ಆಗ 15, 2014
ಆಗ 14, 2014
ಅವರೆಲ್ಲರೂ ಪ್ರತಿಭಾವಂತರೇ ಆದರೆ…..
ಡಾ ಅಶೋಕ್ ಕೆ ಆರ್
ಭಾರತದಲ್ಲಿ ಹಗರಣಗಳು ಹೊಸದಲ್ಲ,
ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ
ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು
ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ
ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ
ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು
ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು
ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.
ಆಗ 13, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 36
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ
“ಏನ್ರೀ ಕೀರ್ತನ, ನೀವೂ ನನ್ನ
ಜಾತೀನೇ” ಮನೆಯ ಹೊರಗಡೆ ಮುಖ ತೊಳೆಯುತ್ತ ನಿಂತ ಕೀರ್ತನಾಳ ಬಳಿ ಬಂದು ಕೇಳಿದ ಅರುಣ್.
“ನನ್ನ ಜಾತಿ ಯಾವುದು ಅಂತ
ನಿಮಗ್ಯಾವಾಗ ತಿಳಿಸಿದೆ”
“ಅಯ್ಯಯ್ಯೋ ಜಾತಿ ಅಂದ್ರೆ
ಹುಟ್ಟಿನಿಂದ ಬಂದಿದ್ದಲ್ಲ. ನಾವು ಸೇರಿದ ವೃತ್ತಿಯಿಂದ ಬಂದಿದ್ದು”
ಆಗ 7, 2014
ಓದುವಭ್ಯಾಸ ಹಚ್ಚಿಸಿದ 'ಪ್ರಾಣ್' ಇನ್ನಿಲ್ಲ.
ಒಂದು ಹಂತದ ಓದುವ ಮಟ್ಟ ಮುಟ್ಟಿದ ಮೇಲೆ ನಾವು ಲಿಯೋ ಟಾಲ್ಸ್ಟಾಯ್, ಕುವೆಂಪು, ತೇಜಸ್ವಿ, ಕಾರಂತ, ಕಂಬಾರ, ಭೈರಪ್ಪ, ಶೇಕ್ಸ್ಪಿಯರ್ ಅಂತೆಲ್ಲ ಗಂಭೀರ ಚರ್ಚೆಯನ್ನು ಮಾಡುವವರಂತೆ ನಟಿಸುತ್ತೀವಿ. ನಿಜಕ್ಕೂ ಈ ಮೇಲಿನ ಮತ್ತು ಇನ್ನೂ ಅನೇಕ ಮೇರು ಲೇಖಕರ ಪುಸ್ತಕಗಳನ್ನು ಮೊದಲು ಓದಲಾರಂಭಿಸಿಬಿಟ್ಟಿದ್ದರೆ ಖಂಡಿತವಾಗಿ ಮತ್ತೆ ಜೀವನದಲ್ಲಿ ಪುಸ್ತಕವನ್ನು ಮುಟ್ಟುತ್ತಿರಲಿಲ್ಲ! ಏನ್ ತಲೆ ತಿಂತಾರಪ್ಪ ಇವರೆಲ್ಲ ಎಂಬ ಭಾವದಿಂದ!
ಆಗ 6, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 35
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ
“ನಿಮ್ಮ ಹೆಸರು ಏನಾದ್ರೆ ನನಗೇನು?
ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್
ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ
ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ
ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ,
ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ
ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.
ಆಗ 5, 2014
ಯಾವ ಮಹಾಭಾರತವನ್ನು ಪಠ್ಯವಾಗಿಸಬೇಕು?
ಡಾ ಅಶೋಕ್ ಕೆ ಆರ್
ಸುಪ್ರೀಂಕೋರ್ಟಿನ ನ್ಯಾಯಧೀಶರೊಬ್ಬರು ‘ನಾನೇನಾದರೂ
ಸರ್ವಾಧಿಕಾರಿಯಾಗಿದ್ದರೆ ಗೀತೆ ಮತ್ತು ಮಹಾಭಾರತವನ್ನು ಒಂದನೇ ತರಗತಿಯಲ್ಲಿದ್ದಾಗಲೇ
ಪಠ್ಯವಾಗಿಸುತ್ತಿದ್ದೆ’ ಎಂಬ ಹಿತನುಡಿದಿದ್ದಾರೆ. ಒಂದು ದೇಶದ, ಹಿಂದು ಎಂಬ ಧರ್ಮದ ಪೌರಾಣಿಕ
ಕೃತಿಯೆಂದೆನ್ನಿಸಿಕೊಂಡ ಮಹಾಭಾರತ, ಅದರಲ್ಲಿನ ಪಾತ್ರವರ್ಗದ ಪರಿಚಯ ಮುಂದಿನ ಪೀಳಿಗೆಗೂ
ಇರಬೇಕೆಂಬುದು ಸ್ತುತ್ಯಾರ್ಹ. ಗೀತೆ ಮತ್ತು ಭಾರತವಷ್ಟೇ ಯಾಕೆ ಒಳ್ಳೆಯ ಅಂಶಗಳು ಯಾವ ಗೃಂಥದಲ್ಲೇ
ಇದ್ದರೂ ಅದನ್ನು ಮಕ್ಕಳು ಓದುವಂತೆ ಪ್ರೇರೇಪಿಸುವುದು ಸರಿಯಾದ ಕ್ರಮವೇ. ಆದರೆ ಮಕ್ಕಳು
ತಿಳಿಯುವಂತೆ ಮಾಡುವುದಕ್ಕೂ, ಪಠ್ಯವಾಗಿಸುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅರಿಯಲು
ಸನ್ಮಾನ್ಯ ನ್ಯಾಯಾಧೀಶರಿಗೂ ಸಾಧ್ಯವಾಗಿಲ್ಲ. ಯಾವ ಮಹಾಭಾರತವನ್ನು ಪಠ್ಯವಾಗಿಸಬಹುದು? ಮತ್ತದನ್ನು
ನಿರ್ಧರಿಸುವವರು ಯಾರು?ಆಗ 4, 2014
ಚೀನಾದಲ್ಲಿ ಭ್ರಷ್ಟ ಅಧಿಕಾರಿಗಳ ಆತ್ಮಹತ್ಯೆ!!
ಭಾರತೀಯರು ಬೆಚ್ಚಿ ಬೀಳುವಂತ ಸುದ್ದಿಯೊಂದು ಪಕ್ಕದ ಚೀನಾದಿಂದ ಬಂದಿದೆ! ಇಲ್ಲ ಇಲ್ಲ ಇದು ಗಡಿ ಗಲಾಟೆಯೂ ಅಲ್ಲ, ಯುದ್ಧವೂ ಅಲ್ಲ! ಚೀನ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟತೆ ಮಾಡಿ ಸುಸ್ತಾಗಿ ಕೊನೆಗೆ ಈ ಅನಗತ್ಯ ಹೆಚ್ಚುವರಿ ಧನಾಗಮನದಿಂದ ಮನಸ್ಸಾಕ್ಷಿ ಕಲಕಿದಂತಾಗಿ ಮಾಡಿದ ಅನ್ಯಾಯಗಳನ್ನೆಲ್ಲ ನೆನೆದು ಪ್ರಾಯಶ್ಚಿತದ ರೂಪದಲ್ಲಿ ಆತ್ಮಹತ್ಯೆಗೆ ಶರಣಾಗಿಲ್ಲ.
ಜುಲೈ 31, 2014
ಅತ್ಯಾಚಾರದ ಮನಸ್ಥಿತಿಯ ಸುತ್ತ
ಡಾ ಅಶೋಕ್ ಕೆ ಆರ್.
ಕಳೆದೊಂದಷ್ಟು ದಿನಗಳಿಂದ ಅತ್ಯಾಚಾರಗಳದ್ದೇ
ಸುದ್ದಿ. ಎಲ್ಲ ಸುದ್ದಿ ವಾಹಿನಿಯವರು ನಾ ಮುಂದು ತಾ ಮುಂದು ಎನ್ನುತ್ತ ಅತ್ಯಾಚಾರಗಳ ಬಗ್ಗೆ
ವರದಿಗಳನ್ನು ಮಾಡಿದ್ದಾರೆ. ಇಡೀ ಕರ್ನಾಟಕವೇ ಅತ್ಯಾಚಾರಿಗಳ ಕೂಪವಾಗಿಬಿಟ್ಟಿದೆ ಎಂಬ ಅಭಿಪ್ರಾಯ
ಮೂಡಿಸಿಬಿಟ್ಟಿವೆ. ‘ರೇಪ್ ಕ್ಯಾಪಿಟಲ್’ ‘ರೇಪಿಸ್ಟ್ ರಾಜ್ಯ’ ಎಂಬ ವಿಷೇಶಣಗಳನ್ನು ಕರ್ನಾಟಕಕ್ಕೆ
ನೀಡಿವೆ. ಹೀನಾತಿ ಹೀನ ಕೃತ್ಯಗಳು ಕರ್ನಾಟಕದಲ್ಲಿ ನಡೆದಿರುವುದು ನಿಜ, ಅದನ್ನು ಮಾಧ್ಯಮಗಳು
ಸುದ್ದಿ ಮಾಡಬೇಕಿರುವುದೂ ನಿಜ ಆದರೆ ಸುದ್ದಿ ಬಿತ್ತರಿಸುವಾಗ ಅವಶ್ಯವಾಗಿ ಇರಬೇಕಿದ್ದ ಸಂಯಮ
ಮಾಯವಾಗಿದೆ. ಕಾರ್ಯಾಂಗ ಎಂದಿನಂತೆ ತುಂಬಾ ಕ್ರಿಯಾಶೀಲವಾಗಿಯೇನೂ ಇಲ್ಲ. ಅತ್ಯಾಚಾರಗಳ ಬಗ್ಗೆ
ವರದಿಗಳು ಸರದಿಯ ಮೇಲೆ ಆಗುತ್ತಿರುವಾಗ ನ್ಯಾಯಾಂಗದ ಕಾರ್ಯನಿರ್ವಹಣೆಯ ಬಗ್ಗೆ,
ಅತ್ಯಾಚಾರಿಗಳಿಗಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ. ಶಾಸಕಾಂಗ
ಎಂದಿನಂತೆ ನಿದ್ರಾವಸ್ಥೆಯಲ್ಲಿದೆ, ದೂರದೃಷ್ಟಿ ಪರಿಹಾರಗಳನ್ನು ರೂಪಿಸಬೇಕಾದ ಶಾಸಕಾಂಗ ಇವತ್ತು
ಪ್ರತಿ ಘಟನೆಯನ್ನೂ ತಮ್ಮ ವೈಯಕ್ತಿಕ ಮತ್ತು ಪಕ್ಷದ ರಾಜಕೀಯ ಕಾರಣಕ್ಕೆ ಯಾವ ರೀತಿ
ಉಪಯೋಗವಾಗಬಲ್ಲದು ಎಂಬುದನ್ನು ಲೆಕ್ಕ ಹಾಕುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇನ್ನು
ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಸಿಗುವ ಘಟನಾವಳಿಗಳಿಗೆ ಮಾತ್ರ ಪ್ರತಿಕ್ರಯಿಸುತ್ತ ಪ್ರತಿಭಟಿಸುತ್ತ
ಸಾಗುತ್ತಿರುವ ‘ಜಾಣ ಜನರಾದ’ ನಾವಿದ್ದೀವಿ. ನಮ್ಮೆಲ್ಲರ ಮಧ್ಯೆ ಅತ್ಯಾಚಾರಕ್ಕೊಳಗಾಗುತ್ತಲೇ ಇರುವ
ಮಕ್ಕಳ, ಯುವತಿಯರ, ಮಹಿಳೆಯರ, ವೃದ್ಧರ ಆಕ್ರಂದನವಿದೆ.