![]() |
ಲಾಬಿಗೆ ಮಣಿದ ಸರ್ಕಾರ? |
“ಮಾತು
ಬೆಳ್ಳಿ ಮೌನ ಬಂಗಾರ”ವೆಂಬ ಗಾದೆಮಾತಿನ ಮೊದಲರ್ಧದ ಅರ್ಥ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ
ಆಡಳಿತಾವಧಿಯಲ್ಲಿ ಅನುಭವಕ್ಕೆ ಬಂದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಗಾದೆಮಾತಿನ
ಉಳಿದರ್ಧವನ್ನು ಅರ್ಥ ಮಾಡಿಸುವ ಪಣ ತೊಟ್ಟಂತಿದೆ! ಅನಿವಾರ್ಯವಿದ್ದಾಗಲೂ ಮಾತನಾಡದ ಪ್ರಧಾನಿಯನ್ನು
ನೋಡಿದ ನಂತರ ಅವಶ್ಯಕತೆಗಿಂತ ಹೆಚ್ಚಾಗಿ ಅದದೇ ಮಾತುಗಳನ್ನು ನೋಡುವ ಸೌಭಾಗ್ಯ ನಮ್ಮದು! ನರೇಂದ್ರ
ಮೋದಿ ತಮ್ಮ ಮಾತಿನ ಮೋಡಿಯಿಂದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಮತ್ತು ತಾವು
ಮಾತನಾಡಿದ್ದೆಲ್ಲ ನಿಜವೆಂದು ಕೇಳುಗರು ನಂಬುವಂತೆ ಮಾಡುತ್ತಿರುವುದು ಸುಳ್ಳಲ್ಲ. ಉಳಿದದ್ದೇನೇ
ಇರಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರಂತೆ ಚಾಣಾಕ್ಷತನದಿಂದ ಮಾಧ್ಯಮವನ್ನು ನಿರ್ವಹಿಸಿದವರನ್ನು
ನಾನಂತೂ ನೋಡಿಲ್ಲ. ಪಿ.ಎಮ್.ಓದಿಂದ ಏನು ಸುದ್ದಿ ಬರುತ್ತದೋ ಅದಷ್ಟೇ ಸದ್ದು ಮಾಡುತ್ತಿದೆ ಬಹುತೇಕ
ಮುಖ್ಯವಾಹಿನಿ ಮಾಧ್ಯಮಗಳಲ್ಲಿ. ರಾಜಕೀಯ ಪಕ್ಷದ – ರಾಜಕಾರಣಿಯ ದೃಷ್ಟಿಯಿಂದ ಅವರು
ಮಾಡುತ್ತಿರುವುದು ನೂರು ಪ್ರತಿಶತಃ ಸರಿ. ಆದರೀ ಮಾಧ್ಯಮಗಳಿಗೆ ಏನಾಗಿದೆ? ಜನಸಮೂಹದ ಮೇಲೆ
ಹೊರೆಯಾಗುವಂತಹ ನಿರ್ಧಾರಗಳನ್ನು ಎನ್.ಡಿ.ಎ ಸರಕಾರ ತೆಗೆದುಕೊಂಡಿರುವುದು ಕೇವಲ ಒಳಪುಟಗಳಲ್ಲಿ
ಸಣ್ಣ ವರದಿಯಾಗಿ ಮರೆಯಾಗಿದೆ, ಕೆಲವದರಲ್ಲಿ ಆ ಪುಟ್ಟ ವರದಿಯೂ ಇಲ್ಲ, ಕೆಲವೇ ಕೆಲವು
ವಿಶ್ಲೇಷಣಾತ್ಮಕ ವರದಿಗಳನ್ನು ನೀಡಿವೆ. ಇನ್ನು ಮುಂದೆ ಔಷಧಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವಂತಿಲ್ಲ
ಎಂಬ ಎನ್.ಡಿ.ಎ ಸರಕಾರದ ನಿರ್ಣಯ ಭಾರತದ ಜನರಿಗಷ್ಟೇ ಅಲ್ಲದೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ
ದೇಶಗಳಿಗೆಲ್ಲವೂ ಆಘಾತ ಕೊಡುವಂತದ್ದು.
Also Read
ಜನಪ್ರಿಯವೂ ಅಲ್ಲ ಜನಪರವೂ ಅಲ್ಲ