![]() |
Making History |
ಡಾ. ಅಶೋಕ್. ಕೆ. ಆರ್.
ಇತಿಹಾಸವೆಂದರೆ ಏನು? ಶಾಲೆಯಲ್ಲಿ ಸಮಾಜ ವಿಜ್ಞಾನವೆಂದರೆ
ಆಸಕ್ತಿಯೇ ಮೂಡಿಸದ ಪಾಠಗಳ ಸರಮಾಲೆ. ಜಿಯೋಗ್ರಫಿಯಲ್ಲಿ ಮ್ಯಾಪುಗಳನ್ನು ಬರೆಬರೆದು ಅಭ್ಯಸಿಸಿ, ಸಿವಿಕ್ಸಿನಲ್ಲಿ
ಅರ್ಥವಾಗದ್ದನ್ನೆಲ್ಲಾ ಉರು ಹೊಡೆದು ಇತಿಹಾಸದ ಪುಸ್ತಕ ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು! ಆ ಇತಿಹಾಸದ
ಪುಸ್ತಕದಲ್ಲಾದರೂ ಏನಿರುತ್ತಿತ್ತು? ಒಂದಾದ ಮೇಲೊಂದರಂತೆ ಅಸಂಖ್ಯ ಇಸವಿಗಳು. ಇಂತಿಪ್ಪ ಇಸವಿಯಲ್ಲಿ
ಇಂತಿಪ್ಪ ಜಾಗದಲ್ಲಿ ಇಂತೀರ್ವ ರಾಜರು ಕಾದಾಡಿ ಇಂತಿಪ್ಪ ರಾಜ ಗೆದ್ದು ಅಂತಿಪ್ಪ ರಾಜ ಸೋತೋ – ಸತ್ತೋ
ಯುದ್ಧ ಮುಗಿಯುವುದೇ ಇತಿಹಾಸ. ಸದ್ಯ ಹತ್ತನೇ ತರಗತಿಗೆ ಆ ಪಠ್ಯದ ಇತಿಹಾಸದಿಂದ ಮುಕ್ತನಾದೆ!