Dr Ashok K R
ನಂಬಿಕೆಗೂ
ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ
ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ
ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ
ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು
ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು
ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ
ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ
ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ
ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.