ನಾಗಪ್ಪ.ಕೆ.ಮಾದರ
ಮನಸ್ಸಿನ ಭಾವದಿ ಕಲರವ ಮೂಡಿಸಿ
ಬೆಳದಿಂಗಳ ಬೆಳಕು ನೀ ತಾಗಿಸಿ
ಸವಿ ನುಡಿಯ ನುಡಿಯಲು ಬಲ್ಲೆಯಾ
ನೀ ಮಾಡಿದ ಮೋಡಿಗೆ
ಸವಿ ಕನಸುಗಳು ಸಹ
ಪದೇ ಪದೇ ಮನವ ಸಾರಿ ಸಾರಿ ಕೆರಳಿಸುತ್ತಿವೆ
ನಿನ್ನಯ ಇಂಪಾದ ಸ್ವರ ಮಾಧುರ್ಯಕ್ಕೆ
ನನ್ನ ಹೃದಯದ ವೀಣೆ ನಾದ ಹೊಮ್ಮಿಸುತ್ತಿದೆ.
ಕಣ್ಣರಳಿಸಿ ನೋಡುವ ಮುನ್ನ
ಬಯಕೆಯ ಅರಿಯಬಾರದೆ ನನ್ನ ಒಲುಮೆ
ನೀ ಆಡಿಸುವ ಆಟಕ್ಕೆ
ಪಾತ್ರದ ಗೊಂಬೆಯ ಹಾಗೆ ಆಡುತ್ತಲಿರುವೆ
ಓ ನನ್ನ ಪ್ರೇಮದರಸಿಯೇ
ಒಂದಿರುಳು ಸಹಿಸದ ಮನಸ್ಸಿಗೆ
ಏಕೆ ಗಾಯವ ಮಾಡುತ್ತಿರುವೆ
ಪ್ರೀತಿಯ ದೋಣಿಯಲ್ಲಿ ಕುಳಿತು
ನನ್ನ ಹೃದಯದ
ಪ್ರೀತಿಯನ್ನು ದಡಕ್ಕೆ ಸೇರಿಸಬಾರದೇ ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ