ಜೂನ್ 19, 2026
ಇಥೆನಾಲ್ ಮಿಶ್ರಿತ ಪೆಟ್ರೋಲಿನ ಸುತ್ತ...
ಜೂನ್ 18, 2026
ಕರಾವಳಿಯ ಕೋಮು ಗಲಭೆಗಳಲ್ಲಿ ಸತ್ತವರ ಕುಟುಂಬಗಳ ಕಣ್ಣೀರ ಕತೆಗಳು.
ಡಾ. ಅಶೋಕ್ ಕೆ ಆರ್
ನಾನು ಕನ್ನಡದಲ್ಲಿ ಓದಿದ ವಿಶಿಷ್ಟ ಪುಸ್ತಕಗಳಲ್ಲಿ "ಕರಾವಳಿಯ ರಕ್ತ - ಕಣ್ಣೀರು" ಪ್ರಮುಖ ಸ್ಥಾನವನ್ನೇ ಪಡೆಯುತ್ತದೆ.
ಮತಾಂಧರ ದ್ವೇಷದಿಂದ, ಧಾರ್ಮಿಕ ದ್ವೇಷದ ಕಾರಣದಿಂದ ಕೊಲೆಯೊಂದು ನಡೆದರೆ ಮುಖ್ಯವಾಹಿನಿ ವಾಹಿನಿಗಳಲ್ಲಿ ಸುದ್ದಿಯಾಗುತ್ತದೆ. ಕೊಲೆಯಾದವರ ಸಾಮಾಜಿಕ ಸ್ಥಾನಮಾನ, ರಾಜಕೀಯ ಹಿನ್ನೆಲೆ, ಅಪರಾಧಗಳ ಹಿನ್ನೆಲೆಯ ಆಧಾರದ ಮೇಲೆ ಸುದ್ದಿ ಮೊದಲ ಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತದೋ ಅಥವಾ ಎರಡು ಮೂರನೇ ಪುಟಗಳ ಸ್ಥಳೀಯ ಆವೃತ್ತಿಯಲ್ಲಿ ಪುಟ್ಟ ಕಾಲಂನಲ್ಲಿ ಪ್ರಕಟವಾಗುತ್ತದೋ ಎನ್ನುವುದು ನಿರ್ಧಾರವಾಗುತ್ತದೆ. ಟಿವಿಯಲ್ಲಿ ಹೆಚ್ಚು ಸಮಯ ಸುದ್ದಿಯಾಗಲು ಸಹ ಇದೇ ಮಾನದಂಡಗಳು ಅನ್ವಯ. ರಾಜಕೀಯ ಪಕ್ಷಗಳು ನೇರವಾಗಿ ಅಖಾಡಕ್ಕೆ ಧುಮುಕಿದರೆ ಮತ್ತೊಂದಷ್ಟು ದಿನಗಳ ಕಾಲ ಸುದ್ದಿಯ ಪ್ರಸಾರವಾಗುತ್ತದೆ.
ಜೂನ್ 4, 2026
ಸಿದ್ಧರಾಮಯ್ಯನವರೀಗ ಮಾಜಿ ಮುಖ್ಯಮಂತ್ರಿ.
ಡಾ. ಅಶೋಕ್. ಕೆ. ಆರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಾ ಮತ ಚಲಾಯಿಸಲು ಪ್ರಮುಖ ಕಾರಣ ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲಿ ಎಂದು.
ಮೇ 21, 2026
ಪುಸ್ತಕ ಪರಿಚಯ: The girl with seven names
ಡಾ ಅಶೋಕ್ ಕೆ ಆರ್
ಬಿಸಿಲೊತ್ತಿನಲ್ಲಿ ನಮ್ಮ ಮನೆಯ ಕಾಂಪೌಂಡಿನೊಳಗೆ ಅಪರಿಚಿತರು ನೆರಳು ಅರಸಿ ಬಂದರೆ ಮುನಿದು ರೇಗುವ ನಾವು ಅದೇ ತರಹ ಪಕ್ಕದ ಮನೆಯವರು ಯಾರ ಮೇಲೋ ರೇಗುತ್ತಿದ್ದರೆ "ಐದು ನಿಮಿಷ ನೆರಳಲ್ಲಿ ನಿಂತು ಹೋದರೆ ಇವರ ಗಂಟೇನು ಹೋಗ್ತದೆ" ಅಂತ ಪಕ್ಕದ ಮನೆಯವರ ಬಗ್ಗೆ ಗೊಣಗಿಕೊಳ್ಳುತ್ತೇವೆ!
ಈ ಯೋಚನೆ ಪದೇ ಪದೇ ತಲೆಯಲ್ಲಿ ಬಂದಿದ್ದು Hyeonseo lee (co author - David john) ಬರೆದಿರುವ The girl with seven names: A north korean defectors story ಓದುವಾಗ. ವಲಸೆಯನ್ನು ನಿಯಂತ್ರಿಸುವ ಕೆಲಸ ಎಷ್ಟೇ ನಡೆದರೂ ವಲಸೆಯನ್ನು ನೂರು ಪ್ರತಿಶತಃ ನಿಲ್ಲಿಸುವುದು ಯಾರ ಕೈಲೂ ಸಾಧ್ಯವಿಲ್ಲ. ಕುತೂಹಲಕ್ಕೆ, ಒಂದು ದಿನವೋ ಅಥವಾ ಒಂದು ವಾರದ ಮಟ್ಟಿಗೆಂದೋ ಸರ್ವಾಧಿಕಾರದ ಉತ್ತರ ಕೊರಿಯಾದಿಂದ ಚೀನಾಕ್ಕೆ ಭೇಟಿ ಕೊಡುವ Hyeonseo lee ಯ ಜೀವನಗಾಥೆಯಿದು. ಎಷ್ಟೋ ಕಲ್ಪಿತ ಕತೆಗಳಿಗಿಂತ ನಿಜಜೀವನದ ಘಟನೆಗಳೇ ರೋಚಕವಾಗಿರ್ತವೆ ಎನ್ನುವುದಕ್ಕೂ ಈ ಪುಸ್ತಕ ಒಂದು ಉದಾಹರಣೆಯಂತಿದೆ.
ಸರ್ವಾಧಿಕಾರದ ಆಡಳಿತ ಹೇಗಿರುತ್ತದೆ, ಜನರ ಮನಸ್ಸನ್ನು ಭಾವನೆಗಳನ್ನು ಹೇಗೆಲ್ಲಾ ನಿಯಂತ್ರಿಸುತ್ತಾರೆ, ಜನರನ್ನೇ ಒಬ್ಬರ ಮೇಲೊಬ್ಬರನ್ನು ಛೂ ಬಿಟ್ಟು ಹೇಗೆ ತಮ್ಮಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವಂಶ ವಿವರವಾಗಿದೆ. ಉತ್ತರ ಕೊರಿಯಾ ಬಿಟ್ಟು ಹೊರಗೇ ಬರದವರಿಗೆ, ಸರಕಾರಿ ಮಾಹಿತಿಯನ್ನು ಬಿಟ್ಟು ಬೇರೇನನ್ನೂ ಕದ್ದು ಮುಚ್ಚಾದರೂ ತಿಳಿಯದೆ ಹೋದವರಿಗೆ ಇಡೀ ವಿಶ್ವದಲ್ಲಿ ಉತ್ತರ ಕೊರಿಯಾ ದೇಶವೇ ಸರ್ವಶ್ರೇಷ್ಠ ದೇಶ! ಇಂತಿರುವ ದೇಶದಲ್ಲಿರುವ ಶ್ರೇಣೀಕರಣ ವ್ಯವಸ್ಥೆಗೆ ಹುಟ್ಟು ಹಾಗು ಕುಟುಂಬದ ಹಿನ್ನೆಲೆ ಪ್ರಮುಖ ಕಾರಣ. ಆಡಳಿತಕ್ಕೆ ಎದುರಾಗಿನಿಂತು ಶ್ರೇಣೀಕರಣ ವ್ಯವಸ್ಥೆಯಲ್ಲಿ ಕೆಳಜಾರಬಹುದೇ ಹೊರತು ಮೇಲೇರುವುದು ಕಷ್ಟದ ಕೆಲಸ. ದೇಶದ ಕಾನೂನಿಗೆ ವಿರುದ್ಧವಾಗಿ ನಿಂತೂ ಜಾರದೆ ಉಳಿಯಲು ಭ್ರಷ್ಟಾಚಾರ ಸಹಾಯಕ. Shantaram ಕಾದಂಬರಿಯಲ್ಲಿ ಬರುವ Problem with corruption is it works fine ಎಂಬ ಮಾತುಗಳು ಎಲ್ಲಾ ದೇಶಕ್ಕೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ.
ಮಧ್ಯಮ ಶ್ರೇಣಿಯಲ್ಲೇ ಇದ್ದ Hyeonseo Lee ಗೆ ಉತ್ತರ ಕೊರಿಯಾ ತೊರೆಯಲು ಹೆಚ್ಚಿನ ಕಾರಣಗಳೇನೂ ಇರಲಿಲ್ಲ. ಕದ್ದು ಮುಖ್ಯ ನೋಡಿದ ಟಿವಿಯ ಕಾರ್ಯಕ್ರಮಗಳಲ್ಲಿ ತೋರಿದ ಪ್ರಪಂಚವನ್ನೊಮ್ಮೆ ಕಾಣಬೇಕೆಂಬ ವಯೋಸಹಜ ಕುತೂಹಲ (ಆ ಕುತೂಹಲ ಕೂಡ ಉತ್ತರ ಕೊರಿಯಾದಲ್ಲಿ ಸಹಜವಲ್ಲ) ಹೀಗೆ ಒಮ್ಮೆ ಚೀನಾ ದೇಶ ಪ್ರವೇಶಿಸಿದ ಲೇಖಕಿಗೆ ಮತ್ತೆ ಪರ್ಮನೆಂಟಾಗಿ ಉತ್ತರ ಕೊರಿಯಾಗೆ ಹಿಂದಿರುಗುವ ಅವಕಾಶವೂ ಸಿಗುವುದಿಲ್ಲ, ಹಿಂದಿರುಗುವ ಆಸೆಯೂ ಉಳಿಯುವುದಿಲ್ಲ. ಚೀನಾದಲ್ಲಿ ಅಕ್ರಮವಾಸಿಯಾಗಿ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ತೆರಳುತ್ತಾ ನಕಲಿ ಐಡಿಗಳನ್ನು ಪಡೆದು ಅಲ್ಲಿಲ್ಲಿ ಕೆಲಸ ಮಾಡುತ್ತಾ ಶತ್ರು ದೇಶವಾದ ದಕ್ಷಿಣ ಕೊರಿಯಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದು ತನ್ನ ಅಮ್ಮ ಮತ್ತು ತಮ್ಮನನ್ನು ಕೂಡ ಉತ್ತರ ಕೊರಿಯಾದಿಂದ ಪಾರು ಮಾಡಿ ದಕ್ಷಿಣ ಕೊರಿಯಾಗೆ ಕರೆಸಿಕೊಳ್ಳಬೇಕೆಂದು ನಿಶ್ಚಯಿಸುತ್ತಾಳೆ. ಲೇಖಕಿಯ ಆಸೆ ಈಡೇರುತ್ತದಾ ಇಲ್ಲವಾ ಎಂಬುದೇ ಪುಸ್ತಕದ ಮೂಲ ತಿರುಳು.
ಉತ್ತರ ಕೊರಿಯಾ ಶತ್ರು ದೇಶವಾದರೂ ಅಲ್ಲಿಂದ ತನ್ನಲ್ಲಿಗೆ ವಲಸೆ ಬರುವ ಜನರನ್ನು ದೂರ ತಳ್ಳದೆ ತನ್ನ ದೇಶದ ಪ್ರಜೆಗಳನ್ನಾಗಿಸುವ ದಕ್ಷಿಣ ಕೊರಿಯಾದ ನಡೆ ಶ್ಲಾಘನೀಯವೇ ಹೌದು. ದಿನದ ಸುದ್ದಿಗಳನ್ನು ಓದುವಾಗ ಚೀನಾದ ಪೂರ್ಣ ಬೆಂಬಲ ಉತ್ತರ ಕೊರಿಯಾಗಿದೆ ಎಂದು ಅನ್ನಿಸುತ್ತದೆ. ಆದರೆ ವಾಸ್ತವ ಆ ರೀತಿಯಿಲ್ಲ ಎನ್ನುವಂತಹ ಘಟನೆಗಳು ಪುಸ್ತಕದಲ್ಲಿ ದಾಖಲಾಗಿವೆ.
ವಲಸೆ ನಿಯಂತ್ರಿಸುವ ಸಲುವಾಗಿ ಬಿಗಿ ಕಾನೂನು ಇರುವ ದೇಶಗಳಲ್ಲೂ ಅಕ್ರಮವಾಗಿ ದೇಶದೊಳಗೆ ನುಸುಳುವವರಿಗೆ ಸಹಾಯ ಮಾಡುವ ಮಧ್ಯವರ್ತಿಗಳು ಎಲ್ಲಾ ದೇಶಗಳಲ್ಲೂ ಇದ್ದೇ ಇರುತ್ತಾರೆ. ನಮ್ಮ ಇಂಡಿಯಾದಲ್ಲೂ ಇದ್ದೇ ಇರುತ್ತಾರೆ. ದುಡ್ಡು ಪಡೆದು ವಿದೇಶಿಯರಿಗೆ ನಕಲಿ ದಾಖಲೆ ಮಾಡಿಕೊಡುವ ನಮ್ಮ ದೇಶದ ಮಧ್ಯವರ್ತಿಗಳ ಬಗ್ಗೆ ಕೋಪ ಸಿಟ್ಟು ಬರುವುದು ಸಹಜವೇ. ಪುಸ್ತಕ ಓದುವಾಗ ಅಲ್ಲಿ ಬರುವ ಮಧ್ಯವರ್ತಿಗಳ ಬಗ್ಗೆ ಈ ರೀತಿ ಕೋಪ ಸಿಟ್ಟಿನ ಭಾವನೆ ಬರದೆ ಹೆಂಗೋ ಒಂದು ಆ ಹೆಣ್ಮಗ ದಡ ಸೇರ್ಕಂಡ್ರೆ ಸಾಕು ಅಂತ ಹಾರೈಸುತ್ತಿರುತ್ತೀವಿ.
ಉದಾರ ಮನೋಭಾವ ಪಕ್ಕದ ಮನೆಯವರಲ್ಲಿ ಇರಬೇಕು ನಮ್ಮಲ್ಲಲ್ಲ!
ನವೆಂ 4, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 11: ಮೋದೂರು ಕೆರೆ
ಅಕ್ಟೋ 25, 2025
ಜಾತಿ ವ್ಯವಸ್ಥೆಯ ವಿಕಾರಗಳಿಗೆ ಕನ್ನಡಿ ಹಿಡಿಯುವ "ಹೆಬ್ಬುಲಿ ಕಟ್"
ಡಾ. ಅಶೋಕ್. ಕೆ. ಆರ್.
ಸಮಾಜದ ವಿಕಾರಗಳಿಗೆ ಕನ್ನಡಿ ಹಿಡಿಯುವ ಇಂತಹ ಚಿತ್ರಗಳನ್ನು "ಚೆನ್ನಾಗಿದೆ" "ಅದ್ಭುತವಾಗಿದೆ" ಎಂದು ಹೇಗೆ ಹೇಳುವುದು?
ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ʼಹೆಬ್ಬುಲಿ ಕಟ್ʼ ಸಿನಿಮಾವನ್ನು ಇವತ್ತು ನೋಡಲು ಸಮಯವಾಯಿತು. ಹದಿಹರೆಯದ ಹುಡುಗನ ಹುಡುಗಿಯೆಡೆಗಿನ ವಯೋಸಹಜ ಆಕರ್ಷಣೆ, ಅದಕ್ಕಿಂತಲೂ ಹೆಚ್ಚಾಗಿ ಒಂದು ಚೆಂದದ ಹೇರ್ ಕಟ್ ಮಾಡಿಸಿಕೊಳ್ಳಬೇಕೆಂಬ ಚಡಪಡಿಕೆಯೇ ತಳಪಾಯವಾದ ಸಿನಿಮಾ ಲವಲವಿಕೆಯಿಂದ ನೋಡುಗರನ್ನು ನಗಿಸುತ್ತ ನಗಿಸುತ್ತ ಕೊನೆಗೆ ಬೇಸರಕ್ಕೆ, ಎಂತ ಮಾಡಿದರೂ ಸರಿ ಹೋಗದ ನಮ್ಮ ಸಮಾಜದ ಕುರಿತು ಅಸಹನೆ ಮೂಡಿಸಿಬಿಡುತ್ತದೆ. ಬೇಸರ - ಅಸಹನೆ ಮೂಡದೇ ಹೋದರೆ ಅದು ನಮ್ಮಲ್ಲಿರುವ ಜಾತಿ ಮೇಲ್ಮೆಯ ಸೂಚಕ.
ʼಹಿಂದೂ ನಾವೆಲ್ಲ ಒಂದುʼ ಎನ್ನುವ ಘೋಷಣೆ ಈ ಮುಂಚೆಗಿಂತಲೂ ಅತ್ಯುಗ್ರವಾಗಿ ಕೇಳಿಬರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆ ಘೋಷಣೆ ಕೂಡ ಈ ಚಿತ್ರದ ಒಂದು ಪ್ರಮುಖ ಪಾತ್ರಧಾರಿ. ಜೊತೆಗೆ ಐದು ಸಲದ ನಮಾಜಿಗೆ ಕೂಡ ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರವಿದೆ.
ಅಕ್ಟೋ 24, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 10: ಕಿತನಾಮಂಗಲ ಕೆರೆ
ಸೆಪ್ಟೆಂ 11, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 9: ಮುತ್ತುರಾಯನ ಕೆರೆ
![]() |
| ಕವಲುಬಾಲದ ಚಿಟವ |
ಆಗ 13, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 8: ಕೊಮ್ಮಘಟ್ಟ ಕೆರೆ
ಜುಲೈ 30, 2025
ಜಾತಿಯೆಂಬ ವಾಸ್ತವ ಮತ್ತು ಒಂದು ಸ್ವೀಕೃತಿಗೆ ಕಾಯುತ್ತಿರುವ ಜನರು...
ಜುಲೈ 16, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 7: ಕೊಮ್ಮಘಟ್ಟ ಕೆರೆ ಮತ್ತು ಉಲ್ಲಾಳ ಕೆರೆ
ಜುಲೈ 5, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 6: ಕೊಮ್ಮಘಟ್ಟ ಕೆರೆ - 3
ಜೂನ್ 16, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 5: ಕೊಮ್ಮಘಟ್ಟ ಕೆರೆ - 2
![]() |
| ಹೆಜ್ಜಾರ್ಲೆ (ಪೆಲಿಕಾನ್) |
ಜೂನ್ 10, 2025
ಬೆಚ್ಚಿ ಬೀಳಿಸದ "ಸ್ಟೋಲನ್"
ಜೂನ್ 6, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 4: ಕೊಮ್ಮಘಟ್ಟ ಕೆರೆ – 1
![]() |
| ಚಲುಕದ ಬಾತು (ನಾರ್ಥರ್ನ್ ಶೆವಲರ್) |
. ಇ – ಬರ್ಡ್ ತಂತ್ರಾಂಶದಲ್ಲಿ ಚಲುಕದ ಬಾತು (ನಾರ್ಥರ್ನ್ ಶೆವಲರ್‌ಗಳು) ಬಂದಿದ್ದಾವೆ ಎಂಬ ಮಾಹಿತಿಯಿತ್ತು. ಏಳು ವರ್ಷಗಳ ಹಿಂದೆ ಉಲ್ಲಾಳ ಕೆರೆಯಲ್ಲಿ ಚಲುಕದ ಬಾತುಗಳನ್ನು ಕಂಡು ಫೋಟೋಗ್ರಫಿ ಮಾಡಿದ್ದೆ. ಅಲ್ಲೇ ಕೆರೆಯ ಬಳಿ ಪರಿಚಯವಾಗಿದ್ದ ದೇವೆಂದ್ರ ಕುಮಾರ್ ಮತ್ತವರ ಸ್ನೇಹಿತರಾದ ಸದಾಶಿವ ಪೂಜಾರಿಯವರ ಜೊತೆಯಲ್ಲಿ.
ಮೇ 20, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024
ಮೇ 2, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 2: ಆಗರ ಕೆರೆಯಲ್ಲೊಂದು ದಿನ…
![]() |
| ಬೆಳಗಿನ ಕಾಯಕ |
ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.
ಜನ 16, 2025
ಪಕ್ಷಿ ವೀಕ್ಷಣೆಯ ಫೀಲ್ಡ್ ಡೈರಿ ಭಾಗ 1: ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.
![]() |
| Indian paradise flycatcher/ ಬಾಲದಂಡೆ/ ರಾಜಹಕ್ಕಿ |
ಹೆಂಡ್ರುಗೆ ಆರ್.ಆರ್. ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!
ಡಿಸೆಂ 28, 2024
ಕ್ಯಾಪಿಟಲಿಸಂ ಬಿಟ್ಟು ಬೇರೆ ಆಯ್ಕೆ ನಿಜಕ್ಕೂ ನಮ್ಮ ಮುಂದಿದೆಯೇ?
![]() |
| image source: yourdictionary |
ಡಾ. ಅಶೋಕ್. ಕೆ. ಆರ್.
ಯಾರಾದರೂ
ಎಡಪಂಥೀಯ – ಬಲಪಂಥೀಯ ಅಂತ ಮಾತನಾಡುವಾಗ, ವಾದ ಮಾಡುವಾಗ ನಿಜಕ್ಕೂ ಈಗ ನಮ್ಮಲ್ಲಿ ಎಡಪಂಥೀಯತೆ – ಬಲಪಂಥೀಯತೆ
ಅನ್ನುವುದಿದೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಲೇ ಇರುತ್ತದೆ. ಈ ರೀತಿಯಾಗಿ ಮಾತನಾಡುವ, ವಾದ
ಮಾಡುವ ನಾವೆಲ್ಲರೂ ಬಂಡವಾಳಶಾಹಿ – ಕ್ಯಾಪಿಟಲಿಸ್ಟುಗಳೇ ಅಲ್ಲವೇ ಎನ್ನುವ ಯೋಚನೆ ಸುಳಿಯುತ್ತದೆ. ಅಬ್ಬಬ್ಬಾ
ಅಂದರೆ ಒಂಚೂರು ಎಡಕ್ಕಿರುವ ಅಥವಾ ಒಂದಷ್ಟು ಬಲಕ್ಕಿರುವ ಕ್ಯಾಪಿಟಲಿಸ್ಟುಗಳಷ್ಟೇ ಅಲ್ಲವೇ ನಾವು ಬಹುತೇಕರು…
ನರಸಿಂಹರಾವ್ ಕಾಲದಲ್ಲಿ, ಮನಮೋಹನ್ ಸಿಂಗ್‌ರವರು ಹಣಕಾಸು ಸಚಿವರಾಗಿದ್ದಾಗಿನ ಸಮಯದಲ್ಲಿ ಇಂಡಿಯಾ ಜಾಗತೀಕರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಹಲವು ವರುಷಗಳ ಕಾಲ ವಿಧವಿಧದ ವಿರೋಧಗಳನ್ನು ಈ ಹೊಸ ಆರ್ಥಿಕ ನೀತಿಗಳು ಎದುರಿಸಿತಾದರೂ ಅಂತಿಮವಾಗಿ ಕ್ಯಾಪಿಟಲಿಸಂ ಎನ್ನುವ ಸಿದ್ಧಾಂತವಲ್ಲದ ಸಿದ್ಧಾಂತ ಉಳಿದೆಲ್ಲ ಸಿದ್ಧಾಂತಗಳನ್ನು ಮೀರಿ ಜಯಿಸಲಾರಂಭಿಸಿತು ಎನ್ನುವುದು ತಿರಸ್ಕರಿಸಲಾಗದ ವಾಸ್ತವ.
ನವೆಂ 22, 2024
ಎಲ್ಲೆಡೆ ಸಲ್ಲುವ “ಬಂಧಮುಕ್ತ”

ಡಾ. ಅಶೋಕ್. ಕೆ. ಆರ್
ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.
ಈ ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆ…ಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರ “ಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.

















