗಳಿಗೆ, 26 ಜಿಲ್ಲಾ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಬಹು ಪ್ರಮುಖವಾದದ್ದು ಮುಂಬೈ ನಗರದ ಆಡಳಿತದ ಹೊಣೆ ಇರುವ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳಾಗಿವೆ. ಇದಕ್ಕೆ ಕಾರಣಗಳೂ ಇವೆ:

ಮುಂಬೈ ಇಂಡಿಯಾದ ವಾಣಿಜ್ಯ ನಗರಿಯಾಗಿದ್ದು ಈ ನಗರದ ಆಡಳಿತ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ದೇಶದ ಹಲವಾರು ಪುಟ್ಟ ರಾಜ್ಯಗಳ ಬಜೆಟ್ಟಿಗಿಂತ ಈ ನಗರ ಪಾಲಿಕೆಯ ಬಜೆಟ್ ದೊಡ್ಡದಿದ್ದು ವಾರ್ಷಿಕವಾಗಿ ಲಕ್ಷಾಂತರ ಕೋಟಿಗಳ ಆಯವ್ಯಯ ಮಂಡನೆಯಾಗುತ್ತಿದೆ. ಇವೆಲ್ಲವನ್ನೂ ಮೀರಿ ಮುಂಬೈ ನಗರದಲ್ಲಿ ದೇಶದ ಎಲ್ಲಾ ಭಾಗಗಳ ಜನರು ವಾಸವಾಗಿದ್ದು, ಒಂದು ಮಿನಿ ಇಂಡಿಯಾ ಎನ್ನಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ನೂರಾರು ಉದ್ಯಮಗಳು ಇಲ್ಲವೆ. ಹೀಗಾಗಿ ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಮುಂಬೈ ನಗರ ಪಾಲಿಕೆಯ ಚುನಾವಣೆಗಳಿಗೆ ವಿಶೇಷ ಮಹತ್ವ ಇದೆ.

Feb 1, 2017

ಬಾಜಪದ ಪಾಲಿಗೆ ಮಹತ್ತರವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಇನ್ನಿರದ ಪ್ರಯತ್ನ ಮಾಡುತ್ತಿದೆ.ಇದೀಗ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಈಗಾಗಲೇ ಎರಡು ರಾಜ್ಯಗಳಲ್ಲಿ ಬಾಜಪ ಆಳ್ವಿಕೆ ನಡೆಸುತ್ತಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಅದು ಎದುರಿಸುತ್ತಿದೆ.ಹಿಮಾಚಲಪ್ರದೇಶ ಮತ್ತು ಮಣಿಪುರದಂತಹ ಪುಟ್ಟ ರಾಜ್ಯಗಳ ಪಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಅಂತಹ ಕಂಪನಗಳನ್ನು ಉಂಟು ಮಾಡಲಾರವು. ಇಂತಹ ಸನ್ನಿವೇಶದಲ್ಲಿ, ಅದೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸರಿಸುಮಾರು ಮೂರುವರ್ಷಗಳಾಗುತ್ತಿರುವ ಈ ಸಮಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ಬಾಜಪದ ಪಾಲಿಗೆ ಮಹತ್ವದ್ದಾಗಿವೆ.ಉತ್ತರಪ್ರದೇಶವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಾಜಪಕ್ಕೆ ಇರಲು ಎರಡು ಮುಖ್ಯ ಕಾರಣಗಳಿವೆ. ಅವೆಂದರೆ:

ಪ್ರೀತಿಯ ಕನವರಿಕೆ.

ನಾಗಪ್ಪ.ಕೆ.ಮಾದರ
ಮನಸ್ಸಿನ ಭಾವದಿ ಕಲರವ ಮೂಡಿಸಿ 
ಬೆಳದಿಂಗಳ ಬೆಳಕು ನೀ ತಾಗಿಸಿ
ಸವಿ ನುಡಿಯ ನುಡಿಯಲು ಬಲ್ಲೆಯಾ 
ಜೀವದ ಗೆಳತಿಯೇ!