ಡಾ ಅಶೋಕ್ ಕೆ ಆರ್.
ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿ
ಮುಂದಿನ ವರುಷ ನಡೆಯುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹೊಸ ಹುರುಪಿನಿಂದ ಮತ್ತಷ್ಟು ಆತ್ಮಾವಲೋಕನದಿಂದ
ತಯ್ಯಾರಿ ನಡೆಸಲು ಬೇಕಾದ ಮಾರ್ಗದರ್ಶನವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕೆಲವರ ಪ್ರಕಾರ ಇದು
ಮುಂದಿನ ಫೈನಲ್ ಲೋಕಸಭಾ ಚುನಾವಣಾ ಪೂರ್ವದಲ್ಲಿ ನಡೆದ ಸೆಮಿಫೈನಲ್! ದಕ್ಷಿಣದ ಯಾವೊಂದು ರಾಜ್ಯದಲ್ಲೂ
ನಡೆಯದ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ನಡೆಯದ ಈ ಚುನಾವಣೆಯನ್ನು ಸೆಮಿಫೈನಲ್
ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ?