(ಡೇವಿಡ್ ಡಚ್ ಮನ್ ಸಂಪಾದಿಸಿರುವ ಚೆ - ಕ್ರಾಂತಿಯ ಸಹಜೀವನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ನಾ.ದಿವಾಕರ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ ನಂ.2ರಂದು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ)
ಜೀಸಸ್ ಮಾಂಟೇನ್ ಒರೋಪೆಸ್
ಕ್ಯೂಬಾದಲ್ಲಿ
ತನ್ನ ಪ್ರಾಣಕ್ಕೆ ಅಪಾಯವಿದ್ದುದರಿಂದ ಗಡೀಪಾರು ಆಗಿ ಜುಲೈ
7, 1955ರ ಗುರುವಾರ ಹವಾನಾದಿಂದ ಮೆಕ್ಸಿಕೋಗೆ
ತೆರಳುವ ಮುನ್ನ ಫಿಡೆಲ್ ಕ್ಯಾಸ್ಟ್ರೋ
ಚೆ ಅವರನ್ನು ಭೇಟಿಯಾಗಿದ್ದರು.
ಜುಲೈ
26, 1953ರ ಮೊಂಕಾಡ ರಕ್ಷಣಾ ದಳದ
ಮೇಲಿನ ದಾಳಿ ಪ್ರಜಾ ಸಶಸ್ತ್ರ
ದಂಗೆಯನ್ನು ಹುಟ್ಟುಹಾಕುವ ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು.
ಈ ದಾಳಿಯಲ್ಲಿ ಬದುಕುಳಿದವರನ್ನು
ಪೈನ್ಸ್ ದ್ವೀಪದ ಕಾರಾಗೃಹದಲ್ಲಿ ಬಂಧಿಸಲಾಗಿತ್ತು.
ಮೇ 15, 1955ರ ಭಾನುವಾರದಂದು, ಬಂಧನದ
53 ದಿನಗಳ ನಂತರ ನಮ್ಮೆಲ್ಲರನ್ನೂ ಬಿಡುಗಡೆ
ಮಾಡಲಾಗಿತ್ತು.
ಈ 53 ದಿನಗಳ ಅವಧಿಯಲ್ಲಿ ಹವಾನಾದಲ್ಲೇ
ಇದ್ದ ಫಿಡೆಲ್ ಸಮೂಹ ಮಾಧ್ಯಮಗಳ
ಮೂಲಕ ದಿಟ್ಟವಾಗಿ
ರಾಜಕೀಯ ಸಂಘರ್ಷವನ್ನು ಜಾರಿಯಲ್ಲಿರಿಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಪಾತಕಿ ಕೃತ್ಯಗಳನ್ನು ಮತ್ತು
ಮೊಂಕಾಡ, ಬಯಾರ್ಮೋ ದಾಳಿಯಲ್ಲಿ ಭಾಗಿಯಾದವರ
ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಫಿಡೆಲ್ ಬ್ಯಾಟಿಸ್ಟಾ ಸರ್ಕಾರದ
ದಮನಕಾರಿ ನೀತಿಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆಯ ವಿರುದ್ಧ ಹೋರಾಡುವವರನ್ನು ಹತ್ತಿಕ್ಕುವ,
ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯನ್ನು ಸಮರ್ಥಿಸುವ,
ಶಾಂತಿಯುತ ರಾಜಕೀಯ ಹೋರಾಟಗಳಿಗೆ ಅವಕಾಶವೀಯದ
ಬ್ಯಾಟಿಸ್ಟಾ ಆಡಳಿತದ ವಿರುದ್ಧ ಫಿಡೆಲ್
ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಕೂಡಲೇ ಸಾರ್ವತ್ರಿಕ ಚುನಾವಣೆಗಳನ್ನು
ನಡೆಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕ್ಯೂಬಾ
ದೇಶದಲ್ಲಿ ಪ್ರಜಾತಂತ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾವು ನೀಡುತ್ತಿದ್ದ ಪ್ರಚೋದನಕಾರಿ
ಹೇಳಿಕೆಗಳ ಹಿಂದೆ ಸರ್ವಾಧಿಕಾರಿ ಬ್ಯಾಟಿಸ್ಟಾನನ್ನು
ಒತ್ತಾಯಿಸುವ ಉದ್ದೇಶವಿದ್ದುದನ್ನು ಕಾಣಬಹುದಿತ್ತು.
Also Read