ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ
“ನಿಮ್ಮ ಹೆಸರು ಏನಾದ್ರೆ ನನಗೇನು?
ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್
ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ
ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ
ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ,
ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ
ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.