ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!
ಮಾರ್ಚ್ 8, 2012
ಮಾರ್ಚ್ 5, 2012
ಕರ್ತವ್ಯ ಮರೆತವರ ಕರುನಾಡಿನಲ್ಲಿ
![]() |
ಪೋಲೀಸರಿಂದ ದಾಂಧಲೆ. ಮೂಲ - ಫೇಸ್ ಬುಕ್ |
![]() |
ಪತ್ರಕರ್ತರ ಪ್ರತಿಭಟನೆ. ಮೂಲ - ಡೆಕ್ಕನ್ ಹೆರಾಲ್ಡ್ |
![]() |
ವಕೀಲರ ದೌರ್ಜನ್ಯ. ಮೂಲ - ಫೇಸ್ ಬುಕ್ |
ಫೆಬ್ರ 27, 2012
ಫೆಬ್ರ 16, 2012
ಪಾಕಿಸ್ತಾನ್ ಜಿಂದಾಬಾದ್!!
ವಿಧಾನಸಭಮ್ಮ
ಶ್ಯಾನೆ ಬೇಸರದಲ್ಲಿ ಕುಂತಿದ್ದಳು. ‘ಇದ್ಯಾಕಕ್ಕ ಹಿಂಗ್ ಆಕಾಶ್ವೇ ತಲೆ ಮೇಲ್ ಬಿದ್ದೋಳ್ತರ ಮುಖ ಮಾಡ್ಕಂಡಿದ್ದೀಯೆ?
ಅದರಲ್ಲೂ ಕಲಾಪ ನಡೆಯೋ ಟೇಮ್ನಾಗೆ?’ ಎಂದು ಕುಶಲೋಪರಿ ವಿಚಾರಿಸಿದ ಹೈಕೋರ್ಟ್. ‘ಹಲ್ಕಾ ನನ್ ಮಕ್ಳು’
ಗೊಣಗಿ ತಲೆತಗ್ಗಿಸಿದಳು. ಕಡತದಿಂದ ತೆಗೆಯುವಂಥ ಮಾತುಗಳನ್ನು ವಿಧಾನಸಭಮ್ಮನೇ ಆಡಿದ್ದು ಕೇಳಿ ಅಚ್ಚರಿಯಾಯ್ತು.
‘ಯಾರಕ್ಕ ಹಲ್ಕ ನನ್ ಮಕ್ಳು?’
ಜನ 23, 2012
ಒಂದಷ್ಟು ಆಚರಣೆಗಳ ಪೋಸ್ಟ್ ಮಾರ್ಟಮ್!
ಕೆಲವು ದಿನಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನೊಂದು ಲೇಖನ
ನೆಂಟರೊಬ್ಬರ ಮದುವೆಯಲ್ಲಿ ಊಟಕ್ಕೆ ಕುಳಿತಿದ್ದಾಗ
ಬಾಳೆಎಲೆ ಬಡಿಸುತ್ತಿದ್ದವನಿಗೆ ನನ್ನ ಪಕ್ಕ ಕುಳಿತಿದ್ದ ಚಿಕ್ಕಪ್ಪ ‘ಎಲೆಯ ತುದಿ ಎಡಕ್ಕೆ ಬರುವಂತೆ
ಹಾಕಪ್ಪ’ ಎಂದು ಸೂಚಿಸಿದರು. ಅವನು ಅದನ್ನೇ ಪಾಲಿಸಿದ. ‘ಯಾಕೆ?’ ಪ್ರಶ್ನೆಯೆಸೆದು ಚಿಕ್ಕಪ್ಪನೆಡೆಗೆ
ನೋಡಿದೆ. ‘ಎಲ್ಲಾದಕ್ಕೂ ಯಾಕೆ ಅಂತ ಕೇಳ್ತಾರಾ? ನಡೆದುಕೊಂಡು ಬಂದಿದೆ. ಸಂಪ್ರದಾಯ’ ಅವರ ಉತ್ತರ ಸಿದ್ಧವಾಗಿತ್ತು.
ಉಪ್ಪು, ಕೋಸಂಬರಿ, ಬೀನಿಸ್ಸು ಪಲ್ಯ, ಮೊಸರು ಬಜ್ಜಿ ಎಲ್ಲ ಬಡಿಸಿದರು. ಎಲೆ ನೋಡಿದೆ. ಸಂಪ್ರದಾಯವೂ
ಅಲ್ಲ, ಮಣ್ಣೂ ಅಲ್ಲ ಎಂದು ಎಲೆ ನೋಡುತ್ತಿದ್ದಂತೆ ತಿಳಿಯಿತು! ಹೆಚ್ಚಾಗಿ ನಾವೆಲ್ಲ ಬಲಗೈ ಉಪಯೋಗಿಸುವವರು.
ಎಲೆಯ ಬಲಭಾಗ ತುದಿಯ ಭಾಗಕ್ಕಿಂತ ಅಗಲವಾಗಿರುತ್ತೆ, ತಿನ್ನಲು ಅನುಕೂಲವಾಗಲಿಕ್ಕಾಗಿ ತುದಿ ಎಡಭಾಗಕ್ಕಿರಬೇಕು
ಎಂಬುದು ಸರಿಯಾದ ವಿವರಣೆ, ಮತ್ತೇನಿಲ್ಲ. ಬಹಳಷ್ಟು ಆಚರಣೆಗಳ ಹಿಂದೆ ವೈಚಾರಿಕ ಕಾರಣವಿರುತ್ತದೆಯಾದರೂ
ಆ ಆಚರಣೆಗಳು ಇವತ್ತಿನ ಮಟ್ಟಿಗೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಷ್ಟೇ.
ಜನ 19, 2012
ಪಬ್ಲಿಕ್ ಟಿ.ವಿ ಪಬ್ಲಿಕ್ಕಿಗಾಗಿಯೇ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ . . .

ಜನ 5, 2012
ಜನ 4, 2012
ಒಂದು ಗಲಭೆಯ ಸುತ್ತ. . .
--> ಡಾ. ಅಶೋಕ್. ಕೆ. ಆರ್
ಒಂದು ಬೆಳಿಗ್ಗೆ ಬಸ್ಸಿನಲ್ಲಿ: - “ಏ ರಫೀಕ್. ಬಾ ಇಲ್ಲಿ. ಇಲ್ಲೇ ಸೀಟು ಖಾಲಿ ಇದೆ”.
ರಫೀಕ್ ಅವಳೆಡೆಗೆ ನೋಡಿದ. ಹಿಂದಿರುಗಿ ತನ್ನ ಗೆಳೆಯರಾದ ಗಣೇಶ, ರಾಜು, ರಷೀದ್ ಕುಳಿತಿದ್ದೆಡೆಗೆ ನೋಡಿದ.
ಮುಸಿಮುಸಿ ನಗಲಾರಂಭಿಸಿದ್ದರು. “ಏನ್ ಯೋಚಿಸುತ್ತಿದ್ದೀಯೋ? ಬಾ ಬೇಗ ಏನೋ ಕೊಡಬೇಕು” ಅವಳು ಮತ್ತೆ
ಕೂಗಿದಳು. ನಿಂತಲ್ಲಿಂದ ಒಂದಿಂಚೂ ಅತ್ತಿತ್ತ ಕದಲದೆ ಅವಳೆಡೆಗೆ ನೋಡುತ್ತಾ “ಇಲ್ಲ ರಶ್ಮಿ ದೀದಿ. ನಾನಿಲ್ಲೇ
ಎಲ್ಲಾದರೂ ಕೂತ್ಕೋತೀನಿ” ಎಂದ್ಹೇಳಿ ತಲೆತಗ್ಗಿಸಿದ. “ಯಾಕೋ? ಏನಾಯ್ತು? ಅಮ್ಮ ನಿನಗೂ ತಿಂಡಿ ಕೊಟ್ಟು
ಕಳುಹಿಸಿದ್ದಾರೆ. ಬಾ”. ತಗ್ಗಿಸಿದ ತಲೆಯನ್ನು ಮೇಲೆತ್ತದೆ “ಇಲ್ಲ ದೀದಿ. ನಾನಲ್ಲಿ ಬಂದು ಕೂತರೆ ಇವರೆಲ್ಲ
ರೇಗಿಸ್ತಾರೆ. ಹೆಣ್ಮುಕ್ಕ ಹೆಣ್ಮುಕ್ಕ ಅಂತಾರೆ. ಆಮೇಲೆ ತಗೋತೀನಿ ಬಿಡು”. ರಶ್ಮಿ ಮತ್ತವಳ ಪಕ್ಕದಲ್ಲಿ
ಕುಳಿತಿದ್ದ ಅವಳ ಗೆಳತಿ ಜೋರು ದನಿಯಲ್ಲಿ ನಕ್ಕರು. “ಈಗ ಎಂಟನೇ ತರಗತಿಗೆ ಬಂದಿದ್ದೀರ. ದೊಡ್ಡ ಗಂಡಸಂಗೆ
ಆಡ್ತೀರಲ್ಲ. ಬಾರೋ ಇಲ್ಲಿ. ಅದ್ಯಾವನು ರೇಗಿಸ್ತಾನೋ ನಾನೂ ನೋಡ್ತೀನಿ” ಎಂದು ಜೋರು ಮಾಡಿದಳು. ರಫೀಕ
ಮತ್ತೆ ತನ್ನ ಗೆಳೆಯರೆಡೆಗೆ ನೋಡಿದ. ನಗು ಕಡಿಮೆಯಾಗಿತ್ತು, ಮಾಯವಾಗಿರಲಿಲ್ಲ. ‘ದಯವಿಟ್ಟು ರೇಗಿಸಬೇಡ್ರೋ’
ಎಂದು ಕಣ್ಣಿನಲ್ಲೇ ಬೇಡುತ್ತ ರಶ್ಮಿಯ ಪಕ್ಕ ಬಂದು ಕುಳಿತ. “ಇನ್ನು ಸರಿಯಾಗಿ ಮೀಸೆ ಮೂಡಿಲ್ಲ ನಿನ್ನ
ಫ್ರೆಂಡ್ಸಿಗೆ, ಪಿಯುಸಿ ಓದ್ತಿರೋ ನನ್ನನ್ನೂ ರೇಗಿಸ್ತಾರಂತ?!” ಅವಳ ಪ್ರಶ್ನೆಗೆ ಉತ್ತರವೀಯದೆ ಆಕೆಯಿತ್ತ
ತಿಂಡಿಯನ್ನು ತಿನ್ನತೊಡಗಿದ. ಬಸ್ಸು ಹೊರಟಿತು.
ಡಿಸೆಂ 7, 2011
ಶಿಕ್ಷಣದ ಮಾಧ್ಯಮ ಯಾವುದಿರಬೇಕು?
ಡಾ ಅಶೋಕ್. ಕೆ. ಆರ್
ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು
ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ
ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು
ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು
ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು
ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ
ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ
ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ
ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ
ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ
ಪ್ರಮುಖವಾಗುತ್ತಿವೆ ಏಕೆ?