![]() |
Team anna |
- ಡಾ. ಅಶೋಕ್. ಕೆ. ಆರ್
ನನ್ನ
ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ
ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ
ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’
‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!