Dec 31, 2014

ವಾಡಿ ಜಂಕ್ಷನ್ .... ಭಾಗ 8

wadi junction
Dr Ashok K R
ಇದೇನಾಗೋಯ್ತು ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’ ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’ ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.

Dec 27, 2014

ಅಂಕೋಲಾ ಕಾರವಾರ ಸುತ್ತಾ ಮುತ್ತಾ

honey beach
ಹನಿ ಬೀಚ್
Umesh Mundalli Naik
ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾಗಿದೆ. ಸ್ವತಂತ್ರ ಹೋರಾಟದಲ್ಲಿ ಇಲ್ಲಿನ ಪಾತ್ರ ಅತಿಮುಖ್ಯವಾಗಿದೆ. ಕಡಲ ಸನಿಹದ ಗುಡ್ಡಗಳಲ್ಲಿ ಬೆಳೆಯುವ ಅಂಕೋಲೆ ಮರದಿಂದ ಊರಿಗೆ ಹೆಸರು ಬಂದಿದೆ. ಕಾರವಾರದಿಂದ 34ಕಿ.ಮೀ. ದೂರದಲ್ಲಿರುವ ತಾಲೂಕಿನ ಕೇಂದ್ರ.

ಹಿಂದಿರುಗಿ ನೋಡಿದಾಗ

Dr Ashok K R
ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ನಡೆಸಿದ ಪೈಶಾಚಿಕ ಕೃತ್ಯ ಧರ್ಮ ದೇಶಗಳ ಗಡಿ ದಾಟಿ ಮೂಡಿಸಿದ ಆಘಾತ, ಸತ್ತ ಪುಟ್ಟ ಮಕ್ಕಳ ಬಗೆಗೆ ಬೆಳೆದ ಆರ್ದ್ಯ ಭಾವದ ಕಣ್ಣೀರು ಒಣಗುವ ಮುನ್ನವೇ 2014ಕ್ಕೆ ತೆರೆಬೀಳಲಿದೆ. ಹಿಂದಿರುಗಿ ನೋಡಿದಾಗ ನೆನಪಾಗುವ ಸಂಗತಿಗಳು ಅನೇಕ. ಭಾರತದ ಮಟ್ಟಿಗೆ ರಾಜಕೀಯವಾಗಿ ಒಂದು ಪಕ್ಷ ಉತ್ತುಂಗಕ್ಕೇರಿದರೆ ಮತ್ತೊಂದು ಪಕ್ಷ ಪಾತಾಳಕ್ಕಿಳಿದಿದೆ. ದಶಕಗಳ ನಂತರ ಏಕಪಕ್ಷ ಬಹುಮತ ಪಡೆದಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸಾಧನೆ. ಹಿಂದೆಂದೂ ಕಾಣದಷ್ಟು ಕಡಿಮೆ ಸೀಟುಗಳನ್ನು ದಕ್ಕಿಸಿಕೊಂಡದ್ದು ಕಾಂಗ್ರೆಸ್ಸಿನ ಸಾಧನೆ! ಮಂಗಳಯಾನದ ಯಶಸ್ಸು ಇಡೀ ವಿಶ್ವ ಭಾರತದ ತಂತ್ರಜ್ಞಾನದೆಡೆಗೆ ಗಮನಹರಿಸುವಂತೆ ಮಾಡಿತು.

Dec 22, 2014

ಮತಾಂತರವೂ ತಪ್ಪಲ್ಲ ಮರುಮತಾಂತರವೂ ತಪ್ಪಲ್ಲ; ಆದರೆ?

religious conversion
Dr Ashok K R
ಅಭಿವೃದ್ಧಿಯ ಹೆಸರಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ‘ಅಭಿವೃದ್ಧಿ’ಯ ಪಥದಿಂದ ಪಕ್ಕಕ್ಕೆ ಸರಿದು ತನ್ನ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್ ಮತ್ತದರ ಪರಿವಾರದ ಇತರ ಸಂಸ್ಥೆಗಳ ತಾಳಕ್ಕೆ ಕುಣಿಯಲು ಸಿದ್ಧತೆಗಳು ನಡೆಯುತ್ತಿವೆಯಾ? ಇಂತಹುದೊಂದು ಅನುಮಾನಕ್ಕೆ ಕಾರಣವಾಗುವ ಅನೇಕ ಬಿಡಿ ಬಿಡಿ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿರುವುದು ಕಾಕತಾಳೀಯವಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ, ಕ್ರಿಸ್ ಮಸ್ ದಿನದ ರಜಾ ವಿವಾದ, ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿಸುವ ಹೇಳಿಕೆಗಳು, ಉತ್ತರಪ್ರದೇಶದಲ್ಲಿ ಠುಸ್ಸೆಂದ ಲವ್ ಜೆಹಾದ್ ವಿವಾದ ಮತ್ತೀಗ ಪರಿವಾರದ ವಿವಿಧ ಅಂಗಸಂಸ್ಥೆಗಳು ನಡೆಸುತ್ತಿರುವ ‘ಘರ್ ವಾಪಸಿ’ ಎಂಬ ಮರುಮತಾಂತರದ ವಿವಾದಗಳೆಲ್ಲವೂ ಬಿಜೆಪಿಯೆಂದರೆ ಧರ್ಮಧಾರಿತ ರಾಜಕಾರಣ ಮಾಡುವುದಕ್ಕಷ್ಟೇ ಸರಿ ಎಂಬ ಆರೋಪಕ್ಕೆ ಪೂರಕವಾಗಿಯೇ ಇವೆ. ‘ಘರ್ ವಾಪಸಿ’ ಎಂಬ ಕಾರ್ಯಕ್ರಮ ಮುಂಚೆಯೂ ಅಲ್ಲಲ್ಲಿ ನಡೆದಿತ್ತು, ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರಕಾರವಿರುವಾಗ ಅದಕ್ಕೆ ಮತ್ತಷ್ಟು ರಂಗು ಬಂದಿದೆ. ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತ್ತೊಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗುವ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೊರತುಪಡಿಸಿದರೆ ಹೆಚ್ಚೇನೂ ವ್ಯತ್ಯಾಸಗಳು ಗೋಚರಿಸುತ್ತಿಲ್ಲ.

Dec 21, 2014

ದಾಂಪತ್ಯ ಗೀತೆ

ಉಮೇಶ ಮುಂಡಳ್ಳಿ ಭಟ್ಕಳ
ತವರು ಸಿರಿಗಿಂತ
ನಿಮ್ಮ ಮನ ಹಿರಿದೆನಗೆ
ನಿಮ್ಮ ಎದೆ ಆಸರೆಯು 
ಒಲವು ನನಗೆ.

Dec 19, 2014

ನಂಬಿಕೆಯ ಸೌಧ

ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು.  ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.

Dec 18, 2014

ಸ್ವಚ್ಛತೆಯ ಕಾರ್ಮಿಕರಿಗೆ ಬಿ.ಬಿ.ಎಂ.ಪಿಯ ‘ಗೌರವ’

pourakarmikas protest
ಸಂಬಳ ಕೇಳುತ್ತಿದ್ದೇವೆ ಭಿಕ್ಷೆಯಲ್ಲ
 ಇಂಗ್ಲೀಷ್ ಮೂಲ: ರವಿ ಕೃಷ್ಣರೆಡ್ಡಿ
ಅನುವಾದ: ಡಾ. ಅಶೋಕ್.ಕೆ.ಆರ್
ಈ ದೌರ್ಜನ್ಯದ ಬಗ್ಗೆ ಬೆಂಗಳೂರಿಗರಿಗೆ ನಾಚಿಕೆಯಾಗಬೇಕು. ಮೂರು ವಾರ್ಡಿನ ಇನ್ನೂರು ಮಂದಿ ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಸಿಗುವ ಕನಿಷ್ಠ ಸಂಬಳಕ್ಕಾಗಿ ಈ ಪೌರಕಾರ್ಮಿಕರು ಈ ವರುಷದಲ್ಲಿದು ಏಳನೇ ಬಾರಿ ಪ್ರತಿಭಟನೆಯ ಹಾದಿ ಹಿಡಿದಿರುವುದು. ಇಡೀ ನಗರದಲ್ಲಿ ಇಂಥವರ ಸಂಖೈ ಸಾವಿರದ ಆಸುಪಾಸಿನಲ್ಲಿರಬಹುದು.

ಆರಂಭ ಚಿತ್ರದ ಹಾಡುಗಳ ವೀಡಿಯೋ ಯೂಟ್ಯೂಬಿನಲ್ಲಿ ಲಭ್ಯ

ಶರ ಪ್ರೊಡಕ್ಷನ್ಸ್ ಬ್ಯಾನರ್ರಿನಡಿಯಲ್ಲಿ ಡಿ.ಗಣೇಶ್ ವಿ. ನಾಗೇನಹಳ್ಳಿ ನಿರ್ಮಿಸುತ್ತಿರುವ ಎಸ್. ಅಭಿ ಹನಕೆರೆ ನಿರ್ದೇಶನದ  "ಆರಂಭ - The Last Chance" ಚಿತ್ರದ ಹಾಡುಗಳ ವೀಡಿಯೋ, ಟ್ರೇಲರ್ ಮತ್ತು ಟೀಸರ್ ಆಲ್ಫಾ ಡಿಜಿಟೆಕ್ ಮೂಲಕ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಒಂದು ಭಾಗವಾಗಿ 'ಹಿಂಗ್ಯಾಕೆ'ಯೂ ಇರುವುದರಿಂದ ಹಾಡುಗಳ ವಿಮರ್ಶೆಯನ್ನು ನಾವೇ ಮಾಡುವುದು ಸಾಧುವಲ್ಲವಲ್ಲವೇ? ಕೇಳಿ ಕಮೆಂಟಿಸಿ ಇಷ್ಟವಾದರೆ ನಿಮ್ಮ ಸ್ನೇಹಿತರ ವಲಯದಲ್ಲಿ ಹಂಚಿಕೊಳ್ಳಿ. ಥೂ ಸರಿಯಿಲ್ಲ ಎನ್ನಿಸುವಂತಹ ದೃಶ್ಯಗಳೂ ಇದ್ದರೆ ಹೇಳಿ ನಿರ್ದೇಶಕರಿಗೆ ತಲುಪಿಸುತ್ತೇವೆ.

ಸ್ಟೋರಿ ಇದ್ರೂ ಮತ್ತೊಂದಿದ್ರು ಈ ರೀತಿ ಪೋಲಿ ಕಮರ್ಷಿಯಲ್ ಇರಲೇ ಬೇಕಾ?
https://www.youtube.com/watch?v=WCe6uecDZY0&authuser=0

Dec 13, 2014

ಪಿರಿಯಾಪಟ್ಟಣ ಎಂಬ ಅಭಿವೃಧ್ದಿ ವಂಚಿತ ತಾಲೂಕು

ಪಿರಿಯಾಪಟ್ಟಣ
Vasanth Raju N
ಪಿರಿಯಾಪಟ್ಟಣ ಮೈಸೂರಿನ ಪ್ರಮುಖ ತಾಲ್ಲೊಕು ಕೇಂದ್ರ. ಕೊಡಗಿನ ಅಂಚಿನಲ್ಲಿರುವ ಈ ತಾಲ್ಲೊಕು ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಗೆ ಪ್ರಸಿದ್ದಿ. ಬೈಲ್‍ಕುಪ್ಪೆ (ಟಿಬೆಟ್ ನಿರಾಶ್ರಿತ ಪ್ರದೇಶ) ಕರ್ನಾಟಕದ ಬೌದ್ದ ಧರ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದಲ್ಲದೇ ಇತಿಹಾಸ ಪ್ರಸಿದ್ದಿ ಕನ್ನಂಬಾಡಿ ಮತ್ತು ಮಸಣಿಕಮ್ಮ ದೇವಸ್ಥಾನಗಳು ಕೂಡ ಪ್ರಮುಖ ಭಕ್ತಿ ಕೇಂದ್ರಗಳು. ಅದರೆ ಈ ತಾಲೂಕು ಯಾವುದೇ ರಚನಾತ್ಮಕ ಅಭಿವೃದ್ದಿ ಕಾಣದೇ ಹಿಂದುಳಿದಿದೆ. ಇದಕ್ಕೆ ಕಾರಣವಾಗಿರುವ ಕೆಲ ಅಂಶಗಳನ್ನು ಕುರಿತು ಚರ್ಚೆಯ ಉದ್ದೇಶ ಈ ಲೇಖನದ್ದು.

Dec 10, 2014

ಅಂಗವಿಕಲರ ರಾಜ್ಯ ಸಂಘಟನೆಗೆ ಸಹಕರಿಸಲು ಮನವಿ

office bearers
ಪತ್ರಿಕಾ ಪ್ರಕಟಣೆ.
ಅಂಗವಿಕಲರ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಶ್ರೀ ಕೊಡಕ್ಕಲ್ ಶಿವಪ್ರಸಾದರು ಇದೀಗ ಅಖಿಲ ಭಾರತ ಅಂಗವಿಕಲರ ನೌಕರರ ಸಂಘ (ರಿ) ಇದರ ರಾಜ್ಯ ಸಂಚಾಲಕರಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರೀಗ ಕರ್ನಾಟಕದಲ್ಲಿ ಅಂಗವಿಕಲರ ಸಂಘಟನೆಗಾಗಿ ಕಾರ್ಯತತ್ಪರರಾಗಿದ್ದಾರೆ.

ಕರ್ನಾಟಕ ಮೊಬೈಲ್ ಒನ್: ಕಿರುಪರಿಚಯ

karnataka mobile one
ಮೊದಲ ಪುಟ
ಭಾರತದ ಐಟಿ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವುದು ನಮ್ಮ ರಾಜಧಾನಿ ಬೆಂಗಳೂರು. ಐಟಿ ಕ್ಯಾಪಿಟಲ್ ಆಗಿರುವುದರಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಅನೇಕ ಅನುಕೂಲಗಳೂ ಆಗಿವೆ, ಅನಾನುಕೂಲಗಳೂ ಆಗಿವೆ. ಐಟಿ ತಂತ್ರಜ್ಞಾನವನ್ನು ಸರಕಾರದ ವತಿಯಿಂದ ಜನರ ಬಳಿಗೆ ಕೆಲಸವೊಂದು ನಡೆದಿದೆ. ಎಲ್ಲರೊಳಗೊಂದಾಗಿರುವ ಮೊಬೈಲು ಫೋನುಗಳನ್ನು ಉಪಯೋಗಿಸಿಕೊಂಡು ಸರಕಾರದ ವಿವಿಧ ಇಲಾಖೆಗಳನ್ನು ಮತ್ತನೇಕ ಖಾಸಗಿ ಸೇವೆಗಳನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೊಬೈಲ್ ಒನ್ ಯೋಜನೆ ಸಿದ್ಧರಾಮಯ್ಯನವರ ಆಸಕ್ತಿಯಿಂದಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿಗೊಂಡಿದೆ.

Dec 9, 2014

ಮೌಡ್ಯದ ವಿರುದ್ಧ ಕಿಕ್ ಔಟ್ ಸಮರ

kickout astrologers
Dr Ashok K R
ನಂಬಿಕೆಗೂ ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

Dec 8, 2014

LIBRARY FOR A CAUSE

MyLISA
Tent Library
N. S. Harinarayana; Sunil M. V; Dr. N. Vasantharaju
The Mysore Librarian and Information Scientists Association (MyLISA) in Mysore runs a Tent Library.
“Books are for Use” and “Books for all” are the dictums propounded by Padmashree S.R. Ranganathan, also called the ‘Father of Library Movement in India’.

Dec 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.

Dec 2, 2014

ಬಂದು ನೋಡಿ ಹೊನ್ನಾವರ…

apsarakonda
ಅಪ್ಸರಕೊಂಡ
ಉಮೇಶ ಮುಂಡಳ್ಳಿ ಭಟ್ಕಳ
ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 38ಕಿ.ಮಿ. ಮತ್ತು ಕುಮಟಾದಿಂದ ಕೇವಲ 19 ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕ ವಿಜಯನಗರದ ರಾಜರೊಡನೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದಾಗಿ ಉಲ್ಲೇಖಗಳಿವೆ. ಇಲ್ಲಿನ ಶರಾವತಿ ಸೇತುವೆ ರಾಜ್ಯದಲ್ಲಿಯೆ ಅತಿಉದ್ದದ ಸೇತುವೆಯಾಗಿದೆ. ಇಲ್ಲಿನ ಪ್ರವಾಸಿತಾಣದಲ್ಲಿ ಕರ್ನಲ್ ಹಿಲ್, ರಾಮತೀರ್ಥ, ಇಡಗುಂಜಿ, ಗುಂಡಬಾಳ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಕುದ್ರಗಿ, ಗೇರುಸೊಪ್ಪ ಮತ್ತು ಅಪ್ಸರಕೊಂಡ ಮೊದಲಾದವುಗಳು ಅತ್ಯಂತ ಆಕರ್ಷಣೀಯವಾಗಿದೆ. ರಾಮತೀರ್ಥ ಹೊನ್ನಾವರದಿಂದ ಕೇವಲ 3ಕಿಮಿ. ಅಂತರದಲ್ಲಿದೆ. ಇಲ್ಲಿ ಸರ್ವಕಾಲಕ್ಕೂ ಬೀಳುವ ತೀರ್ಥ ಅನೇಕ ರೋಗಗಳಿಗೆ ದಿವ್ಯ ಔಷದಿ