Dr Ashok K R
ನರೇಂದ್ರ
ಮೋದಿ ನೇತೃತ್ವದ ಬಿಜೆಪಿ ಅಧಿಕಾರವಿಡಿದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹತ್ತು
ವರ್ಷದ, ಅದರಲ್ಲೂ ಎರಡನೇ ಯುಪಿಎ ಸರಕಾರದ ದುರಾಡಳಿತವನ್ನು ಹೀಗಳೆಯುತ್ತ. ಜೊತೆಜೊತೆಗೆ
ಕಾಂಗ್ರೆಸ್ ಸರಕಾರ ಸಾಧಿಸಲಾಗದ ಅನೇಕ ಸಂಗತಿಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಡುವುದಾಗಿ
ಹೇಳುತ್ತಿದ್ದ ನರೇಂದ್ರ ಮೋದಿ ‘ಅಚ್ಛೇ ದಿನ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ನರೇಂದ್ರ ಮೋದಿ
ನೇತೃತ್ವದ ಬಿಜೆಪಿ ಸರಕಾರ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಬಹುತೇಕ
ಸರಕಾರಗಳಂತೆ ಕೆಲವಷ್ಟು ಒಳ್ಳೆಯ ಕೆಲಸ, ಬಹಳಷ್ಟು ಅನಗತ್ಯ ಕೆಲಸಗಳು ಸರಕಾರದ ವತಿಯಿಂದ
ನಡೆಯುತ್ತಿವೆ. ಜೊತೆಜೊತೆಗೆ ಅಪಾಯಕಾರಿ ರೀತಿಯ ಕೆಟ್ಟ ಕಾರ್ಯಗಳು ನರೇಂದ್ರ ಮೋದಿಯವರ ಸರಕಾರದಿಂದ
ನಿಧನಿಧಾನಕ್ಕೆ ಜಾರಿಯಾಗುತ್ತಿವೆ. ಮತ್ತೀ ಅಪಾಯಗಳು ಪ್ರಸ್ತುತಕ್ಕೆ ಅನಿವಾರ್ಯವೆಂಬ ಭಾವನೆ
ಜನಮಾನಸದಲ್ಲಿ ಮೂಡಿಸುವಲ್ಲಿ ಸರಕಾರದ ವಿವಿಧ ಮಂತ್ರಿಗಳ ಮಾತಿನ ಕಸರತ್ತು ಸಹಕರಿಸುತ್ತಿದೆ.
ಆರ್ಡಿನೆನ್ಸುಗಳ ಬೆನ್ನು ಹತ್ತಿರುವ ಕೇಂದ್ರ ಸರಕಾರದ ಹೆಜ್ಜೆಗಳು ಕೊನೆಗೆ ಪ್ರಜಾಪ್ರಭುತ್ವದ
ಮೂಲಭೂತ ಆಶಯಗಳಿಗೆ ಧಕ್ಕೆಯುಂಟುಮಾಡುತ್ತಿವೆ.