![]() |
ಖುಷ್ವಂತ್ ಸಿಂಗರ 'ಡೆಲ್ಲಿ' |
ಡಾ
ಅಶೋಕ್ ಕೆ ಆರ್.
‘ಡೆಲ್ಲಿ’
– ಖುಷ್ವಂತ್ ಸಿಂಗರ ಅತ್ಯುತ್ತಮ ಪುಸ್ತಕವೆನ್ನಲಾಗುತ್ತದೆ. ಖುಷ್ವಂತ್ ಸಿಂಗರ ‘ದಿ ಕಂಪನಿ ಆಫ್
ವಿಮೆನ್’ ಮತ್ತು ‘ಟ್ರೈನ್ ಟು ಪಾಕಿಸ್ತಾನ್’ ಓದಿದ್ದೆನಷ್ಟೇ. ಕಂಪನಿ ಆಫ್ ವಿಮೆನ್ ಸಾಧಾರಣ
ಎನ್ನಿಸಿದರೆ ಟ್ರೈನ್ ಟು ಪಾಕಿಸ್ತಾನ್ ಮೆಚ್ಚುಗೆಯಾಗಿತ್ತು. ಇತ್ತೀಚೆಗೆ ‘ಡೆಲ್ಲಿ’ ಖರೀದಿಸಿ ಓದಿ
ಮುಗಿಸಿದೆ. ಒಂದಷ್ಟು ಆಕಳಿಕೆಯೊಂದಿಗೇ ಓದು ಮುಂದುವರೆಯಿತು ಎಂದರೆ ಸುಳ್ಳಲ್ಲ! ಆಕಳಿಸುತ್ತಲೇ
ಓದು ಮುಗಿಸಿದ ನಂತರ ತನ್ನ ವಸ್ತುವಿನಿಂದ, ಅರ್ಥಗಳಿಂದ ‘ಡೆಲ್ಲಿ’ ನನ್ನ ಮೆಚ್ಚಿನ
ಕಾದಂಬರಿಗಳಲ್ಲೊಂದು ಸ್ಥಾನ ಪಡೆದುಕೊಂಡಿತು ಎಂಬುದೂ ಸತ್ಯ!