ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ
ನಗರ ಕೇಂದ್ರ ಗೃಂಥಾಲಯ. ತರಾಸುರವರ
ತಿರುಗುಬಾಣವನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾಳೆ ಕೀರ್ತನಾ. ಒಂದು ಪುಟ ಓದ್ತಾಳೆ; ನಂತರ ಪುಸ್ತಕ
ಜೋಡಿಸಿದ್ದ ಸಾಲಿನತ್ತ ನೋಡುತ್ತಾ ಅಲ್ಲಿರೋ ಜನರನ್ನು ನೋಡಿ ಬೇಸರಪಟ್ಟು ಮತ್ತೊಂದು ಪುಟ ತಿರುವುತ್ತಾ
ಓದುವುದರಲ್ಲಿ ಮಗ್ನಳಾಗುತ್ತಾಳೆ. ಅವಳು ಗೃಂಥಾಲಯಕ್ಕೆ ಬರುತ್ತಿರುವುದು ಇದು ಎರಡನೆಯ ಬಾರಿ. ಮೊದಲ
ಬಾರಿ ಬಂದಾಗ ಧೈರ್ಯ ಸಾಲದೆ ಅಂದುಕೊಂಡ ಕೆಲಸವನ್ನು ಸಾಧಿಸದೇ ವಾಪಸ್ಸಾಗಿದ್ದಳು.