
ಕೇಂದ್ರ
ಸರ್ಕಾರವನ್ನು ರೂಪಿಸುವಲ್ಲಿ ಉತ್ತರ ಪ್ರದೇಶದ ಪ್ರಭಾವ ಹೆಚ್ಚು. ದೊಡ್ಡ ರಾಜ್ಯ, ವಿಪರೀತ
ಜನಸಂಖೈಯಿರುವ ಉತ್ತರಪ್ರದೇಶದಿಂದ ಎಂಭತ್ತು ಜನ ಸಂಸದರು ಲೋಕಸಭೆ ಪ್ರವೇಶಿಸುತ್ತಾರೆ. ಸಂಸದರ
ಸಂಖೈಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಿಂದ ಆಯ್ಕೆಯಾಗುವವರ ಸಂಖೈ
ನಲವತ್ತೆಂಟು! ಉತ್ತರ ಪ್ರದೇಶ ಗೆದ್ದರೆ ಅಧಿಕಾರದ ಗದ್ದುಗೆ ಏರಿದಂತೆಯೇ ಎಂಬ ಮಾತು ಅದಕ್ಕಾಗೇ
ಹುಟ್ಟಿರಬೇಕು. ಎಂಭತ್ತು ಸ್ಥಾನದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಪ್ಪತ್ತೊಂದು
ಸ್ಥಾನದಲ್ಲಿ ಜಯಗಳಿಸಿತ್ತು. ಸಹಜವಾಗಿ ಅಲ್ಲಿನವರಿಗೆ ಸಚಿವ ಸಂಪುಟದಲ್ಲೂ ಪ್ರಾಮುಖ್ಯತೆ
ದೊರೆಯಬೇಕು. ಮೊದಲ ಸಂಪುಟದಲ್ಲಿ ಉತ್ತರಪ್ರದೇಶದ ಎಂಟು ಮಂದಿಯಿದ್ದರೆ ಈ ಬಾರಿ ಮತ್ತೆ
ನಾಲ್ವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ದಲಿತ
ನಾಯಕರಿಗೆ, ನಿಶಾದರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಆರೆಸ್ಸೆಸ್ ನಾಯಕ ರಾಮ್ ಶಂಕರ್
ಕಥಾರಿಯಾ, ನಿಶಾದರ ಮತಗಳನ್ನು ಬಿಜೆಪಿಗೆ ತಂದುಕೊಟ್ಟ ಸಾಧ್ವಿ ನಿರಂಜನ್ ಜ್ಯೋತಿಯವರಿಗೆ ಸಚಿವ
ಸ್ಥಾನ ದಕ್ಕಿದೆ.
ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಭಾಗ 1
ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಭಾಗ 1