ಸುssss....ಯ್ ಬೀಸುತ್ತಿದ್ದ
ಗಾಳಿಗೆ ತರಗಲೆಗಳು ಪಟ ಪಟ ಹೊಡೆದುಕೊಳ್ಳುತ್ತಿತ್ತು. ಕೆರೆಯ ನೀರು ತುಯ್ದಾಡುತ್ತಿತ್ತು. ಕುಕ್ಕರಹಳ್ಳಿ
ಕೆರೆಯ ಒಂದು ದಡದಲ್ಲಿ ಯಾರೂ ಹೆಚ್ಚು ಓಡಾಡದ ದಾರಿಯಲ್ಲಿ ಕುಳಿತಿದ್ದರು ಲೋಕಿ ಮತ್ತು ಸಯ್ಯದ್. ಅದೇ
ದಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಪೋಲೀಸ್ ಭವನದಲ್ಲಿ ರೂಪಾಳ ಮದುವೆ. ಬೇಸರ ಕಳೆಯಲು ಸಯ್ಯದ್ ಲೋಕಿಯನ್ನು
ಕುಕ್ಕರಹಳ್ಳಿ ಕೆರೆಗೆ ಕರೆದುಕೊಂಡು ಬಂದಿದ್ದ.
ಏಪ್ರಿ 2, 2014
ಏಪ್ರಿ 1, 2014
ನಮೋನೂ ಅಲ್ಲ ರಾಗಾನೂ ಅಲ್ಲ ಆಡಳಿತ ನಡೆಸುವುದು ಕಾಂಚಾಣ.....
![]() |
ಪ್ರಜಾವಾಣಿ ಪತ್ರಿಕೆಯಿಂದ |
ನಮ್ಮ
ದೇಶದ ಆಡಳಿತ ನಡೆಸುವುದ್ಯಾರು? ಬಿಜೆಪಿ
ಕಾಂಗ್ರೆಸ್ ತೃತೀಯ ರಂಗ? ರಾಹುಲ್
ಗಾಂಧಿ, ಸೋನಿಯಾ ಗಾಂಧಿ, ಮೋದಿ,
ಅಡ್ವಾಣಿ? ತತ್ವ ಸಿದ್ಧಾಂತಗಳ ಪಕ್ಷವೋ
ಆದರ್ಶ ನೀತಿ ನಿಯಮಗಳ ವ್ಯಕ್ತಿಯೋ
ದೇಶವನ್ನು ಮುನ್ನಡೆಸುತ್ತಾರೆಂಬುದು ನಮ್ಮ ಕನಸಷ್ಟೇ. ಪಾಶ್ಚಿಮಾತ್ಯ
ದೇಶಗಳಲ್ಲಿ ಎಂದೋ ಘಟಸಿ ಅಲ್ಲಿನವರಲ್ಲಿ
ಹೆಚ್ಚಿನವರು ಅದನ್ನೂ ಒಪ್ಪಿಯೂ ಮುಗಿದು
ಹೋದ ಸಂಗತಿಗಳು ಭಾರತದಲ್ಲಿ ಈಗ ಬೆಳಕಿಗೆ ಬರುತ್ತಿವೆ.
ಆಡಳಿತವಿರುವ ಪಕ್ಷ ಯಾವುದೇ ಇರಲಿ,
ವ್ಯಕ್ತಿ ಯಾರೇ ಇರಲಿ ಸರಕಾರದ
ನೀತಿ ನಿಯಮಗಳ ದಿಕ್ಕುದೆಸೆಗಳನ್ನು ನಿರ್ಧರಿಸುವವರು
ಕೆಲವೇ ಕೆಲವು ಉದ್ಯಮಪತಿಗಳು.
ಹದಿನಾರನೇ ಲೋಕಸಭೆಗೆ ಕ್ಷಣಗಣನೆ - ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ
ಡಾ ಅಶೋಕ್ ಕೆ ಆರ್
ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿತ್ತು. ಚುನಾವಣೆ ಘೋಷಣೆಯಾದ ನಂತರವಾದರೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿ ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಮಾರ್ಚ್ 26, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 23
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 22 ಓದಲು ಇಲ್ಲಿ ಕ್ಲಿಕ್ಕಿಸಿ
ಇವೆಲ್ಲವೂ ನಡೆದುಹೋಗಿ ಆಗಲೇ ಏಳು ತಿಂಗಳಾಗಿ ಹೋಯಿತಲ್ಲ. ಕಾಲನ ವೇಗದಲ್ಲಿ ಚಲಿಸುವ ಶಕ್ತಿ ಯಾರಿಗೂ ಇಲ್ಲ ಎನ್ನಿಸಿತು ಲೋಕಿಗೆ. ಇವತ್ತಿಗೆ ನಾನು ಪೂರ್ಣಿ ಮಾತನಾಡಿ ಒಂದು ವರುಷವಾಯಿತಂತೆ. ಇವತ್ತಿನ ದಿನವೇ ಅವಳ ಜೊತೆ ಸರಿಯಾಗಿ ಮಾತನಾಡಲಿಲ್ಲವಲ್ಲ. ವಿಜಯ್ ಗಾದ ಅನ್ಯಾಯ; ತಂದೆ ದೊಡ್ಡವರೆನಿಸಿಕೊಂಡವರಿಗೆ ಹೆದರಿ ನಡೆದುಕೊಂಡ ರೀತಿ; ಆದರ್ಶಗಳಿಗೆ ವಿರುದ್ಧವಾಗಿ ನಿಂತು ಏನೊಂದೂ ಮಾತನಾಡದೆ ನಾನು ಸುಮ್ಮನಾಗಿಬಿಟ್ಟದ್ದು – ಇವೆಲ್ಲಾ ಮನಸ್ಸನ್ನು ಬಹಳ ತಿಂಗಳುಗಳ ನಂತರ ಮತ್ತೆ ಬೇಸರಕ್ಕೆ ದೂಡಿ ಬಿಟ್ಟಿತು.

ಮಾರ್ಚ್ 24, 2014
ಬಿರುಬಿಸಿಲಿಗೂ ಬಾಡದ ಮರುಭೂಮಿಯ ಹೂವಿದು.
ಡಾ.ಅಶೋಕ್. ಕೆ. ಆರ್.
ಆತ್ಮಕಥೆಗಳೇ ಹಾಗೆ! ಅಸಂಖ್ಯಾತ ತಿರುವುಗಳಿರುವ ಪುಟಪುಟಕ್ಕೂ ಕುತೂಹಲ ಹೆಚ್ಚಿಸುವ
ಥ್ರಿಲ್ಲರ್ ಕಾದಂಬರಿಗಳಿಗಿಂತ ರೋಮಾಂಚನಕಾರಿ. ಕಲ್ಪಿಸಿಕೊಳ್ಳಲೂ ಕಷ್ಟಸಾಧ್ಯವಾದ ಅನೇಕ ಸಂಗತಿಗಳು
ನಿಜಜೀವನದಲ್ಲಿ ಘಟಿಸಿಬಿಟ್ಟಿರುತ್ತದೆ. ಓದಿ ಮುಗಿಸಿದ ನಂತರ ಒಂದಷ್ಟು ಅಚ್ಚರಿ ಮತ್ತು ಅಘಾತ ಮೂಡಿಸುವ
ಆತ್ಮಕಥೆ 90ರ ದಶಕದ ಜಾಹೀರಾತು ಜಗತ್ತಿನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ವಾರಿಸ್ ಡೆರಿಸ್ ಳದ್ದು.
ಮಾರ್ಚ್ 21, 2014
ಗಲಭಾ ರಾಜಕೀಯ!
ಕೆಲವೊಮ್ಮೆ ಏನೋ ಹೇಳಲು ಹೋಗಿ ಸತ್ಯವನ್ನು ಹೊರಹಾಕಿಬಿಡಲಾಗುತ್ತದೆ! ಇವತ್ತಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದಿರುವ ಒಂದು ವರದಿ ಗಲಭೆಗಳ ಹಿಂದಿನ ರಾಜಕೀಯವನ್ನು ಬಯಲು ಮಾಡಿಬಿಡುವುದರ ಜೊತೆಜೊತೆಗೆ ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಏನು ಕಾರಣ ಎಂಬುದನ್ನೂ ಸೂಚ್ಯವಾಗಿ ತಿಳಿಸಿಬಿಟ್ಟಿದೆ.
ಮಾರ್ಚ್ 19, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 22

ಆದರ್ಶವೇ ಬೆನ್ನು ಹತ್ತಿ ಭಾಗ 21 ಓದಲು ಇಲ್ಲಿ ಕ್ಲಿಕ್ಕಿಸಿ
ಮೈಸೂರಿಗೆ ಬರುತ್ತಿದ್ದಂತಯೇ
ಲೋಕಿ ಮನೆಗೂ ಹೋಗದೆ ನೇರ ಗೃಂಥಾಲಯಕ್ಕೆ ಹೋದ. ‘ಹಳೆ ಪತ್ರಿಕೆಗಳು ಎಲ್ಲಿವೆ’ ಎಂದು ಗೃಂಥಪಾಲಕರನ್ನು
ಕೇಳಿ, ಪತ್ರಿಕೆಗಳಿದ್ದ ಜಾಗಕ್ಕೆ ಹೋಗಿ ‘ಬಾಂಬ್ ಎಸ್.ಐ’ ಮತ್ತು ISRAದ ಬಗ್ಗೆ ಬಂದಿದ್ದ ಪ್ರತಿಯೊಂದು
ಮಾಹಿತಿಯನ್ನು ಓದಲಾರಂಭಿಸಿದ.
ಆಪರೇಷನ್ ಕನಕಾಸುರ! ಪತ್ರಿಕೋದ್ಯಮವನ್ನೇ ಕುಟುಕಿದ ಕಾರ್ಯಾಚರಣೆ!
ಡಾ. ಅಶೋಕ್. ಕೆ. ಆರ್
ಪ್ರಕರಣವೊಂದರ ಬೆನ್ನು ಹತ್ತಿ ತನಿಖೆ ಮಾಡುವುದು ಪತ್ರಿಕೋದ್ಯಮದ ಭಾಗ.
ಪತ್ರಿಕೋದ್ಯಮದ ರೀತಿ ರಿವಾಜುಗಳು ಬದಲಾದಂತೆ ತನಿಖಾ ಪತ್ರಿಕೋದ್ಯಮದ ರೂಪು ರೇಷೆಗಳೂ ಬದಲಾಗುತ್ತಿವೆ.
ಅವಶ್ಯ ದಾಖಲೆಗಳನ್ನು ಸಂಗ್ರಹಿಸುತ್ತ ಸಂಗ್ರಹಗೊಂಡ ದಾಖಲೆ ವ್ಯಕ್ತಿಯೊಬ್ಬರ ವಿರುದ್ಧ, ಸಂಸ್ಥೆಯೊಂದರ
ವಿರುದ್ಧ ಪತ್ರಿಕಾ ಲೇಖನ ಬರೆಯುವುದಕ್ಕೆ ಸಾಕಷ್ಟಾಯಿತು ಎಂಬ ಭಾವ ಮೂಡಿದ ನಂತರ ಲೇಖನಿಗೆ ಕೆಲಸ ಕೊಡಲಾಗುತ್ತಿತ್ತು.
ಪತ್ರಿಕಾ ವರದಿಗಳು ಸಮಾಜವನ್ನಲುಗಿಸಿ ಕ್ರಿಯಾಶೀಲವಾಗಿಸುತ್ತಿತ್ತು. ಪತ್ರಿಕಾ ವರದಿಗಳ ಕರಾರುವಕ್ಕುತನ
ಎಷ್ಟಿರುತ್ತಿತ್ತೆಂದರೆ ಅದರ ಸತ್ಯಾ ಸತ್ಯತೆಗಳ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ಅನುಮಾನ ಮೂಡುತ್ತಿರಲಿಲ್ಲ.
ಇದು ವಿರೋಧಿಗಳ ಒಳಸಂಚು ಎಂಬ ಭಾವನೆ ಮೂಡುತ್ತಿದ್ದುದಂತೂ ಅಪರೂಪದಲ್ಲಿ ಅಪರೂಪ. ಬೋಪೋರ್ಸ್ ತರಹದ ಹಗರಣಗಳು
ಹೊರಪ್ರಪಂಚಕ್ಕೆ ತಿಳಿದಿದ್ದು ಇಂತಹ ನಿರ್ಭಯ ತನಿಖಾ ಪತ್ರಿಕೋದ್ಯಮದಿಂದ. ವರದಿಯನ್ನು ಬೆಂಬಲಿಸುವಂತಹ
ದಾಖಲೆಗಳನ್ನು ಸಂಗ್ರಹಿಸಿದ ನಂತರವಷ್ಟೇ ಪ್ರಕಟಣೆಗೆ ಪರಿಗಣಿಸಲಾಗುತ್ತಿತ್ತು. ಪತ್ರಿಕೆಗಳ ಸಂಖ್ಯೆ
ಹೆಚ್ಚಿದ ನಂತರ ಅದರಲ್ಲೂ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಬರುವ ಟ್ಯಾಬ್ಲಾಯ್ಡ್ ಪತ್ರಿಕೆಗಳ
ಸಂಖೈ ಅಧಿಕಗೊಂಡ ಬಳಿಕ ತನಿಖಾ ಪತ್ರಿಕೋದ್ಯಮದಲ್ಲೂ ಆತುರತೆ ಕಾಣಲಾರಂಭಿಸಿತು. ತತ್ಪರಿಣಾಮವಾಗಿ ಪತ್ರಿಕೆ
ಮತ್ತು ಪತ್ರಕರ್ತರ ಮೇಲಿನ ಮಾನನಷ್ಟ ಮೊಕದ್ದಮೆಗಳೂ ಹೆಚ್ಚಾಗಲಾರಂಭಿಸಿತು. ಕೆಲವೊಮ್ಮೆ ಕಣ್ಣಿಗೆ ಕಾಣುವ
ಸತ್ಯಕ್ಕೆ ದಾಖಲೆಯ ಅಲಭ್ಯತೆಯುಂಟಾಗುವುದರಿಂದ ಸಂಪೂರ್ಣ ದಾಖಲೆಗಳಿಲ್ಲದ ತನಿಖಾ ಪತ್ರಿಕೋದ್ಯಮವನ್ನು
ಒಂದು ಹಂತದವರೆಗೆ ಒಪ್ಪಿಕೊಳ್ಳಲಾಯಿತು. ಇತ್ತೀಚಿನ ದಿನಮಾನದಲ್ಲಿ ಉತ್ತಮ ತನಿಖಾ ಪತ್ರಿಕೋದ್ಯಮಕ್ಕೆ
ಪ್ರಜಾವಾಣಿಯಲ್ಲಿ ಪ್ರಕಟವಾದ ಕೆ.ಪಿ.ಎಸ್.ಸಿ ಕರ್ಮಕಾಂಡವನ್ನು ಉದಹರಿಸಬಹುದು.
ಮಾರ್ಚ್ 9, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 21
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ
ಕೈಯಿಟ್ಟ ವ್ಯಕ್ತಿ ಎ.ಎಸ್.ಐ
ರಾಮಸ್ವಾಮಿ!!
“ಉನ್ನದು ಎಂದ ಊರು” (ನಿನ್ನದ್ಯಾವ ಊರು)
“ಮೈಸೂರು” ನಡೆದ ಘಟನೆಗಳಿಂದ
ಕೊಂಚ ಅಧೀರನಾಗಿದ್ದ ಲೋಕಿ ಮೆಲ್ಲನೆ ತಗ್ಗಿದ ದನಿಯಲ್ಲಿ ಉತ್ತರಿಸಿದ.
“ತಮಿಳ್ ತೆರಿಯುಮಾ?” (ತಮಿಳು ಬರುತ್ತಾ?)