![]() |
Understanding shutter speed |
Dr Ashok K R
ಸುಳ್ಯದ
ಪರಿಸರದಿಂದ ಉತ್ತೇಜಿತನಾಗಿ ‘ದೊಡ್ಡ’ ಕ್ಯಾಮೆರಾ ಖರೀದಿಸಬೇಕೆಂದು ನಿರ್ಧರಿಸಿದೆ. ಒಂದಷ್ಟು ಪರಿಚಯದ
ಫೋಟೋಗ್ರಾಫರುಗಳನ್ನು ಕೇಳಿದಾಗ ಬಹುತೇಕರು ‘ನಿಕಾನ್’ ಎಂದರು. ಇಂಟರ್ನೆಟ್ ಯುಗದಲ್ಲಿ ಜನರನ್ನು ಕೇಳಿ
ತಿಳಿದು ಸುಮ್ಮನಿರಲಾದೀತೇ! ಸರಿ ಗೂಗಲ್ಲಿನಲ್ಲಿ ‘Best DSLR for beginners’ ಎಂದು ಟೈಪಿಸಿ ಗೂಗಲ್
ಹರವಿದ ಲಕ್ಷಾಂತರ ಪುಟಗಳಲ್ಲಿ ಒಂದಷ್ಟನ್ನು ತೆರೆತೆರೆದು ಓದುವುದಾರಂಭವಾಯಿತು. ನಿಕಾನ್ ಮತ್ತು ಕೆನಾನ್
ಮಧ್ಯೆ ಜೋರು ಯುದ್ಧವೇ ನಡೆದಿತ್ತು. ಹದಿನೈದು ದಿನದ ಓದಿನ ನಂತರವೂ ಯಾವ ಕ್ಯಾಮೆರಾ ಖರೀದಿಸಬೇಕೆಂದು
ತೀರ್ಮಾನಿಸಲಾಗಲಿಲ್ಲ. ಹದಿನೈದು ದಿನದ ಓದಿನಿಂದ ಕ್ಯಾಮೆರಾಗಳ ಬಗೆಗಿನ ತಾಂತ್ರಿಕ ವಿವರಗಳ ಬಗ್ಗೆ
ಸ್ವಲ್ಪ ತಿಳಿದಂತಾಗಿ ನನಗೆ ಗೊತ್ತಿಲ್ಲದ ಫೋಟೋಗ್ರಫಿಯ ಮೂಲಭೂತ ಅಂಶಗಳೇ ಅಧಿಕವಾಗಿದೆ ಎಂಬುದರಿವಾಯಿತು!
ಸದ್ಯಕ್ಕೆ ನಿಕಾನೂ ಬೇಡ, ಕೆನಾನೂ ಬೇಡ ಎಂದು ನಿರ್ಧರಿಸಿ ಅಷ್ಟರವರೆಗೆ ಜೊತೆಗಿದ್ದ ಸೋನಿ DSC
S930 ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾ ಕೈಗೆತ್ತಿಕೊಂಡೆ.
Also Read
Flash "ಬ್ಯಾಕ್"
Also Read
Flash "ಬ್ಯಾಕ್"