Nov 3, 2019

ಒಂದು ಬೊಗಸೆ ಪ್ರೀತಿ - 38

ಡಾ. ಅಶೋಕ್.‌ ಕೆ. ಆರ್.‌
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು. 

“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....” 

“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು. 

“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು" 

“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ" 

“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ" 

“಻ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಆಯ್ತೇನಪ್ಪ. ಇನ್ನೊಂದೆರಡು ಮೂರು ದಿನದಲ್ಲಿ ಇವಳಿಗೋಸ್ಕರ ಎಷ್ಟು ಖರ್ಚು ಮಾಡಿದ್ದೀಯೆಂಬ ಅಂದಾಜು ಲೆಕ್ಕವನ್ನೂ ತಂದುಕೊಟ್ಟರೆ ಅದನ್ನೂ ಕೊಡ್ತೀನಿ. ಬಡ್ಡಿ ಸೇರಿಸಿ" ಎಂದು ವ್ಯಂಗ್ಯವಾಗಿ ಹೇಳಿದರು. 

ಅಪ್ಪನ ವ್ಯಂಗ್ಯಕ್ಕೆ ಮತ್ತಷ್ಟು ವ್ಯಂಗ್ಯವನ್ನು ಸೇರಿಸಿದ ಪುರುಷೋತ್ತಮ "ಏನ್ ಬೇಡ ಬಿಡಿ. ಆ ಖರ್ಚನ್ನೆಲ್ಲ ಈ ಸೂಳೇಮುಂಡೆ ಜೊತೆಯಾಡಿದ ಚಕ್ಕಂದಕ್ಕೆ ವಜಾ ಮಾಡ್ಕೋತೀನಿ" ಎಂದ್ಹೇಳಿ ಬಿರಬಿರನೆ ನಡೆದುಹೋದ. ಮನೆಯವರ ಮುಂದೆ ಇಷ್ಟು ಕೇವಲವಾಗಿ ಮಾತನಾಡಿ ಹೋಗುತ್ತಾನೆಂದುಕೊಂಡಿರಲಿಲ್ಲ ನಾನು. 

“ಎಲ್ ಚಕ್ಕಂದ ಆಡೋಕೋಗ್ತಿದ್ರಿ?” ಅಪ್ಪನ ದನಿಯಲ್ಲಿ ಸಿಟ್ಟಿತ್ತು ನೋವಿತ್ತು. 

'ನಾವೆಚ್ಚು ಭೇಟಿಯಾಗಿ ಮಾತಾಡ್ತಿದ್ದಿದ್ದೇ ರಸ್ತೆಯಲ್ಲಿ.......' ನನ್ನ ಮಾತಿನ್ನೂ ಮುಗಿದಿರಲಿಲ್ಲ. “ಥೂ. ಅಸಹ್ಯದೋರು. ಬೀದೀಲಂತೆ.... ನಾಯಿಗಳ ಥರ.....” ಅಪ್ಪನ ಮಾತು ಬೇಸರ ಮೂಡಿಸಿತು. 

“ಅದೇನೇನೋ ಹಾರ್ಮೋನು ಮಾತ್ರೆ ನುಂಗ್ತಾನೇ ಇರೋಳು. ಅದೇನ್ ಟ್ರೀಟ್ಮೆಂಟ್ಗೋ ಅಬಾರ್ಷನ್ಗೋ ಯಾರಿಗೊತ್ತು" ಅನ್ನೋ ಮಾತು ನನ್ನನ್ನು ಎರಡು ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪಿ.ಸಿ.ಒ.ಡಿಗೆ ಟ್ರೀಟ್ಮೆಂಟ್ ಕೊಡಿಸುತ್ತಿದ್ದ ಅಮ್ಮನ ಬಾಯಿಂದಲೇ ಉದುರಿಬಿದ್ದಾಗ ಅಷ್ಟೊತ್ತಿನವರೆಗೆ ಇದ್ದ ನನ್ನ ಮನದ ಸಮಸ್ಥಿತಿ ಜೋಲಿಯಾಡಿತು. ಮೇಘಸ್ಫೋಟದಂತಿತ್ತು ಕಣ್ಣೀರು. ರೂಮಿಗೆ ಹೋಗಿ ಬೋರಲು ಬಿದ್ದೆ. ಅಪ್ಪ ಅಮ್ಮನಿಗೆ ತರಾಟೆ ತೆಗೆದುಕೊಳ್ಳುತ್ತಿದ್ದದ್ದು ಕೇಳುತ್ತಿತ್ತು. ಮಿದುಳಿನಲ್ಲಿದ್ದ ಯೋಚನಾ ಲಹರಿಗಳು ಅವರ ಮಾತುಗಳು ಕಿವಿಯೊಳಗಿನಿಂದಲೇ ವಾಪಸ್ಸಾಗುವಂತೆ ಮಾಡಿಬಿಡುತ್ತಿತ್ತು. ಅರ್ಧ ಮುಕ್ಕಾಲು ತಾಸು ಕಳೆದಿರಬೇಕು. ಮೆಲ್ಲನೆ ಬಾಗಿಲು ದೂಡುತ್ತಾ ಅಪ್ಪ ಒಳಬಂದರು. ಬಂದು ಪಕ್ಕದಲ್ಲಿ ಕುಳಿತು "ಎದ್ ಬಾರಮ್ಮ ಊಟ ಮಾಡುವ" ಎಂದರು. 

'ಹೊಟ್ಟೆ ತುಂಬಿದೆ. ನೀವ್ ಹೋಗಿ ಮಾಡೋಗಿ' 

“ನೋಡು ಧರು. ಇದು ಎಲ್ಲರಿಗೂ ವಿಷಮ ಸಂದರ್ಭ. ಬಾಯಿಗೆ ಬಂದಂತೆ ಎಲ್ಲರೂ ಮಾತನಾಡಿದ್ದೀವಿ. ನಮಗೇ ಸರಿ ಕಾಣದ ನಡತೆಯನ್ನೂ ತೋರಿಸಿದ್ದೀವಿ. ಅದನ್ನೆಲ್ಲ ಎಷ್ಟು ಬೇಗ ಮರೀತಿವೋ ಅಷ್ಟೂ ಒಳ್ಳೇದು" ಅವರ ಮಾತುಗಳೊಂದಷ್ಟು ಸಮಾಧಾನ ನೀಡಿತು. ಬರ್ತೀನಿ. ನೀವ್ ಹೋಗಿರಿ ಅಂದೆ. ಅಪ್ಪ ಹೊರಹೋದ ಮೇಲೆ ಶಶಿ ಒಳಗೆ ಬಂದು ಕುಳಿತ. ಅವನಿಗೆ ನನ್ನ ಲವ್ ಸ್ಟೋರಿ ಇಡಿ ಇಡಿಯಾಗೇ ಗೊತ್ತಿತ್ತು. ಅವನು ನಾನು ಮನೇಲಿದ್ದಾಗ ಪುರುಷೋತ್ತಮ ಬರುತ್ತಿದ್ದ. ಅವನ ಜೊತೆಯೂ ಪ್ರೀತಿಯಿಂದ ಮಾತನಾಡುತ್ತಿದ್ದ. ಮನೆಯಲ್ಲಿ ಇಷ್ಟೆಲ್ಲ ಗಲಾಟೆಗಳಾದಾಗ ಸಹಜವಾಗಿ ನಾನು ಶಶಿ ನನ್ನ ಬೆಂಬಲಕ್ಕೆ ಬಂದಿದ್ದ. ಒಂದೆರಡು ಸಲ ನನ್ನ ಪರವಾಗಿ ಮಾತನಾಡಿ ಬಯ್ಯಿಸಿಕೊಂಡಿದ್ದನ್ನೂ ಹೇಳಿಕೊಂಡಿದ್ದ. ನೀ ಸುಮ್ಮನಿದ್ದು ಬಿಡೋ ಏನಾಗ್ತದೋ ಅದಾಗ್ಲಿ ಎಂದಿದ್ದೆ. ಅದಾದ ಮೇಲೆ ಆ ವಿಷಯವಾಗಿ ಏನೂ ಮಾತನಾಡುತ್ತಿರಲಿಲ್ಲ. ನನ್ನ ಜೊತೆಗಿನ ಮಾಮೂಲಿ ಮಾತುಕತೆಗಳನ್ನು ರಾಜೀವನೊಡನೆ ಮಾತನಾಡಲು ಶುರು ಮಾಡಿದ ಮೇಲೆ ನಿಲ್ಲಿಸಿಬಿಟ್ಟಿದ್ದ. ಯಾಕೆಂದು ನಾ ಕೇಳಲೋಗಿರಲಿಲ್ಲ. 

“ಅಕ್ಕ. ನೀ ರಾಜೀವನೊಡನೆ ಮದುವೆಗೆ ಒಪ್ಪಿಕೊಂಡಾಗ ನಿನ್ನ ಮೇಲೆ ವಿಪರೀತವೆನ್ನಿಸುವಷ್ಟು ಸಿಟ್ಟು ಬಂದಿತ್ತು. ಆರು ವರ್ಷದ ಪ್ರೀತಿಯನ್ನು ಎಷ್ಟು ಸುಲಭವಾಗಿ ಗುಡಿಸಿ ಸಾರಿಸಿದಳಲ್ಲ ಅಂತ. ಇವತ್ತು ಪುರುಷೋತ್ತಮನ ನಡತೆ ಕಂಡಾಗ, ಅವನು ನಿನ್ನ ಬಗ್ಗೆ ಬಳಸಿದ ಭಾಷೆ ಕೇಳಿದ ಮೇಲೆ ನಿನ್ನ ನಿರ್ಧಾರ ಸರಿ ಅಂತ ಗೊತ್ತಾಗ್ತಿದೆ. ಇನ್ನು ಆ ಪುರುಷೋತ್ತಮನ ಮನೆಯವರು ಒಪ್ಪಿ ಬಂದರೂ ನೀ ಅವನನ್ನು ಮದುವೆಯಾಗಬೇಡ. ಅವನ ಜೊತೆ ಇದ್ರೆ ನೀ ಸುಖವಾಗಂತೂ ಇರಲಾರೆ" ಎಂದ್ಹೇಳಿದವನು ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಗೋದ. ಅವನಿಂದೆಯೇ ಹೋಗಿ ಬಾಗಿಲು ಮುಚ್ಚಿ ಒಳಬಂದು ಕಪಾಟಿನಲ್ಲಿ ನನ್ನ ಬಟ್ಟೆಯ ನಡುವಿದ್ದ ಫೋರ್ ಬೈ ಸಿಕ್ಸಿನ ಫೋಟೊವಂದನ್ನು ಕೈಗೆತ್ತಿಕೊಂಡೆ. ನಮ್ ಲವ್ ಶುರುವಾಗಿ ಎರಡು ವರ್ಷವಾಗಿದ್ದಾಗ ತೆಗೆಸಿಕೊಂಡಿದ್ದ ಫೋಟೋ ಅದು. ಅವನ ಕೈ ನನ್ನ ಹೆಗಲ ಮೇಲಿತ್ತು. ಇಬ್ಬರ ಮುಖದಲ್ಲೂ ನಮ್ಮ ಪ್ರೀತಿಯಿಂದ ಜಗತ್ತನ್ನೇ ಗೆದ್ದುಬಿಡುತ್ತೇವೆಂಬ ಆತ್ಮವಿಶ್ವಾಸವಿತ್ತು. ಆ ಮುದ್ದುಮೊಕದ ಫೋಟೋ ಅನ್ನು ಕ್ಷಣಕಾಲ ದಿಟ್ಟಿಸಿದವಳು ಹರಿದು ಹಾಕಿದೆ. ಬಾತ್ರೂಮಿಗೆ ಹೋಗಿ ಕಮೋಡಿನೊಳಗೆ ಫೋಟೋದ ಚೂರುಗಳನ್ನಾಕಿ ಫ್ಲಷ್ ಮಾಡಿದೆ' ನಿಟ್ಟುಸಿರುಬಿಟ್ಟೆ. 

“ಏನ್ ಕಾಮಿಡಿ ಅಲ್ವ. ಅವನು ಕೊಟ್ಟ ಗಿಫ್ಟುಗಳನ್ನು ಎತ್ತಾಕಂಡ್ ಹೋಗೋದು. ನೀನು ಫೋಟೋ ಹರಿದುಹಾಕಿ ಕಮೋಡಿಗಾಕೋದು! ಏನ್ ಮರೆತುಬಿಟ್ಯಾ ಅವನನ್ನ" 

'ಕಾಮಿಡಿ ಅಂತೆ ಕಾಮಿಡಿ ನಿನ್ನ ತಲೆ. ನನ್ನ ಕಷ್ಟ ನನಗೆ ಆಗ. ಅವನನ್ನು ಮರೆಯೋಕೆ ನಂಗೂ ಆಗಲ್ಲ, ನನ್ನ ಮರೆಯೋಕೆ ಅವನಿಗೂ ಆಗಲ್ಲ. ಆ ಕ್ಷಣದ ಬೇಸರ ನೀಗಿಸೋಕೆ ಹಂಗೆಲ್ಲ ಮಾಡೋದು ತಪ್ಪೇನೂ ಅಲ್ಲ. ಈಗ ನಗೆ ಮೂಡ್ತದೆ. ಆದರಾಗ ಅದೇ ದೊಡ್ಡ ಜವಾಬ್ದಾರಿಯುತ ಕೆಲಸದಂತೆ ಕಾಣ್ತಿತ್ತು. ಇನ್ನೊಂಚೂರು ಹೇಳಿ ಮುಗಿಸೋದಿದೆ ಹೇಳಿಬಿಡ್ತೀನಿರು. ಎಷ್ಟು ದಿನಾ ಅಂತ ನಿನ್ನ ತಲೆ ತಿನ್ನೋದು. ಇನ್ನೇನು ನಮ್ಮ ಸಂಬಂಧ ಮುಗಿದೋಯಿತಲ್ಲ. ನನ್ನ ಪಾಡಿಗೆ ನಾನು ಅವನ ಪಾಡಿಗೆ ಅವನು ಅಂತ ಅಂದ್ಕೊಂಡಿದ್ದು ಸುಳ್ಳಾಗಿತ್ತು. ತುರ್ತಿನಲ್ಲಿ ಮೊಬೈಲ್ ನಂಬರ್ ಬದಲಿಸಿದೆ. ನನ್ನ ಮತ್ತು ರಾಜೀವನ ಮನೆಯವರಿಗೆ ಮತ್ತು ನನ್ನ ಫ್ರೆಂಡು ಐಶ್ವರ್ಯ...... ಐಶ್ವರ್ಯ ಗೊತ್ತಲ್ವ ನಿನಗೆ' 

“ಹು. ಗೊತ್ತು. ಈಗ ಆಸ್ಟ್ರೇಲಿಯಾದಲ್ಲಿದ್ದಾಳಲ್ವ?” 

'ಹು ಕಣಪ್ಪ. ಅದೇ ಐಶ್ವರ್ಯ. ಅವಳಿಗೆ ಇನ್ನೊಂದಿಬ್ಬರು ಸ್ನೇಹಿತೆಯರಿಗಷ್ಟೇ ಪೂರ್ತಿ ವಿಷಯಗಳು ಗೊತ್ತಿದ್ದಿದ್ದು. ಐಶ್ವರ್ಯ ನನಗೆ ಸಪೋರ್ಟ್ ಮಾಡೋಳು. ಇನ್ನಿಬ್ಬರು ಪುರುಷೋತ್ತಮನಿಗೆ. ಅದೆಂಗೆ ಒಬ್ಬನನ್ನ ಪ್ರೀತಿಸಿ ಇನ್ನೊಬ್ಬರನ್ನ ಮದುವೆಯಾಗ್ತಿ ಅಂತ ಜೋರು ಮಾಡೋರು. ಕೊನೆಗೆ ಅವರಿಬ್ಬರೂ ಕೂಡ ಪ್ರೀತಿಸಿದವರನ್ನು ಬಿಟ್ಟು ಬೇರೆಯವರನ್ನೇ ಕಟ್ಟಿಕೊಂಡರು! ಇರಲಿ ಬಿಡು. ನಾ ನಂಬರ್ ಬದಲಿಸಿದ್ದು ಗೊತ್ತಾಗ್ತಿದ್ದಂತೆ ನನ್ನ ತಮ್ಮನಿಗೆ ಫೋನ್ ಮಾಡಿದ್ದಾನೆ. ತಮ್ಮ ರಿಸೀವ್ ಮಾಡಿಲ್ಲ. ಐಶ್ವರ್ಯಳಿಗೆ ಫೋನ್ ಮಾಡಿದ್ದಾನೆ. ಅವಳು ನಂಬರ್ ಕೊಟ್ಟಿಲ್ಲ. ಅದೆಂಗ್ ಮದುವೆಯಾಗಿಬಿಡ್ತಾನವನು ನಾನೂ ನೋಡ್ತೀನಿ. ಅವಳ ಮದುವೆ ದಿನ ಅವಳೆದುರಿಗೆ ಹೋಗಿ ನಿಂತುಬಿಡ್ತೀನಿ. ನಾ ಎದುರಿಗಿದ್ದಾಗ ಅದೆಂಗೆ ತಾಳಿ ಕಟ್ಟಿಸಿಕೊಳ್ತಾಳವಳು ನೋಡೇ ಬಿಡ್ತೀನಿ ಅಂತ ಪಾಪ ಅವಳಿಗೆ ಜೋರು ಮಾಡಿದ್ದಾನೆ. ಅವಳಿಂದ ನಮ್ ಮದುವೆ ಮುರಿದು ಹೋಯ್ತು ಅನ್ನೋ ಹಂಗೆ. ಅವಳು ಆದಷ್ಟು ಬುದ್ಧಿ ಮಾತು ಹೇಳಿದ್ದಾಳೆ. ಹಂಗೆಲ್ಲ ಮಾಡಬೇಡ ಅಂತ. ಅವಳಿಗೂ ಬಯ್ದು ಫೋನಿಟ್ಟನಂತೆ. ಯಾವುದಕ್ಕೂ ಹುಷಾರು ಕಣೇ. ಮದುವೆ ದಿನ ಗಲಾಟೆ ಮಾಡಿದ್ರೂ ಅಚ್ಚರಿಯಿಲ್ಲ ಅಂದಳು ಐಶ್ವರ್ಯ. ಫೋನಷ್ಟೇ ಅಲ್ಲ. ದಿನಾ ಬೆಳಿಗ್ಗೆ ಸಾಯಂಕಾಲ ಆಸ್ಪತ್ರೆಯ ಬಳಿಯೇ ನಿಲ್ಲೋನು. ಹತ್ತಿರ ಬಂದು ಮಾತನಾಡಿಸುತ್ತಿರಲಿಲ್ಲ. ಆದರೆ ಅವನ ಇರುವಿಕೆ ಭಯ ಮೂಡಿಸಿದ್ದಂತೂ ಹೌದು. ಒಂದು ವಾರ ಹೀಗೇ ನಡೀತು. ನನ್ನ ರಾಜೀವನ ಮದುವೆ ದಿನಾಂಕ ಇನ್ನೆರಡು ತಿಂಗಳ ನಂತರಕ್ಕೆ ಬಿತ್ತು. ಕಾಕತಾಳೀಯ ನೋಡು. ಮದುವೆ ದಿನಾಂಕ ನಿಶ್ಚಯವಾದ ದಿನವೇ ಪುರುಷೋತ್ತಮನ ಅಮ್ಮ ಮನೆಗೆ ಬಂದಿದ್ದರು. ಸೊರಗಿ ಹೋದಂತೆ ಕಾಣುತ್ತಿದ್ದರು. ನನಗೂ ಸೇರಿ ನಮ್ಮ ಮನೆಯವರೆಲ್ಲರಿಗೂ ದುಗುಡ. ಅಕಸ್ಮಾತ್ ಇವರು ಒಪ್ಪಿಗೆ ಸೂಚಿಸಿಬಿಟ್ಟರೆ ಏನು ಮಾಡೋದು? ನಾನಂತೂ ಪುರುಷೋತ್ತಮನನ್ನು ಮದುವೆಯಾಗಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ಫೈನಲಿ ನನಗೆ ನನ್ನ ಜೀವನವೇ ಮುಖ್ಯವಾಗಿಬಿಟ್ಟಿತ್ತು. ಪುಣ್ಯಕ್ಕೆ ಅವರಮ್ಮ ಮದುವೆಗೆ ಒಪ್ಪಿಗೆ ಕೊಡಲು ಬಂದಿರಲಿಲ್ಲ. 

“ನಿಮ್ಮ ಮಗಳ ದೆಸೆಯಿಂದಾಗಿ ನನ್ನ ಮಗ ದಿನಾ ತೂರಾಡ್ಕಂಡು ಮನೆಗೆ ಬರುವಂತಾಗಿದೆ. ಅವನೇನು ಹೆಚ್ಚು ಕಮ್ಮಿ ಮಾಡ್ಕೋತಾನೋ ಅನ್ನೋ ಭಯ ಶುರುವಾಗಿದೆ ನನಗೆ. ನಿಮ್ಮ ಮಗಳ ಮದುವೆ ನಿಶ್ಚಯವಾಗಿದೆ ಅಂತ ಗೊತ್ತಾಯ್ತು. ಒಳ್ಳೇದು. ದಿನಾ ಬೆಳಿಗ್ಗೆಯಿಂದ ಸಂಜೆಯವರೆಗೆ ಅದೇ ಆಸ್ಪತ್ರೆಯ ಬಳಿ ನಿಂತಿರ್ತಾನೆ. ನಿಮ್ಮ ಮಗಳಿಗೇನಾದ್ರೂ ಹೆಚ್ಚು ಕಮ್ಮಿ ಮಾಡಿ ಜೈಲಿಗೋಗ್ತಾನೇನೋ ಅನ್ನೋ ಭಯಾನೂ ಕಾಡ್ತಿದೆ. ಮೊದಲೇ ಮುಂಗೋಪಿ ಅವನು. ನಾನೇ ಮನೆ ಖಾಲಿ ಮಾಡ್ಕಂಡು ಹೋಗಿಬಿಡಬಹುದಿತ್ತು. ನಮ್ಮ ಜೀವನ ನಡಿತಿರೋದು ಇವನಪ್ಪನ ಪೆನ್ಶನ್ ಹಣದಿಂದ. ಇವನಿನ್ನೂ ಕೆಲಸಕ್ಕೆ ಸೇರಿಲ್ಲ. ಸೇರುವಂಗೂ ಕಾಣಲ್ಲ. ಮಗಳಿನ್ನೂ ಓದ್ತಿದಾಳೆ. ಹಿಂಗಾಗಿ ದಯವಿಟ್ಟು....ತಪ್ಪು ತಿಳೀಬೇಡಿ ಹೀಗೇಳ್ತೀನಿ ಅಂತ.....ನಿಮ್ಮ ಮಗಳ ಮದುವೆ ಮುಗಿಯುವವರೆಗೂ ಅವನ ಕಣ್ಣಿಗೆ ಇವಳು ಬೀಳದಿರುವುದೇ ಕ್ಷೇಮ.....ಇಬ್ಬರಿಗೂ" ಅವರ ಕಣ್ಣೀರು ನಮ್ಮೆಲ್ಲರನ್ನೂ ತಲೆಯಾಡಿಸುವಂತೆ ಮಾಡಿತು. 

ಮಾರನೇ ದಿನವೇ ನಮ್ಮ ಎಂ.ಎಸ್ ರನ್ನು ಭೇಟಿಯಾದೆ. ಅವರಿಗೆ ಈ ಮುಂಚೆಯೇ ನನ್ನ ವಿಷಯದಲ್ಲೊಂದಷ್ಟು ಮಾಹಿತಿಯಿತ್ತು. ಪೂರ್ತಿಯಾಗಲ್ಲದಿದ್ದರೂ ಸಂಕ್ಷಿಪ್ತವಾಗಿ ಒಂದಷ್ಟು ವಿವರಿಸಿದೆ. ಕೆಲಸ ಬಿಟ್ಟುಬಿಡ್ತೀನಿ ಮದುವೆವರೆಗೆ, ನೋಟೀಸ್ ಎಲ್ಲಾ ಕೊಡೋದಿಕ್ಕಾಗೋಲ್ಲ ಈಗ. ಒಂದ್ ತಿಂಗಳ ಸಂಬಳ ಬೇಕಾದ್ರೆ ದಂಡದ ರೂಪದಲ್ಲಿ ಕಟ್ತೀನಿ. ಸ್ವಲ್ಪ ಮ್ಯಾನೇಜ್ಮೆಂಟ್ ಜೊತೆ ಮಾತಾಡೋಕಾಗುತ್ತಾ ಅಂತ ಕೇಳಿದೆ. ಪಾಪ, ಒಳ್ಳೆ ಸರ್ರು ಅವರು. ಮೇಲಾಗಿ ನನ್ನ ಕೆಲಸದ ವೈಖರಿಯನ್ನು ಮೆಚ್ಚಿಕೊಂಡಿದ್ದವರು. ಸ್ವಲ್ಪ ಸಮಯ ಯೋಚಿಸುತ್ತಾ "ಅದಕ್ಯಾಕಮ್ಮ ಕೆಲಸ ಬಿಡ್ತಿ. ಒಂದ್ ಕೆಲಸ ಮಾಡು. ಆರ್.ಬಿ.ಐ ಕ್ಯಾಂಪಸ್ಸಲ್ಲಿ ನಮ್ಮದೇ ಒಂದು ಬ್ರ್ಯಾಂಚ್ ಇದೆ. ನೈಟ್ ಡ್ಯೂಟಿ ಇಲ್ಲಿಗಿಂತ ಜಾಸ್ತಿ ಬೀಳ್ತದೆ ಅನ್ನೋದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ಸಲೀಸು. ಇಲ್ಲಿಗಿಂತ ಪೇಷೆಂಟ್ಸೂ ಕಮ್ಮಿ. ಜೊತೆಗೆ ನೀನೇ ಬಾಸು ಅಲ್ಲಿ. ಇಲ್ ನಮ್ ಕೈಲಿ ಬಯ್ಯಿಸಿಕೊಳ್ಳೋ ಹಂಗೆ ಅಲ್ಲಿರಲ್ಲ" ಎಂದು ನಕ್ಕು "ಜೊತೆಗೆ ಆ ಕ್ಯಾಂಪಸ್ಸಿಗೆ ಎಲ್ಲರನ್ನೂ ಒಳಗೆ ಬಿಡಲ್ಲ. ಐಡಿ ಕಾರ್ಡ್ ಇದ್ರಷ್ಟೇ ಒಳಗೆ ಬಿಡೋದು. ಕೆಲಸಾನೂ ಉಳೀತದೆ, ನಿನಗೊಂಚೂರು ನೆಮ್ಮದೀನೂ ಸಿಗ್ತದೆ" ಎಂದು ಪರಿಹಾರ ಸೂಚಿಸಿದ್ದರು. ಅವತ್ತಿನಿಂದ ಇವತ್ತಿನವರೆಗೆ ಅದೇ ಆರ್.ಬಿ.ಐ ಬ್ರ್ಯಾಂಚಿನಲ್ಲಿ ಗೂಟ ಹೊಡ್ಕಂಡು ಕೂತಿದ್ದೀನಿ ನೋಡು. ಅಲ್ಲಿಗೆ ಹೋದ ಮೇಲೆ ಪುರುಷೋತ್ತಮನ ಕಾಟ ತಪ್ಪಿತು. ಅಪರೂಪಕ್ಕೆ ಮನೆಯ ಬಳಿ ಕಾಣಿಸಿಕೊಳ್ಳುತ್ತಿದ್ದನಾದರೂ ನಾ ಕೆಲಸ ಮಾಡುವ ಜಾಗದ ಗುರುತಿಡಿಯಲು ಸಾಧ್ಯವಾಗಲಿಲ್ಲ. ಇನ್ನೊಂದಷ್ಟು ಸಮಯ ಸಿಕ್ಕಿದ್ರೆ ಗೊತ್ತು ಮಾಡ್ಕೋತಿದ್ನೋ ಏನೋ..... ಅಷ್ಟರೊಳಗೆ ನನ್ನ ಮದುವೆಯಾಯಿತು. ಮದುವೆಯೇನೋ ಧಾಂ ಧೂಂ ಅಂತ ನಡೆಯಿತು. ಆದರೆ ಐಶ್ವರ್ಯಳನ್ನು ಬಿಟ್ಟು ಇನ್ಯಾರನ್ನೂ ಮದುವೆಗೆ ಕರೆಯಲಾಗಲಿಲ್ಲ ನನಗೆ..... ಇಷ್ಟು ನೋಡಪ್ಪ ನನ್ನ ಬದುಕಿನಲ್ಲಿ ನಡೆದ ಕತೆ...... ಈಗೇಳು ನಾ ಕೆಟ್ಟೋಳಲ್ವ? ಅಷ್ಟು ವರ್ಷ ಪ್ರೀತಿಸಿದ ಹುಡುಗನನ್ನು ಇಷ್ಟು ಸಲೀಸಾಗಿ ಬಿಟ್ಟುಬಿಡೋದಕ್ಕೆ ಕೆಟ್ಟತನ ಬೇಕೇ ಬೇಕಲ್ವ.....' 

ಸಾಗರ ಮಾತನಾಡಲಿಲ್ಲ. ನನ್ನನ್ನು ಬದಿಗೆ ತಳ್ಳಿ ನನ್ನ ಮೇಲೆ ಮಲಗಿ ಮುಖವನ್ನು ಹತ್ತಿರಕ್ಕೆ ತಂದು. “ನೀ ಕೆಟ್ಟೋಳಾದ್ರೂ ಒಳ್ಳೇಯೋಳಾದ್ರೂ ನನಗೆ ನೀ ಬೇಕು ಕಣೇ. ಐ ಮಿಸ್ಡ್ ಯು ಕಣೇ. ಐ ಲವ್ ಯು ಧರು......” ಎಂದೇಳುತ್ತಾ ಮೊಲೆಗೆ ಬಾಯಿ ಹಾಕಿದ. ಮೆಲ್ಲನೆ ಕಚ್ಚಿದ. ನನ್ನ ಬಲಗೈ ತನ್ನಿಂತಾನೇ ಎಂಬಂತೆ ಅವನ ತೊಡೆಯ ನಡುವೆ ಹೋಯಿತು. ಒಂದೊಂದು ಮೊಲೆಯನ್ನು ಐದೈದು ನಿಮಿಷ ಚೀಪಿದವನು ಕತ್ತು ಮೇಲೆತ್ತಿ "ಇನ್ನೊಂದ್ಸಲ" ಎಂದ. ಹಣೆಗೆ ಮುತ್ತಿಟ್ಟು ಮ್ ಎಂದು ಮುಲುಗುಟ್ಟಿದೆ. ಈ ಸಲದ ಮೈಥುನ ದೀರ್ಘಕಾಲದವರೆಗೆ ನಡೆಯಿತು. ಆದ್ರೂ ಅದೇ ಮೊದಲ ಸಲ ಯೋನಿಯ ಸುತ್ತಮುತ್ತಲಿನ ಮಾಂಸಖಂಡಗಳೆಲ್ಲ ನನ್ನರಿವಿಗೆ ಬರದಂತೆ ಬಿಗಿದುಕೊಂಡವು. ಸಾಗರನನ್ನು ಬಿಡುವುದೇ ಇಲ್ಲವೆಂಬಂತೆ ಬಿಗಿದುಕೊಂಡವು. ರಾಜೀವನೊಟ್ಟಿಗೆ ಒಮ್ಮೆಯೂ.......ಏನಿದು? ಅವತ್ತೇ ನಿರ್ಧಾರ ಮಾಡಿದ್ನಲ್ಲ ಇವನೊಟ್ಟಿಗಿದ್ದಾಗ ಅವರನ್ನು ಅವರೊಟ್ಟಿಗಿದ್ದಾಗ ಇವನನ್ನು ನೆನಪಿಸಿಕೊಳ್ಳಲೇಬಾರದೆಂದು.....ಹೋಲಿಕೆಯನ್ನಂತೂ ಮಾಡಲೇ ಬಾರದು ಎಂದುಕೊಳ್ಳುತ್ತಿರುವಾಗ ಸಾಗರ ಬೋರ್ಗರೆದು ಸ್ಖಲಿಸಿದ. ಇನ್ನೊಂದೆರಡು ನಿಮಿಷ ನಡೆದಿದ್ದರೆ ಬಹುಶಃ ನನ್ನಲ್ಲೂ ಆರ್ಗಾಸಮ್ ಆಗ್ತಿತ್ತಲ್ವ ಅನ್ನಿಸಿತು. ಒಂದರ್ಧ ಘಂಟೆ ಹಾಗೇ ಮಲಗಿದ್ದವರನ್ನು ಎಬ್ಬಿಸಿದ್ದು ಅಪ್ಪನ ಕರೆ. ಬಿಡುವಿದ್ರೆ ಮನೆಗೆ ಬಾ, ಇಲ್ಲೇ ಊಟ ಮಾಡುವ ಅಂದಿದ್ದರು. ಸಾಗರನ ಮುಖ ಸಪ್ಪಗಾಯಿತು. ಈಗ್ಲೇ ಹೊರಡಬೇಕಲ್ಲ ಎಂದು. ಬೇಸರ ಮಾಡಬೇಡ್ವೋ ಅಂತ ಮುತ್ತಿಟ್ಟು ಸಮಾಧಾನಿಸಿದೆ. ಸಮಯವಾಗಲೇ ಮಧ್ಯಾಹ್ನ ಎರಡಾಗಿತ್ತು. 'ಊಟ' ಎಂದೆ. 

“ಪರವಾಗಿಲ್ವೇ. ಹಸಿವಿಲ್ಲ. ನೀ ಹೊರಡು. ನಾನೂ ಹೊರಡ್ತೀನಿ" ಎಂದು ಮೇಲೆದ್ದು ಬಟ್ಟೆ ಧರಿಸಿಕೊಂಡ. ನಾ ಒಮ್ಮೆ ಬಾತ್ರೂಮಿಗೆ ಹೋಗಿ ಬಟ್ಟೆ ಧರಿಸಿ ಬಂದು ಮಂಚದ ಮೇಲೆ ಮುದುಡಿ ಹೋಗಿದ್ದ ಬೆಡ್ ಶೀಟುಗಳನ್ನು ಎತ್ತಿ ಒಗೆಯಲು ಹಾಕಿ ಬೇರೆ ಬೆಡ್ ಶೀಟುಗಳನ್ನು ಹಾಸಿದೆ. 'ಒಂದ್ ಕಾಫಿನಾದ್ರೂ ಕುಡಿಯೋ' ಎಂದೆ. ಬೇಡವೆಂದು ತಲೆಯಾಡಿಸಿದ. ಗೋಡೆಗೊರಗಿ ನಿಂತು ಅವನನ್ನೇ ನೋಡಿದೆ. ಅವನೂ ನೋಡಿದ. ಎಲ್ಲಿತ್ತೋ ಕಣ್ಣೀರು ಪಟ್ಟೆಂದು ಹರಿದು ಕೆನ್ನೆಯ ಮೇಲೆ ಬಿತ್ತು. ಸಾಗರ ಎದ್ದು ಬಂದು ಸೊಂಟವನ್ನು ಸುತ್ತಿಡಿದು ಕಣ್ಣೀರನ್ನು ಒರೆಸಿದ. ಻ಅವನ ಕಣ್ಣಲ್ಲೂ ನೀರು ತುಂಬಿತ್ತು. 

“ಯಾಕೋ ಪುಟ್ಟ ಅಳ್ತಿ" 

'ಯಾಕಿಲ್ವೋ. ಯಾಕೋ ಸಿಗಲಿಲ್ಲ ನೀ ನಂಗೆ' 

“ನಿನ್ನ ಪಡೆಯೋವಷ್ಟು ಅದೃಷ್ಟ ನನಗಿರಲಿಲ್ಲವೇನೋ ಕಣೇ" 

ಅಷ್ಟು ದೊಡ್ಡ ಮಾತನಾಡಬೇಡ ಎನ್ನುತ್ತಾ ಅವನೆದೆಗೆ ಒರಗಿಕೊಂಡೆ. ಎಷ್ಟೊತ್ತು ಹಾಗೆಯೇ ನಿಂತಿದ್ದೆವೋ ಗೊತ್ತಿಲ್ಲ. ಕಿವಿಯ ಬಳಿ ಒಂದು ಮುತ್ತನಿತ್ತು "ಚಿನ್ನು. ನಡೀ ನೀನೂ ಹೊರಡು. ನಾನೂ ಹೋಗಿ ಫ್ರೆಂಡ್ಸ್ ಮೀಟ್ ಮಾಡ್ಕಂಡು ರಾತ್ರಿ ಬಸ್ ಹತ್ತುತ್ತೀನಿ" ಎಂದು ವಾಸ್ತವಕ್ಕೆ ಕರೆತಂದ. ಸರಿಯೆಂಬಂತೆ ತಲೆಯಾಡಿಸಿ ಸಾಗರನನ್ನು ಬೀಳ್ಕೊಟ್ಟೆ. ಮತ್ತೊಮ್ಮೆ ಮುಖ ತೊಳೆದುಕೊಂಡು ಒಂದಷ್ಟು ಪೌಡರ್ ಲೇಪಿಸಿಕೊಂಡು ಅಪ್ಪನ ಮನೆ ಕಡೆಗೆ ಹೊರಟೆ. ಅಪ್ಪನ ಮನೆ ತಲುಪುವಷ್ಟರಲ್ಲಿ ಮುಖದ ಮೇಲೆ ನಗು ಮೂಡಿಸಿಕೊಂಡಿದ್ದೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

4 comments:

  1. ಕಥಾ ನಾಯಕಿ ಪುರುಷೋತ್ತಮನನ್ನು ಪ್ರೀತಿಸಿ ನಡುನೀರಿನಲ್ಲಿ ಕೈಬಿಟ್ಟದ್ದು ನೈತಿಕವಾಗಿ ಹಾಗೂ ಮಾನವೀಯ ದೃಷ್ಟಿಕೋನದಿಂದ ತಪ್ಪು ಎಂದನಿಸುತ್ತದೆ. ಪ್ರೀತಿ ಎಂದರೆ ಪರಸ್ಪರ ಹೊಂದಿಕೊಂಡು ಬಾಳುವುದು. ಪ್ರೀತಿಸಿ ಕೈಬಿಡುವುದು ನೈತಿಕವಾಗಿ ಗಂಭೀರ ಅಪರಾಧವೂ ಹೌದು. ಏಕೆಂದರೆ ಪ್ರೀತಿಸಿ ಮೋಸ ಹೋದ ವ್ಯಕ್ತಿಯ ಬಾಳು ಮಾನಸಿಕವಾಗಿ ಸರ್ವನಾಶ ಆಗುತ್ತದೆ. ಮತ್ತೆಂದೂ ಆ ವ್ಯಕ್ತಿ ಪ್ರೀತಿ ಕೊಡಬಲ್ಲ ಉನ್ನತ ಮನೋಚೈತನ್ಯವನ್ನು ಪಡೆಯಲು ಸಾಧ್ಯವಿಲ್ಲ. ಪ್ರೀತಿಸಿ ಏನೇ ಅಡ್ಡಿ ಬಂದರೂ ಎದುರಿಸಿ ನಿಲ್ಲುವುದು ಹಾಗೂ ಹಿರಿಯರ ಒಪ್ಪಿಗೆ ಇಲ್ಲದೆ ಹೋದರೆ ಅವರನ್ನು ಧಿಕ್ಕರಿಸಿ ಮದುವೆಯಾಗುವುದು ನಿಜವಾದ ಪ್ರೀತಿ. ಈ ಕತೆಯಲ್ಲಿ ಪುರುಷೋತ್ತಮನು ನೈತಿಕವಾಗಿ ಮೇಲ್ಮಟ್ಟದಲ್ಲಿ ನಿಲ್ಲುತ್ತಾನೆ, ಕಥಾನಾಯಕಿ ಪ್ರೀತಿಸಿದವನಿಗೆ ದ್ರೋಹ ಬಗೆದು ಸಣ್ಣವಳಾಗುತ್ತಾಳೆ.

    ReplyDelete
    Replies
    1. ಈ ಇಡೀ ಕಾದಂಬರಿಯಲ್ಲಿ ನನ್ನ ಪ್ರಕಾರ ಸರಿ ತಪ್ಪು, ನೈತಿಕತೆ ಅನೈತಿಕತೆಯ ನಡುವಿನ ಗೆರೆಗಳು ತುಂಬಾ ತೆಳು. ಬಹುಶಃ ಜೀವನದಲ್ಲಿರುವ ಹಾಗೆ... ನಿಮ್ಮಭಿಪ್ರಾಯಕ್ಕೆ ನನ್ನಿ 😊

      Delete