Dr Ashok K R
ಕಳೆದ
ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎಯ ನೇತೃತ್ವ ವಹಿಸಿದ್ದ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ಭಾಷಣದಲ್ಲಿ
ಪ್ರಸ್ತಾಪಿಸುತ್ತಿದ್ದುದು ಪರರಾಷ್ಟ್ರಗಳಲ್ಲಿರುವ – ಹೆಚ್ಚಿನದಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ
‘ಕಪ್ಪು ಹಣ’ವನ್ನು ಭಾರತಕ್ಕೆ ನೂರೇ ದಿನಗಳಲ್ಲಿ ವಾಪಸ್ಸು ತರುವ ಬಗ್ಗೆ. ನೂರು ದಿನಗಳಲ್ಲಿ ಅಷ್ಟೂ
ಹಣವನ್ನು ವಾಪಸ್ಸು ತಂದು ಭಾರತದ ಏಳ್ಗೆಗೆ ಕಾಣ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದರು. ಉಳಿದನೇಕ ಕಾರಣಗಳಿಂದ
ಮತ್ತು ತಮ್ಮ ವೈಯಕ್ತಿಕ ಪ್ರಭಾವದಿಂದ ಬಿಜೆಪಿ ಏಕಪಕ್ಷವಾಗಿ ಸರಕಾರ ನಡೆಸುವಷ್ಟು ಸ್ಥಾನಗಳನ್ನು ಪಡೆಯಲು
ಸಾಧ್ಯವಾಯಿತು. ನಿರೀಕ್ಷೆಯಂತೆ ನೂರು ದಿನಗಳೊಳಗೆ ಕಪ್ಪು ಹಣವೆಲ್ಲ ವಾಪಸ್ಸು ಬಂತೇ?