ಮಾರ್ಚ್ 6, 2015

ಧರಣಿ ಮಂಡಲ ಮಧ್ಯದೊಳಗೆ.. 180 ವರ್ಷ ಕೆಳಗೆ..


ಕ್ರಾಂತಿ ಜ್ಯೋತಿ ಪುಸ್ತಕದ ಒಂದು ಆಯ್ದ ಅಧ್ಯಾಯ "ಹಿಂಗ್ಯಾಕೆ"ಯ ಓದುಗರಿಗಾಗಿ....

ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಿತ್ತು. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. 

ಶಿಕ್ಷಣ: ಹೃದಯದಿಂದ ಹರಿವ ಜ್ಞಾನ ನದಿ

savithri bai pule
ಇದೇ ಭಾನುವಾರ ಬಿಡುಗಡೆಯಾಗಲಿರುವ ಲಡಾಯಿ ಪ್ರಕಾಶನ ಪ್ರಕಟಿಸಿರುವ ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ ಪುಸ್ತಕದ ಲೇಖಕಿ ಡಾ. ಹೆಚ್. ಎಸ್. ಅನುಪಮ ಮಾತುಗಳು. 
ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನಸಾಮಾನ್ಯರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎಂದು ಕರೆಸಿಕೊಳ್ಳುತ್ತಿದೆ. ವೈಚಾರಿಕ ಜಾಗೃತಿ ಮೂಡಿಸಬೇಕಾದ ಆಧುನಿಕ ಶಿಕ್ಷಣ ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ. ಶಿಕ್ಷಣ ಮೂಲಭೂತ ಹಕ್ಕು ಎನ್ನುವ ಹೊತ್ತಿಗೆ ಅದು ಖಾಸಗೀಕರಣಗೊಂಡಿದೆ. ನಗರ ಪ್ರದೇಶಗಳಲ್ಲಿ ಶಿಕ್ಷಣಸಂಸ್ಥೆ ತೆರೆಯುವುದೇ ಒಂದು ಉದ್ಯಮವಾಗಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವವರು ಶಿಕ್ಷಣತಜ್ಞರೆನಿಸಿಕೊಂಡಿದ್ದಾರೆ! 

ಮಾರ್ಚ್ 3, 2015

ಛಾಯೆಗಳ ನಡುವೆ ಸ್ವಂತಿಕೆ ಮೆರೆವ ‘ಮೈತ್ರಿ’.

mythri giriraj
Dr Ashok K R
ಈ ಸಿನಿಮಾ ನೋಡಬೇಕಾದರೆ ಹಿಂದಿನ ಹತ್ತಲವು ಸಿನಿಮಾಗಳು ನೆನಪಾಗುತ್ತವೆ! ಅದರಲ್ಲಿ ಮುಖ್ಯವಾದುದು ಸ್ಲಂ ಡಾಗ್ ಮಿಲಿಯನೇರ್, ಚಿನ್ನಾರಿ ಮುತ್ತ, ಜಿಮ್ಮಿ ಗಲ್ಲು. ಸ್ಲಂ ಡಾಗ್ ಮಿಲಿಯನೇರಿನ ಹಾಗೆ ಇಲ್ಲೂ ಒಂದು ದಿಢೀರ್ ಕೋಟ್ಯಾಧಿಪತಿಯಾಗುವ ಆಟವಿದೆ. ಬಡ ಹುಡುಗನೊಬ್ಬನ ಕಥೆಯಿದೆ. ಏನೂ ಇಲ್ಲದ ಹುಡುಗನೊಬ್ಬ ನಗರಕ್ಕೆ ಬಂದು ಪ್ರಚಂಡ ಯಶಸ್ಸು ಗಳಿಸುವ ಚಿನ್ನಾರಿ ಮುತ್ತ ಇಲ್ಲಿ ಸಿದ್ಧರಾಮನಾಗುತ್ತಾನೆ. ಬಾಲಪರಾಧಿಗಳ ಬದಲಾವಣೆಗೆ ಹಂಬಲಿಸುವ ಸಿನಿಮಾ ಖೈದಿಗಳ ಮನಪರಿವರ್ತನೆಯ ಜಿಮ್ಮಿ ಗಲ್ಲು ಚಿತ್ರವನ್ನು ನೆನಪಿಸುತ್ತದೆ! ಇಷ್ಟೆಲ್ಲಾ ಸಿನಿಮಾಗಳನ್ನು ನೆನಪಿಸಿಯೂ ತನ್ನದೇ ಸ್ವಂತ ಛಾಪು ಮೂಡಿಸುವ ಸಿನಿಮಾ ‘ಮೈತ್ರಿ’. ವಿಷ್ಣುವರ್ಧನ್ ಬಹಳಷ್ಟು ಸಂದರ್ಶನಗಳಲ್ಲಿ ಹೇಳಿರುವಂತೆ ಪ್ರಪಂಚದಲ್ಲಿರುವುದು ಏಳೋ ಎಂಟೋ ಕಥೆ! ಅವುಗಳನ್ನೇ ಬೇರ್ಪಡಿಸಿ ಮಾರ್ಪಡಿಸಿ ಸಿನಿಮಾ ಮಾಡಬೇಕು. ಹಳೆಯ ಚಿತ್ರಗಳಿಗೆ ಒಂದಷ್ಟು ಸಾಮ್ಯತೆಗಳಿದ್ದರೂ ಮೈತ್ರಿಯಲ್ಲಿ ಹೊಸತನವನ್ನು ಕಾಣಲು ಸಾಧ್ಯವಾಗಿರುವುದು ಈ ಬೇರ್ಪಡಿಸಿ ಮಾರ್ಪಡಿಸುವ ವಿಧಾನದಿಂದ.

ಮಾರ್ಚ್ 2, 2015

ಜೊಯಡಾ ಹಳಿಯಾಳ ಕ್ಷೇತ್ರದರ್ಶನ

Umesh Mundalli
ವಿಸ್ತೀರ್ಣದ ದೃಷ್ಟಿಯಲ್ಲಿ ಜೊಯಡಾ ಜಿಲ್ಲೆಯ ಅತಿ ದೊಡ್ಡ ತಾಲೂಕಾದರೂ ಇಲ್ಲಿ ಜನಸಂಖ್ಯೆ ಮಾತ್ರ ವಿರಳ. ಅನೇಕ ಸವಲತ್ತುಗಳಿಂದ ವಂಚಿತವಾದರೂ ಇಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸುವವರಿಗೆ ಮಾತ್ರ ಅದಕ್ಕೆ ಕಿಂಚಿತ್ತು ಕೊರತೆ ಇಲ್ಲಾ. ಮುಗಿಲೆತ್ತರಕ್ಕೆ ಚಾಚಿರುವ ಬೆಟ್ಟಗಳು, ದಟ್ಟ ಅರಣ್ಯದಲ್ಲಿ ಗಗನಕ್ಕೆ ಮುತ್ತಿಡಲು ಹೊರಟ ವೃಕ್ಷ ಸಂಕುಲಗಳು, ಪ್ರಾಣಿ ಪಕ್ಷಿಗಳ ಕೂಗು ಎಂತವನ ಎದೆಯಲ್ಲೂ ಪ್ರೀತಿಯ ಸಿಂಚನಗೈಯುತ್ತವೆ. ಇಲ್ಲಿ ಸಂಚರಿಸುವಾಗ ಊಟಿಯ ತಣ್ಣನೆ ಅನುಭವವಾಗುತ್ತದೆ. 

ಮಾರ್ಚ್ 1, 2015

ಜೀವದ ಮಾತು.

H N EshaKumar
ಮಾತಿನ ಲಯವಿಲ್ಲ
ನಿನ್ನ ಹೃದಯದ ಭಾವಕೆ 
ಸೋತಿರುವೆ ನಾ ಹಾಗೆಯೇ 
ನಿನ್ನೆದೆಯ ಭಾವ ಸೆಳೆತಕೆ..! 
ಅಪ್ಪುಗೆಯೊಂದಷ್ಟೇ 
ಸಾಕ್ಷಿಯೂ... 
ಜೀವ ಜೀವದ ಮಾತಿಗೆ! 
ಎರಡು ಮೂರಾಗುವ 
ಬಯಕೆಯಲ್ಲ 
ಸಂಭಂದದ ರಾಗಕೆ 
ಒಲಿದರೆ ಒಂದೇ ಎಲ್ಲವು

ಫೆಬ್ರ 27, 2015

ಅಮಲುಗಳ ನಡುವೆ ಕಳೆದುಹೋಗುವ ಜಟ್ಟ.

Dr Ashok K R
ಗಿರಿರಾಜರ ಹೆಸರು ಮೊದಲು ಕೇಳಿದ್ದು ‘ವರ್ತಮಾನ’ ವೆಬ್‍ಪತ್ರಿಕೆ ಪ್ರತಿ ವರುಷ ನಡೆಸುವ ಕಥಾ ಸ್ಪರ್ಧೆಯ ಫಲಿತಾಂಶದಲ್ಲಿ. ಅವರ ‘ಗಲೀಜು’ ಎಂಬ ಕಥೆಗೆ ಎರಡನೆಯ ಬಹುಮಾನ ಬಂದಿತ್ತು. ಅದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗಿರಿರಾಜರನ್ನು ಭೇಟಿಯಾದಾಗಲೇ ತಿಳಿದಿದ್ದು ಇದೇ ಆಸಾಮಿ ‘ಜಟ್ಟ’ ಚಿತ್ರದ ನಿರ್ದೇಶಕರೆಂದು! ಜಟ್ಟ ಚಿತ್ರದ ಬಗ್ಗೆ ಆಗಲೇ ಸಾಕಷ್ಟು ಚರ್ಚೆ ನಡೆದಿತ್ತು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೋಗಿ ಚಿತ್ರ ನೋಡುವ ಉಮೇದು ಕಡಿಮೆಯಾಗಿದ್ದ ಕಾರಣ ‘ಜಟ್ಟ’ ಚಿತ್ರವನ್ನಿನ್ನೂ ನೋಡಿರಲಿಲ್ಲ. ಗೆಳೆಯ ನಿರ್ದೇಶಕ ಅಭಿ ಹನಕೆರೆ ಜಟ್ಟವನ್ನೊಂದಷ್ಟು ಹೊಗಳಿ ಹೋಗಿ ನೋಡು ಎಂದಿದ್ದ. ಕಾರಣಾಂತರಗಳಿಂದ ಜಟ್ಟ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ‘ಹುಚ್ಚ ವೆಂಕಟ್’ ಹೇಳುವ ಹಾಗೆ ಬಿಟ್ಟಿಯಾಗಿ ಟಿವಿಯಲ್ಲೇ ನೋಡಿದೆ! ಇಂತಹುದೊಂದು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದಿದ್ದುದಕ್ಕೆ ಬೇಸರವಿದೆ.

ಫೆಬ್ರ 24, 2015

‘ಎಕೆ 49’ ಎಕೆ 67 ಆದ ಯಶಸ್ಸಿನ ಕಥೆ

Dr Ashok K R
ರಾಜ್ಯವಲ್ಲದ ರಾಜ್ಯದ ಚುನಾವಣೆಯೊಂದು ದೇಶದ ರಾಜಕೀಯ ಭವಿಷ್ಯದ ದಾರಿಯನ್ನೇ ಬದಲಿಸಿಬಿಡುವ ಭಯ – ಆಶಾಭಾವನೆ ಮೂಡಿಸಿದೆ. ಈ ಭಯ ಮತ್ತು ಆಶಾಭಾವನೆಗಳೆರಡೂ ಪ್ರತಿಯೊಂದನ್ನೂ ಅತಿಗೆ ತೆಗೆದುಕೊಂಡು ಹೋಗುವ ಇವತ್ತಿನ ಸಾಮಾನ್ಯ ಮನಸ್ಥಿತಿಯ ಪ್ರತೀಕವಾಗಿದೆಯಾ? ದೆಹಲಿಯ ಚುನಾವಣೆಯ ನಂತರದಲ್ಲಿ ಮಾಧ್ಯಮ ಒಂದು ದೊಡ್ಡ ಯು – ಟರ್ನ್ ತೆಗೆದುಕೊಂಡು ಅರವಿಂದ್ ಕೇಜ್ರಿವಾಲ್ ಎಂಬ ನಾಯಕನ ಮತ್ತಾತನ ಆಮ್ ಆದ್ಮಿ ಪಕ್ಷದ ಗುಣಗಾನದಲ್ಲಿ ನಿಂತುಬಿಟ್ಟಿದೆ. ಸರಿಸುಮಾರು ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ಕಡೆಗಣಿಸಲ್ಪಟ್ಟ ವ್ಯಕ್ತಿಯೊಬ್ಬ ಮತ್ತೆ ಮೀಡಿಯಾ ಡಾರ್ಲಿಂಗ್ ಆಗಿಬಿಟ್ಟಿದ್ದು ಹೇಗೆ? ಗೆದ್ದೆತ್ತಿನ ವರದಿ ಮಾಡುವುದಕ್ಕೂ ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮಾಧ್ಯಮದ ಸಹಾಯವಿದ್ದರೆ ಚುನಾವಣೆಯಲ್ಲಿ ಗೆಲುವು ಕಾಣಬಹುದು ಎಂಬುದಕ್ಕೆ ಹೋದ ಬಾರಿಯ ದೆಹಲಿಯ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಉದಾಹರಣೆಯಾಗಿದ್ದರೆ ಮಾಧ್ಯಮಕ್ಕೆ ಅಪ್ರಿಯರಾದರೂ ಜನರ ನೇರ ಸಂಪರ್ಕದಿಂದ ಚುನಾವಣೆಯೊಂದನ್ನು ಗೆಲ್ಲಬಹುದು ಎಂಬುದನ್ನು ನಿರೂಪಿಸಿದೆ ಈ ಬಾರಿಯ ದೆಹಲಿ ಚುನಾವಣೆ.

ಫೆಬ್ರ 14, 2015

ಅವ್ವ

ಉಮೇಶ ಮುಂಡಳ್ಳಿ ಭಟ್ಕಳ
ಮಲಗಿದ್ದಾಳೆ ಅವ್ವ
ಏಳುವಂತಿಲ್ಲಾ,
ಹೇಗೆ ಎದ್ದಾಳು?
ಮಲಗಿದ್ದಾಳೆ
ಚಿರನಿದ್ರೆಯಲಿ.

ಎವೆಯಿಕ್ಕದೆ ನೋಡುತ್ತಿರೆ
ನಿನ್ನ ಕಣ್ಣು,
ಕೇಳಿಸುತ್ತಲೇ ಇಲ್ಲಾ
ಎದೆಯ ಕೂಗು.
ಒಂದು ಹನಿಯಿಲ್ಲ
ಆರ್ದತೆಯೆ ಎಲ್ಲಾ.
ಮಲಗಿದ್ದಾಳೆ
ಅವ್ವ
ಚಿರನಿದ್ರೆಯಲಿ.

ಫೆಬ್ರ 10, 2015

ಗೆಲುವು ಕಂಡ ಆಮ್ ಆದ್ಮಿಗಿದು ಜವಾಬ್ದಾರಿ ಪರ್ವ!

ದೆಹಲಿ ಚುನಾವಣೆಗೆ ಸಂಬಂಧಪಟ್ಟಂತೆ ಬರೆದಿದ್ದ ಹಿಂದಿನ ಲೇಖನದ ಕೊನೆಯಲ್ಲಿ ಅರವಿಂದ್ ಕೇಜ್ರಿವಾಲರ ಅರಾಜಕತೆ ಕಿರಣ್ ಬೇಡಿಯವರ ಅನುಕೂಲಸಿಂಧುತ್ವಗಳೇನೇ ಇದ್ದರೂ ಪ್ರಾಮಾಣಿಕತೆಯ ವಿಷಯದಲ್ಲಿ ಸದ್ಯದ ಮಟ್ಟಿಗೆ ಇಬ್ಬರಲ್ಲೂ ತುಂಬ ವ್ಯತ್ಯಾಸಗಳನ್ನುಡುಕುವುದು ಕಷ್ಟ. ಕಿರಣ್ ಬೇಡಿಯವರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಬಿಜೆಪಿಗೆ ಮತ ಚಲಾಯಿಸುವವರು ಇರುವ ಹಾಗೆಯೇ ಬಿಜೆಪಿಯ ಅವಕಾಶವಾದಿತನದ ರಾಜಕಾರಣದಿಂದ ಬೇಸತ್ತು ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯ ಚುನಾವಣೆ ಹತ್ತಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕೊನೆಗೆ ಪ್ರಜಾಪ್ರಭುತ್ವ ಗೆಲ್ಲಲಿ ಎಂಬುದಷ್ಟೇ ಆಶಯ - ಎಂದು ಬರೆದಿದ್ದೆ. ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆ ಸ್ಪಷ್ಟ ಬಹುಮತದ ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಇಂದಿನ ಫಲಿತಾಂಶ ಕಾಂಗ್ರೆಸ್ಸಿನ ಧೂಳಿಪಟವನ್ನು ಖಚಿತಪಡಿಸಿ, ಬಿಜೆಪಿಗೂ ಅಘಾತಕಾರಿಯಾದಂತಹ ತೀರ್ಪು ನೀಡಿದ್ದಾರೆ ದೆಹಲಿಯ ಮತದಾರರು. ಇರುವ ಎಪ್ಪತ್ತು ಸೀಟುಗಳಲ್ಲಿ ಆಮ್ ಆದ್ಮಿ ಪಕ್ಷ 67ರಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಮೂರರಲ್ಲಿ ಮಾತ್ರ ಗೆಲುವು ಖಂಡಿದೆ. ಕಾಂಗ್ರೆಸ್ಸಿಗೆ ಒಂದೂ ಇಲ್ಲ!

ಫೆಬ್ರ 9, 2015

ಹುಲಿಯ ನೆರಳಿನೊಳಗೆ ಪ್ರಖರವಾಗಿ ಬೆಳಗಿದ ನಾಮದೇವ ನಿಮ್ಗಾಡೆ

in the tigers shadow
ಹುಲಿಯ ನೆರಳಿನೊಳಗೆ
Dr Ashok K R
ಗೌಡ, ಜಮೀನ್ದಾರ, ಪೋಲೀಸ್ ಪಾಟೀಲ್, ಮಾಲಿ ಪಾಟೀಲ್, ಪೂಜಾರಿ, ಅಯ್ಯಂಗಾರಿ ಇನ್ನೂ ಹತ್ತಲವು ಪದಗಳು ನಮ್ಮಲ್ಲನೇಕರ ಹೆಸರುಗಳನ್ನಲಂಕರಿಸುತ್ತವೆ. ಈಗವುಗಳಲ್ಲಿ ಬಹುತೇಕವು ತಲೆಮಾರಿನ ಮುಂದುವರಿಕೆಗೆ ಇದ್ದರೆ ಮುಂಚಿನ ದಿನಗಳಲ್ಲಿ ಅವರ ಸುಪರ್ದಿಯಲ್ಲಿದ್ದ ದೇವಸ್ಥಾನ, ಜಮೀನು, ಕೆಲಸವನ್ನು ಸೂಚಿಸುತ್ತಿದ್ದವು, ಜೊತೆಗೆ ಜಾತಿ ಸೂಚಕವಾಗಿದ್ದವು. ದೇವಸ್ಥಾನದ ಒಳಗೆ ಕಾಲಿಡಲಾಗದ, ಜಮೀನಿನ ಒಡೆತನವೇ ಇಲ್ಲದ, ಮಾಡುವ ಕೆಲಸವನ್ನು ಹೇಳಿಕೊಳ್ಳಲಾಗದ, ಹೆಸರೇ ಕೀಳರಿಮೆ ಹುಟ್ಟಿಸುವ ಜಾತಿಯಲ್ಲಿ ನರಳಿದ ಜನರು ಸರ್ ನೇಮಿಗಾಗಿ ಏನು ಮಾಡುತ್ತಿದ್ದರು?! ಆಸ್ತಿ ಪಾಸ್ತಿ ಇಲ್ಲದ ಜನರು ಪ್ರಕೃತಿಯಲ್ಲಿ ಉಳಿದವರಿಗಿಂತ ಹೆಚ್ಚಾಗಿ ಒಡನಾಡಿದವರು. ಅಂಥಹ ಪ್ರಕೃತಿಯೊಂದಿಗೇ ತಮ್ಮನ್ನು ಗುರುತಿಸಿಕೊಳ್ಳುವ ಅತ್ಯದ್ಭುತ ವಾಸ್ತವಾತ್ಮಕ ಕಲ್ಪನೆಯೊಂದಿಗೆ ಕನ್ನಡಕ್ಕೆ ಭಾವಾನುವಾದಗೊಂಡಿರುವ ನಾಮದೇವ ನಿಮ್ಗಾಡೆಯವರ ಆತ್ಮಕಥನ ‘ಹುಲಿಯ ನೆರಳಿನೊಳಗೆ – ಅಂಬೇಡ್ಕರ್ ವಾದಿಯ ಆತ್ಮಕಥೆ’ ಪ್ರಾರಂಭವಾಗುತ್ತದೆ. ನಿಮ್ಗಾಡೆಯ ಅರ್ಥ ಬೇವಿನ ಮರ! ಇದೇ ರೀತಿ ತೆಂಗಿನ ಮರ(ಕೋಬ್ರಗಾಡೆ), ಮಾವಿನ ಗಿಡ (ಅಂಬಗಾಡೆ), ಸೀಬೆ ಮರ (ಜಮಗಾಡೆ), ಚೆಕ್ಕಕಾಯಿ (ಬೋರ್ಕರ್) ಎಂಬ ಹೆಸರುಗಳೂ ಇವೆಯಂತೆ. ಪ್ರಕೃತಿಯೊಂದಿಗೆ ಇದಕ್ಕಿಂತ ಹೆಚ್ಚಿನ ರೀತಿಯ ಸಹಬಾಳ್ವೆಯ ಉದಾಹರಣೆಯನ್ನು ನಾನಂತೂ ಇದುವರೆಗೆ ಓದಿರಲಿಲ್ಲ.