ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು. ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.