![]() |
ಅಪ್ಸರಕೊಂಡ |
ಉಮೇಶ ಮುಂಡಳ್ಳಿ ಭಟ್ಕಳ
ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 38ಕಿ.ಮಿ. ಮತ್ತು ಕುಮಟಾದಿಂದ ಕೇವಲ 19 ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕ ವಿಜಯನಗರದ ರಾಜರೊಡನೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದಾಗಿ ಉಲ್ಲೇಖಗಳಿವೆ. ಇಲ್ಲಿನ ಶರಾವತಿ ಸೇತುವೆ ರಾಜ್ಯದಲ್ಲಿಯೆ ಅತಿಉದ್ದದ ಸೇತುವೆಯಾಗಿದೆ. ಇಲ್ಲಿನ ಪ್ರವಾಸಿತಾಣದಲ್ಲಿ ಕರ್ನಲ್ ಹಿಲ್, ರಾಮತೀರ್ಥ, ಇಡಗುಂಜಿ, ಗುಂಡಬಾಳ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಕುದ್ರಗಿ, ಗೇರುಸೊಪ್ಪ ಮತ್ತು ಅಪ್ಸರಕೊಂಡ ಮೊದಲಾದವುಗಳು ಅತ್ಯಂತ ಆಕರ್ಷಣೀಯವಾಗಿದೆ. ರಾಮತೀರ್ಥ ಹೊನ್ನಾವರದಿಂದ ಕೇವಲ 3ಕಿಮಿ. ಅಂತರದಲ್ಲಿದೆ. ಇಲ್ಲಿ ಸರ್ವಕಾಲಕ್ಕೂ ಬೀಳುವ ತೀರ್ಥ ಅನೇಕ ರೋಗಗಳಿಗೆ ದಿವ್ಯ ಔಷದಿ.