Dr Ashok K R
ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಆತನ
ಹೆಸರು ಹಾರ್ವೆ ಫಾಲ್ಸಿಯಾನಿ. ಮೂಲತಃ ಫ್ರೆಂಚಿನವ. ಸ್ವಿಝರ್ಲ್ಯಾಂಡಿನ ಜಿನೀವಾದಲ್ಲಿರುವ ಹೆಚ್.ಎಸ್.ಬಿ.ಸಿ
ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾತ. ಕೆಲಸಕ್ಕೆ ಸೇರಿಕೊಂಡ ನಂತರ ತನ್ನ ಬ್ಯಾಂಕು ಹೇಗೆ ವಿವಿಧ ದೇಶಗಳ
ತೆರಿಗೆಗಳ್ಳರ ಹಣವನ್ನು ಜೋಪಾನವಾಗಿರಿಸುತ್ತಿದೆ ಎಂಬುದನ್ನು ಕಂಡುಕೊಂಡ. ಬ್ಯಾಂಕಿನ ಇತರೆ ಸಹೋದ್ಯೋಗಿಗಳಂತೆ
ಅವ್ಯವಹಾರವನ್ನು ನೋಡಿದ ನಂತರ ಕಣ್ಣು ಮುಚ್ಚಿ ಕೂರದೆ ತನಗಿರುವ ಕಂಪ್ಯೂಟರ್ ಜ್ಞಾನವನ್ನುಪಯೋಗಿಸಿ
ನಿಧಾನಕ್ಕೆ ಬ್ಯಾಂಕಿನ ಸರ್ವರುಗಳಿಂದ ಹೆಚ್.ಎಸ್.ಬಿ.ಸಿ ಬ್ಯಾಂಕಿನ ಖಾತೆದಾರರ ವಿವರಗಳನ್ನು ಒಂದೊಂದಾಗಿ
ಸಂಗ್ರಹಿಸಲಾರಂಭಿಸುತ್ತಾನೆ. ಕೊನೆಗೆ ಇಪ್ಪತ್ತನಾಲ್ಕು ಸಾವಿರ ಖಾತೆದಾರರ ವಿವರಗಳೊಂದಿಗೆ (ಒಂದು ಅಂದಾಜಿನ
ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಖಾತೆಗಳು) ಪರಾರಿಯಾಗುತ್ತಾನೆ.