![]() |
ರಾಘವೇಶ್ವರ ಸ್ವಾಮಿ |
ಅದೊಂದು ದುರದೃಷ್ಟವಶಾತ್ ಇತ್ತೀಚಿನ
ದಿನಗಳಲ್ಲಿ ಸರ್ವೇಸಾಧಾರಣ ಎಂದೇ ಕರೆಯಬಹುದಾದ ಒಂದು ಪ್ರಕರಣ. ತಮ್ಮ ಸ್ಥಾನವನ್ನು ಬಳಸಿಕೊಂಡು
ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು, ಲೈಂಗಿಕ ಹಿಂಸೆಗೆ ಒಳಪಡಿಸಿಬಿಟ್ಟರು ಎಂಬ ದೂರು
ಪೋಲೀಸರನ್ನು ತಲುಪುತ್ತದೆ. ದೂರನ್ನು ಸ್ವೀಕರಿಸಿಕೊಂಡ ಪೋಲೀಸರು ಯಾವ ರೀತಿ ಕಾರ್ಯನಿರ್ವಹಿಸಬೇಕು?
ನ್ಯಾಯಾಲಯ ಯಾವ ರೀತಿ ಕೆಲಸ ಮಾಡಬೇಕು? ಸಮಾಜದ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ದೂರು
ಸ್ವೀಕರಿಸಿಕೊಂಡ ಪೋಲೀಸರು ಆಪಾದಿತನನ್ನು ವಿಚಾರಿಸಿ ಅಗತ್ಯವಿದ್ದರೆ ಬಂಧಿಸಿ ನ್ಯಾಯಾಲಯದ ಮುಂದೆ
ಪ್ರಸ್ತುತಪಡಿಸಬೇಕು. ನ್ಯಾಯಾಲಯ ಅಪರಾಧದ ಹಿಂದು ಮುಂದನ್ನು ಪರಿವೀಕ್ಷಿಸಿ ಆಪಾದಿತನಿಗೆ ಜಾಮೀನು
ಕೊಡಬಹುದು ಅಥವಾ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತೆನ್ನಿಸಿದರೆ ಮತ್ತಷ್ಟು
ವಿಚಾರಣೆಗೆ ಅನುಮತಿ ನೀಡಬೇಕು. ಒಂದು ಗುರುತರ ಆರೋಪಕ್ಕೊಳಗಾಗಿರುವ ವ್ಯಕ್ತಿಯನ್ನು ಸಮಾಜ ಆರೋಪ
ಸಾಬೀತಾಗುವವರೆಗೂ ಅಪರಾಧಿಯನ್ನಾಗಿ ಮಾಡುವ ಅವಶ್ಯಕತೆಯಿರದಿದ್ದರೂ ಒಂದು ಪುಟ್ಟ ಅನುಮಾನದ
ದೃಷ್ಟಿಯಿಂದಲಾದರೂ ನೋಡಬೇಕು. ನಂತರದ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದು ಸತ್ಯಾಸತ್ಯತೆಗಳು
ಹೊರಬರಬೇಕು. ಸಂವಿಧಾನಕ್ಕೆ ಕಾನೂನಿಗೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಕರಣಗಳ
ವಿಚಾರಣೆಗಳೂ ಇದೇ ರೀತಿ ನಡೆಯಬೇಕಲ್ಲವೇ? ಕ್ಷಮಿಸಿ ಈ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು
ಆದರೆ ಕೆಲವರು ಹೆಚ್ಚು ಸಮಾನರು.
Also Read
ಧರ್ಮ ಮರೆತ ನಾಡಿನಲ್ಲಿ