ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

11.11.16

ಉಪಲಬ್ಧತೆ

ಪ್ರವೀಣಕುಮಾರ್ ಗೋಣಿ 
ಎದೆಯ ಬಾಗಿಲ ತೆರೆಯದೆ 
ಬಂದು ಪವಡಿಸುವನೇ ಪರಮಾತ್ಮ ?
ಭೋಗದ ಬಲೆಯಲ್ಲಿ ಸಿಲುಕಿ 
ಕಾಣೆಯಾಗಿಹ ಮನಕೆ ತಾಕೀತೆ 
ಅವನ ಬರುವೆಯಾ ಪುಳಕ ?


ವಿಧ ವಿಧದ ವಾಸನೆಗಳ ಸುಳಿಯಲ್ಲಿ 
ಸಿಕ್ಕಿ ಕೊಳೆಯಾಗಿಹ ಮನದ 
ಬಿಡದಂತಾವರಿಸಿದ ಜಂಜಡಗಳ ಸರಿಸಿ 
ಹೊಳೆವ ಸ್ಪಟಿಕದಂತಹ ಅವನರಿವು 
ಗೋಚರಿಸಿ ಅಂತರಾತ್ಮವ ಬೆಳಗೀತೆ ?

ಬಯಸುತ್ತ ಶಿರ ಬಾಗುವ ಆಸೆಬುರುಕ 
ಮನಕೆ ತನ್ನ ತಾ ಅಡಿಯಾಳಾಗಿಸದೆ 
ಲೆಕ್ಕಾಚಾರದಲೆ ಮುಳುಗುವ ಹುಚ್ಚುತನವ 
ಬಿಡದೆ ಅವನ ಬೆನ್ನತ್ತಿದರೆ 
ತಾ ಬಂದು ಪವಡಿಸುವವನೇ ? ಶಕ್ತವಿಲ್ಲದಾ 
ಹೃದಯದಲ್ಲಿ ಉಪಲಬ್ಧಿಯಾದಾನೆ ?

No comments:

Post a Comment

Related Posts Plugin for WordPress, Blogger...