![]() |
ಮಧುಗಿರಿಯಲ್ಲಿ ಸೇರಿದ್ದ ಜನಸ್ತೋಮ |
ಚಿತ್ರವೊಂದರ ಹಾಡುಗಳು ಜನರನ್ನು
ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಂತರದಲ್ಲಿ ಆ ಹಾಡುಗಳು ಅನೇಕ
ವರುಷಗಳ ಕಾಲ ಜನಮಾನಸದಲ್ಲಿ ಉಳಿಯಲು ಚಿತ್ರದ ಗುಣಮಟ್ಟ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ
ಚಿತ್ರದ ಹಾಡುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರರಂಗ ಅನೇಕ
ಯೋಜನೆಗಳನ್ನಾಕುತ್ತವೆ. ಅಂತರ್ಜಾಲದ ಲಭ್ಯತೆ ಹೆಚ್ಚುತ್ತಿದ್ದಂತೆ ಮತ್ತು ಬ್ಲೂಟೂಥ್ ಆಧಾರಿತ
ಮೊಬೈಲ್ಗಳು ಹೆಚ್ಚಾದ ನಂತರ ಕ್ಯಾಸೆಟ್ಟುಗಳನ್ನಾಗಲೀ ಸಿಡಿಗಳನ್ನಾಗಲೀ ಕೊಳ್ಳುವವರು ಇಲ್ಲವೇ ಇಲ್ಲ
ಎಂದು ಹೇಳಬಹುದು. ರೇಡಿಯೋ ಮುಖಾಂತರ, ಟಿ.ವಿ. ಮುಖಾಂತರ ಜನರಿಗೆ ತಲುಪಲು ಪ್ರಯತ್ನಿಸುವುದು
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ನೇರವಾಗಿ ಜನರಿಗೇ ತಲುಪಿಸುವ ಹೊಸ ಪ್ರಯತ್ನ ಮಾಡುತ್ತ
ನಿಧಾನವಾಗಿಯಾದರೂ ಗೆಲುವು ಕಾಣುತ್ತಿರುವುದು ‘ಆರಂಭ’ ಚಿತ್ರತಂಡ.