![]() |
ಹಿಂದಿ ಹೇರಿಕೆ |
Dr Ashok K R
ತಾತ
ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ
ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ
ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು
ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ
ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ
ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ
ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ
ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ
ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.