![]() |
ಚಿತ್ರ ೧: ಮಡಿವಾಳದಲ್ಲಿ ಸಿಕ್ಕ ಬಣ್ಣದ ಕೊಕ್ಕರೆ |
ಡಾ. ಅಶೋಕ್. ಕೆ. ಆರ್
ಮಂಡ್ಯ ಜಿಲ್ಲೆಯಲ್ಲಿರುವ ಕೊಕ್ಕರೆ ಬೆಳ್ಳೂರಿಗೆ ಆ ಹೆಸರು ಬರಲು ಈ ಬಣ್ಣದ ಕೊಕ್ಕರೆಯೇ ಕಾರಣ. ಚಳಿಯ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಈ ಪಕ್ಷಿಗಳು ಸಂತಾನವನ್ನು ಬೆಳೆಸಿಕೊಂಡು ಇಲ್ಲಿ ಬೇಸಿಗೆ ಶುರುವಾಗುವ ನಂತರದಲ್ಲಿ ಮರಳಿಹೋಗುತ್ತವೆ. ಕೆಲವು ಕೊಕ್ಕರೆಗಳು ಇಲ್ಲಿನ ವಾತಾವರಣಕ್ಕೆ ಪೂರ್ಣವಾಗಿ ಹೊಂದಿಕೊಂಡು ಇಲ್ಲೇ ಶಾಶ್ವತವಾಗಿ ನೆಲೆಸುವುದೂ ಇದೆ.
ಆಂಗ್ಲ ಹೆಸರು: Painted Stork (ಪೇಂಟೆಡ್ ಸ್ಟಾರ್ಕ್)
ವೈಜ್ಞಾನಿಕ ಹೆಸರು: Mycteria Leucocephala (ಮೈಕ್ಟೀರಿಯಾ ಲ್ಯೂಕೊಕೆಫಾಲ)