ನಂ. 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) "ಚೆ- ಕ್ರಾಂತಿಯ ಸಹಜೀವನ" ಪುಸ್ತಕಕ್ಕೆ ಲಡಾಯಿ ಪ್ರಕಾಶನದ ಬಸೂ ಬರೆದಿರುವ ಸಾಲುಗಳು.
ಅನ್ಯಾಯವನ್ನು
ಪ್ರತಿಭಟಿಸಿದ್ದಕ್ಕಾಗಿ ಚೆ ನನ್ನ ಸಂಗಾತಿ..
ಜೀವಮಾನವಿಡೀ
ದುಡಿಯುತ್ತ ಸವೆದರೂ ಕಣ್ಣಿಂದ ನೋಡಲಾಗದ,
ಕನಸಿನಲ್ಲೂ ಊಹಿಸಲಾಗದ ಸಾವಿರ ಕೋಟಿ ಎಂಬ
ಧನರಾಶಿಯ ಕುರಿತು ಜನಸಾಮಾನ್ಯ ದಿಗ್ಭ್ರಮೆಗೊಳ್ಳುವಾಗಲೇ
ರಟ್ಟೆ ಕಸುವಿದ್ದರಷ್ಟೇ ಹೊಟ್ಟೆ ತುಂಬುವ, ಪ್ರತಿದಿನದ
ಕೂಳೂ ಅವತ್ತಿನ ಸೂರ್ಯನೊಂದಿಗೇ ಮೂಡಿಬರುವ
ಅನಿವಾರ್ಯ ವಾಸ್ತವ ಅವನನ್ನು ಕಂಗೆಡಿಸುತ್ತಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರು ಫಲವತ್ತಾದ
ನೆಲೆ-ನೆಲ ಅರಸಿ ವಿಶ್ವದ
ಬಡದೇಶಗಳನ್ನು ಸುತ್ತಿ ಪ್ರತಿವರ್ಷ ಸಮಾವೇಶ
ನಡೆಸುತ್ತಾರೆ. ಸಾವಿರಾರು ಕೋಟಿ ಬಂಡವಾಳ `ಬಡದೇಶ’ಗಳತ್ತ ಹರಿದುಬರುತ್ತದೆ. ಹಾಗೆ
ಬಂದದ್ದು ಸ್ಥಳೀಯ ಹಳ್ಳ-ತೊರೆ-ಗುಂಡಿ-ಕೆರೆಗಳಲ್ಲಿರುವುದನ್ನೆಲ್ಲ ಬಾಚಿ ಬರಿದಾಗಿಸಿ
ಭೋರ್ಗರೆದು ಸಮುದ್ರದತ್ತಲೇ ಹರಿಯುತ್ತದೆ. ಮರಳುಗಾಡು, ಬರದ ನಾಡುಗಳು ಆ
ಹರಿವಿನ ದೂರದ ಕನಸಿನಲ್ಲೂ ಇರುವುದಿಲ್ಲ.
Also Read