
ಡಾ ಅಶೋಕ್ ಕೆ ಆರ್
ಹೊಸ ನಿರ್ದೇಶಕರಿಗೆ ಮತ್ತು ಕೆಲವು ಬಾರಿ ಯಶಸ್ವಿ
ಚಿತ್ರ ಕೊಟ್ಟ ನಿರ್ದೇಶಕರಿಗೂ ತಾವು ಪ್ರೀತಿಯಿಂದ ಜತನದಿಂದ ಪೋಷಿಸಿ ಬೆಳೆಸಿದ ಕತೆಯನ್ನು ಚಲನಚಿತ್ರವಾಗಿಸಲು
ನಿರ್ಮಾಪಕರು ಸಿಗುವುದಿಲ್ಲ. ಸಿದ್ಧ ಸೂತ್ರಗಳ ಚಿತ್ರ ಮಾಡುವಂತೆ, ರಿಮೇಕ್ ಚಿತ್ರ ಮಾಡುವಂತೆ, ಹತ್ತಾರು
ಚಿತ್ರಗಳನ್ನು ನೋಡಿ ಕದ್ದು ರೀಲು ಸುತ್ತುವಂತೆ ಒತ್ತಾಯಿಸುವ ನಿರ್ಮಾಪಕರ ಸಂಖೈಯೇ ಅಧಿಕ. ಇನ್ನು ಅಪ್ಪಿ
ತಪ್ಪಿ ಹೊಸತನದ ಚಿತ್ರಕ್ಕೆ ನಿರ್ಮಾಪಕರೊಬ್ಬರನ್ನು ಒಪ್ಪಿಸಿದರೂ ಈಗಾಗಲೇ ಚಾಲ್ತಿಯಲ್ಲಿರುವ ನಟರನ್ನೇನಾದರೂ
ತಮ್ಮ ಚಿತ್ರದ ನಾಯಕ ನಟನ ಸ್ಥಾನಕ್ಕೆ ಕಲ್ಪಿಸಿಕೊಂಡುಬಿಟ್ಟಿದ್ದರೆ ಆ ನಾಯಕನನ್ನು ಒಪ್ಪಿಸುವಷ್ಟರಲ್ಲಿ
ನಿರ್ದೇಶಕನಿಗೆ ಚಿತ್ರ ಮಾಡುವ ಆಸೆಯೇ ಹೊರಟುಹೋಗುತ್ತದೇನೋ!!