ಮೇ 15, 2015

ತಲೆಮೇಲೆ ಸೂರಿಲ್ಲದ ಬಡವರ ಮನೆಮುಂದೆ ಶ್ರೀಮಂತರ ರೆಸಾರ್ಟೂ, ಮೋಜಿನಾಟದ ಗಾಲ್ಫ್ ಕೋರ್ಟೂ...

ಮಂಗಳೂರು ನಗರದ ಕೂಗಳತೆಯ ದೂರದಲ್ಲಿರುವ ಬೆಂಗರೆ ಸಮುದ್ರ ತೀರದ ಸುಂದರ ಊರು. ಹದಿನೈದು ಸಾವಿರ ಜನಸಂಖ್ಯೆ, ಎರಡೂವರೆ ಸಾವಿರ ಮನೆಗಳನ್ನು ಹೊಂದಿರುವ ಬೆಂಗರೆಯಲ್ಲಿ ಬ್ಯಾರಿ ಮುಸ್ಲಿಮರು, ಮೊಗವೀರ ಸಮುದಾಯದವರು ಸಮ ಸಂಖ್ಯೆಯಲ್ಲಿದ್ದಾರೆ. ಮೀನುಗಾರಿಕೆ ಸಂಭಂಧಿಸಿ ಸಮುದ್ರವನ್ನೇ ನೆಚ್ಚಿ ಬದುಕುವ ಈ ಕಡಲ ಮಕ್ಕಳ ಬದುಕಿನ ಮೇಲೆ ಬಂಡವಾಳಶಾಹಿ ಕರಿನೆರಳು ಬಿದ್ದಿದೆ. ಇವರ ಊರಿನ ಉದ್ದಕ್ಕೂ ಮೈಚಾಚಿ ಮಲಗಿರುವ ನೂರೈವತ್ತು ಎಕರೆ ಸಮುದ್ರ ತೀರವನ್ನು ಸರಕಾರ ಪಿ ಪಿ ಪಿ ಯೋಜನೆಯನ್ವಯ ಖಾಸಗಿ ಶ್ರೀಮಂತ ಉದ್ಯಮಿಗೆ ಬಹುತೇಕ ಉಚಿತವಾಗಿ ಧಾರೆ ಎರದಿದೆ. ಉದ್ಯಮಿ ಈ ಚಿನ್ನದಂತ ಸಮುದ್ರ ದಂಡೆಯಲ್ಲಿ ನೂರೈವತ್ತು ಗೆಸ್ಟ್ ಹೌಸ್ ವಿಲ್ಲ ರೆಸಾರ್ಟ್, ಧಣಿಗಳ ಮೋಜಿನಾಟದ ಗಾಲ್ಫ್ ಕೋರ್ಟ್ ನಿರ್ಮಿಸಲು ಹೊರಟಿದ್ದಾರೆ. ಅದಕ್ಕಾಗಿ ಊರು ಮತ್ತು ಸಮುದ್ರ ದಂಡೆಯನ್ನು ಬೇರ್ಪಡಿಸಲು ಹತ್ತಡಿ ಎತ್ತರದ ರಕ್ಷಣಾಗೋಡೆ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಬೆಂಗರೆಯ ಬಡಪಾಯಿ ಜನತೆ ಭೀತಿಗೊಂಡಿದ್ದಾರೆ. ತಮ್ಮ ಮತ್ತು ಸಮುದ್ರದ ಮದ್ಯೆ ಮೇಲೇಳುತ್ತಿರುವ ಗೋಡೆ ಸಮುದ್ರದ ಜೊತೆಗಿನ ತಮ್ಮ ಶತಮಾನದ ನಂಟನ್ನು ಕೊನೆಗೊಳಿಸುವುದನ್ನು ಕಂಡು ಕಂಗಾಲಾಗಿದ್ದಾರೆ. ಈಗಲೇ crz ನೆಪಹೇಳಿ ಡೋರ್ ನಂಬ್ರ, ವಿದ್ಯುತ್, ನೀರು ಕೊಡದೆ ಅಕ್ರಮವಾಸಿಗಳು ಎಂದು ಕರೆಯುವ ಸರಕಾರ, ಸಮುದ್ರದೊಂದಿಗೆ ತಮ್ಮ ನಂಟನ್ನು ಕೊನೆಗೊಳಿಸಿ ಮೀನುಗಾರಿಕೆ ಮಾಡದಂತೆ ತಡೆಯುವುದಲ್ಲದೆ, ಮೋಜಿನಾಟಕ್ಕೆ ಬರುವ ಶ್ರೀಮಂತರ ಅನುಕೂಲಕ್ಕಾಗಿ ತಮ್ಮನ್ನು ಒಕ್ಕಲೆಬ್ಬಿಸುವುದು ನಿಶ್ಚಿತ ಎಂದು ಆತಂಕಿತರಾಗಿದ್ದಾರೆ. ಬಡವರ ಗುಡಿಸಲುಗಳ ಮುಂದೆ ತಲೆ ಎತ್ತಲಿರುವ ಶ್ರೀಮಂತರ ಮೋಜಿನಾಟದ ಯೋಜನೆಯ ವಿರುದ್ದ dyfi ಧ್ವನಿ ಎತ್ತಿದೆ, ಇಂದು ಸ್ಥಳೀಯ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ಹೋರಾಟಕ್ಕೆ ಚಾಲನೆ ದೊರಕಿದೆ. ಬಡವರ ಗುಡಿಸಲ ಮುಂದೆ ಮಹಲುಗಳ ಘರ್ಜನೆಯ ಸಹಿಸಲಾಗದು...
(ಮುನೀರ್ ಕಾಟಿಪಳ್ಳರವರ ಫೇಸ್ ಬುಕ್ ಪುಟದಿಂದ)

ಆಗ 4, 2014

ಚೀನಾದಲ್ಲಿ ಭ್ರಷ್ಟ ಅಧಿಕಾರಿಗಳ ಆತ್ಮಹತ್ಯೆ!!

ಭಾರತೀಯರು ಬೆಚ್ಚಿ ಬೀಳುವಂತ ಸುದ್ದಿಯೊಂದು ಪಕ್ಕದ ಚೀನಾದಿಂದ ಬಂದಿದೆ! ಇಲ್ಲ ಇಲ್ಲ ಇದು ಗಡಿ ಗಲಾಟೆಯೂ ಅಲ್ಲ, ಯುದ್ಧವೂ ಅಲ್ಲ! ಚೀನ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟತೆ ಮಾಡಿ ಸುಸ್ತಾಗಿ ಕೊನೆಗೆ ಈ ಅನಗತ್ಯ ಹೆಚ್ಚುವರಿ ಧನಾಗಮನದಿಂದ ಮನಸ್ಸಾಕ್ಷಿ ಕಲಕಿದಂತಾಗಿ ಮಾಡಿದ ಅನ್ಯಾಯಗಳನ್ನೆಲ್ಲ ನೆನೆದು ಪ್ರಾಯಶ್ಚಿತದ ರೂಪದಲ್ಲಿ ಆತ್ಮಹತ್ಯೆಗೆ ಶರಣಾಗಿಲ್ಲ.

ಜೂನ್ 30, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 30



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 29 ಓದಲು ಇಲ್ಲಿ ಕ್ಲಿಕ್ಕಿಸಿ
“ಇನ್ನೂ ಒಂದು ತಿಂಗಳು ಏನು ಮಾಡೋದು ಲೋಕಿ?” ದುಗುಡ ತುಂಬಿದ ದನಿಯಲ್ಲಿ ಕೇಳಿದಳು ಪೂರ್ಣಿಮಾ.

ಜೂನ್ 16, 2014

ಬಣ್ಣ ಬಯಲಾಗತೊಡಗಿದೆ.

Muneer Katipalla

ಇಂಡಿಯಾ ದೇಶದ ಜನಸಾಮಾನ್ಯರ, ಬಡವರ ನಾಯಕ, ಬಡತನ, ಅಸಮಾನತೆಯ ನಿವಾರಕ ಎಂಬ ವರ್ಚಸ್ಸಿನೊಂದಿಗೆ, ದೇಶದ ಎಲ್ಲಾ ವಿಭಾಗದ ಜನತೆಯ ಬೆಂಬಲ ಪಡೆದು ಗೆದ್ದುಬಂದು ದೆಹಲಿ ಸಿಂಹಾಸನ ಏರಿದ ನರೇಂದ್ರ ಮೋದಿ ಬಣ್ಣ ಬಹಳ ವೇಗವಾಗಿ ಬಯಲಾಗತೊಡಗಿದೆ. ಪ್ರಮಾಣವಚನ ಸ್ವೀಕರಿಸಿ ವಾರದೊಳಗಡೆ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಂದಾದ ಇಂಡಿಯಾದ ನೂತನ ಚಕ್ರಾಧಿಪತಿ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೇಶದ ಆರ್ಥಿಕತೆ ಗಟ್ಟಿಗೊಳಿಸಲು ಕೆಲವು ಕಠಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ, ಇದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರಿಗೆ ಅಪ್ರಿಯ ಆಗಬಹುದು. ದೇಶದ ಭವಿಷ್ಯದ ಧೃಷ್ಟಿಯಿಂದ ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು ಅಂದಿದ್ದಾರೆ.

ಮೇ 20, 2014

ನಿರೀಕ್ಷೆಗಳನ್ನು ಮೀರಿಸಿದ ಮತದಾರ “ಪ್ರಭು”



ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.

ಏಪ್ರಿ 23, 2014

ಕಬೀರನ ಪರ ಹೋರಾಟ ದಿಕ್ಕು ತಪ್ಪದಿರಲಿ

ಕಬೀರನ ಹತ್ಯೆಯ ವಿರುದ್ಧದ ಪ್ರತಿಭಟನೆ ಆತನ ಧರ್ಮದ ಕಾರಣದಿಂದಾಗಿ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಿರುವಾಗ ಮುನೀರ್ ಕಾಟಿಪಳ್ಳ ಬರೆದಿರುವ ಈ ಪುಟ್ಟ ಲೇಖನ ಪ್ರಸ್ತುತವೆನ್ನಿಸಿತು.

ಕಬೀರನ ಹತ್ಯೆ ಮಾಡಿದ್ದು ಪ್ರಭುತ್ವ. ಪ್ರಭುತ್ವ ಮಾಡಿರುವ ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕೇವಲ ಮುಸ್ಲಿಮರ ಜವಾಬ್ದಾರಿ ಅಲ್ಲ.ಇದು ಮುಸ್ಲಿಮರಿಗೆ ಸೀಮಿತವಾದ ವಿಷಯವೂ ಅಲ್ಲ. ಪ್ರಭುತ್ವ ಮಾಡಿದ ಕೊಲೆಯ ವಿರುದ್ದ ಹೋರಾಟದಲ್ಲಿ ಇಡೀ ಜನ ಸಮೂಹ ಪಾಲ್ಗೊಳ್ಳಬೇಕು.ಆ ರೀತಿಯ ಐಕ್ಯ ಹೋರಾಟ ನಡೆದರೆ ಮಾತ್ರ ಕಬೀರ್ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಅಂತಹ ಐಕ್ಯ ಹೋರಾಟದ ಅಪೂರ್ವ ಸನ್ನಿವೇಶ ನಿರ್ಮಾಣವಾಗುತ್ತಿರುವುದನ್ನು ಕಂಡು, ಜನಚಳುವಳಿ ಎದ್ದುಬರುತ್ತಿರುವುದನ್ನು ಕಂಡು ಪ್ರಭುತ್ವ ಬೀತಿಗೊಂಡಿದೆ. ಹಿಂದು ಮುಸ್ಲಿಂ ಹೀಗೆ ಎಲ್ಲಾ ವಿಭಾಗದ ಜನ ಕಬೀರ್ ತಮ್ಮ ಮನೆಯ ಮಗನೇನೋ ಎಂಬಂತೆ ಕಬೀರ್ ಪರ ದನಿ ಎತ್ತುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ.ಈ ಹೋರಾಟವನ್ನು ಹೇಗಾದರು ಮುರಿಯಬೇಕು ಎಂದು ಪಿತೂರಿ ನಡೆಸತೊಡಗಿದೆ.

ಏಪ್ರಿ 1, 2014

ನಮೋನೂ ಅಲ್ಲ ರಾಗಾನೂ ಅಲ್ಲ ಆಡಳಿತ ನಡೆಸುವುದು ಕಾಂಚಾಣ.....

ಪ್ರಜಾವಾಣಿ ಪತ್ರಿಕೆಯಿಂದ
ಡಾ ಅಶೋಕ್ ಕೆ ಆರ್

ನಮ್ಮ ದೇಶದ ಆಡಳಿತ ನಡೆಸುವುದ್ಯಾರು? ಬಿಜೆಪಿ ಕಾಂಗ್ರೆಸ್ ತೃತೀಯ ರಂಗ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮೋದಿ, ಅಡ್ವಾಣಿ? ತತ್ವ ಸಿದ್ಧಾಂತಗಳ ಪಕ್ಷವೋ ಆದರ್ಶ ನೀತಿ ನಿಯಮಗಳ ವ್ಯಕ್ತಿಯೋ ದೇಶವನ್ನು ಮುನ್ನಡೆಸುತ್ತಾರೆಂಬುದು ನಮ್ಮ ಕನಸಷ್ಟೇ. ಪಾಶ್ಚಿಮಾತ್ಯ ದೇಶಗಳಲ್ಲಿ ಎಂದೋ ಘಟಸಿ ಅಲ್ಲಿನವರಲ್ಲಿ ಹೆಚ್ಚಿನವರು ಅದನ್ನೂ ಒಪ್ಪಿಯೂ ಮುಗಿದು ಹೋದ ಸಂಗತಿಗಳು ಭಾರತದಲ್ಲಿ ಈಗ ಬೆಳಕಿಗೆ ಬರುತ್ತಿವೆ. ಆಡಳಿತವಿರುವ ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ ಇರಲಿ ಸರಕಾರದ ನೀತಿ ನಿಯಮಗಳ ದಿಕ್ಕುದೆಸೆಗಳನ್ನು ನಿರ್ಧರಿಸುವವರು ಕೆಲವೇ ಕೆಲವು ಉದ್ಯಮಪತಿಗಳು.

ಮಾರ್ಚ್ 19, 2014

ಈ ಅಭ್ಯರ್ಥಿಯ ಒಟ್ಟು ಆಸ್ತಿ ರೂ 750 ಮಾತ್ರ!

ಮುನೀರ್ ಕಾಟಿಪಳ್ಳ
ದೇಶಾದ್ಯಂತ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭ್ರಷ್ಟಾಚಾರ ವಿರೋಧಿ , ಪ್ರಾಮಾಣಿಕತೆ , ಸರಳತೆ ಮುಂತಾದ ವಿಷಯಗಳು ಗಂಭೀರ ರಾಜಕೀಯ ಚರ್ಚೆಯ ವಿಷಯವಾಗಿದೆ. ಕಳೆದ ಲೋಕಸಭೆಯಲ್ಲಿ ಕೋಟ್ಯಾಧೀಶರುಗಳ ಸಂಖ್ಯೆ ಗಣನೀಯವಾಗಿತ್ತು. ಎಲ್ಲಾ ರಾಜ್ಯಗಳಲ್ಲಿ ವಿಧಾನಸಭೆಗೆ ಆರಿಸಿ ಬರುವವರು ಬಹುಕೋಟಿಯ ಒಡೆಯರು ಆಗಿರುವುದು ಈಗ ಒಂದು ಪದ್ದತಿಯಾಗಿದೆ.

ಜನ 24, 2014

ತಾರತಮ್ಯ

ಮುನೀರ್ ಕಾಟಿಪಳ್ಳ
ಇಂದು ಸಾವಿರಾರು ಬಡ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರು. ಮೀಡಿಯಾಗಳಿಗೆ ಇದು ಸುದ್ದಿ ಅಲ್ಲ. ಹಜಾರೆ, ಕ್ರೇಜಿ ಮುಂತಾದವರ ಎಲ್ಲ ಪ್ರತಿಭಟನೆಗಳನ್ನು ದಿನವಿಡೀ ತೋರಿಸೋ ಮೀಡಿಯಾ ಕಮ್ಯುನಿಷ್ಟರ ನಾಯಕತ್ವದ ಬಡವರ ನಿಜ ಹೋರಾಟಗಳನ್ನು ಕಡೆಗಣಿಸುತ್ತದೆ. ಇಷ್ಟಕ್ಕೆ ವಾಸ್ತವದ ಅರಿವಿಲ್ಲದವರು ಕಮ್ಯುನಿಷ್ಟರು ಅಪ್ರಸ್ತುತ ಎಂದು ಹೀಗಳೆಯುತ್ತಾರೆ.