ಸೆಪ್ಟೆಂ 1, 2014
ಆಗ 29, 2014
Aarambha Songs
Download all songs in zip click here
Adda.mp3
Hadi Hadi.mp3
Iduvarege iddilla.mp3
Swarga Nisarga.mp3
ಎಸ್ ಅಭಿ ಹನಕೆರೆ ನಿರ್ದೇಶಿಸುತ್ತಿರುವ ಆರಂಭ - The Last Chance ಚಿತ್ರದ ಎಲ್ಲಾ ನಾಲ್ಕೂ ಹಾಡುಗಳು ಇಂದಿನಿಂದ ಉಚಿತವಾಗಿ ಲಭ್ಯ. ಶರ ಪ್ರೊಡಕ್ಷನ್ ಲಾಂಛನದಲ್ಲಿ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ಗುರುಕಿರಣ್, ಗೋಟೂರಿ, ವಿ.ಮನೋಹರ್, ಅಭಿ ಹನಕೆರೆ, ಕವಿರಾಜ್ ಬರೆದಿರುವ ಹಾಡುಗಳಿಗೆ ಧ್ವನಿಯಾಗಿರುವುದು ಗುರುಕಿರಣ್, ಮುರುಳಿ ಮೋಹನ್, ಗುರುರಾಜ್ ಹೊಸ್ಕೋಟೆ, ಮಾಲ್ಗುಡಿ ಶುಭ.
"ಇದುವರೆಗೆ ಇದ್ದಿಲ್ಲ........................ಲವ್ ಮೂಡಿತಣ್ಣ" (ಈ ಹಾಡು ಈ ವರ್ಷದ ಹಿಟ್ ಸಾಲಿಗೆ ಸೇರುವುದರಲ್ಲಿ ನನಗಂತೂ ಸಂಶಯವಿಲ್ಲ - ಸಂ)
"ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ"
ಮನೆಮುರಿಯೋ ಐಡಿಯಾಗಳು ಎಲ್ಲಿ ಸಿಗುತ್ತೆ ಗೊತ್ತಾ? ಈ ಹಾಡು ಕೇಳಿ

"ಸ್ವರ್ಗ ನಿಸರ್ಗ"
Summary - Aarambha - The Last Chance, Kannada movie audio released. Songs are available for free download. Music by Gurukiran. Produced by D Ganesh V Nagenahalli
ಆಗ 28, 2014
ಅತಿ ಶೀಘ್ರದಲ್ಲಿ ಸಂಗೀತದ "ಆರಂಭ"
![]() |
"ಆರಂಭ" |
ಹೊಸಬರ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿ ಸಂಗೀತ ನೀಡಿರುವುದು ಹೊಸಬರಿಗೆ ಹೊಸ ಆಲೋಚನೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬಂದಿರುವ ಗುರುಕಿರಣ್. ಗುರುಕಿರಣ್, ಅಭಿ ಹನಕೆರೆ, ವಿ.ಮನೋಹರ್, ಗೊಟೂರಿ ಮತ್ತು ಕವಿರಾಜ್ ರಚಿಸಿರುವ ಸಾಹಿತ್ಯಕ್ಕೆ ದನಿ ನೀಡಿರುವವರು ಮುರುಳಿ ಮೋಹನ್, ಗುರುರಾಜ್ ಹೊಸಕೋಟೆ, ಮಾಲ್ಗುಡಿ ಶುಭ ಮತ್ತು ಗುರುಕಿರಣ್.
ಆಗ 27, 2014
ಆದರ್ಶವೇ ಬೆನ್ನು ಹತ್ತಿ .... ಕೊನೆಯ ಕಂತು.
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 37 ಓದಲು ಇಲ್ಲಿ ಕ್ಲಿಕ್ಕಿಸಿ
ಉಳಿದ ಸದಸ್ಯರು ಪೋಲೀಸರು ಅಲ್ಲಿ
ಕುಳಿತು ತಮ್ಮ ಪೊಸಿಷನ್ ತೆಗೆದುಕೊಳ್ಳುವಷ್ಟರಲ್ಲಿ ಹೊರಟು ಹೋಗಿದ್ದರು. ಕೈಯಲ್ಲಿಡಿದಿದ್ದ ಟಾರ್ಚಿನ
ಬೆಳಕೇ ನಮಗೆ ಶತ್ರುವಾಗಿತ್ತು. ಅವರಿಗೆ ತೀರ ಸಮೀಪಕ್ಕೆ ಬರುವವರೆಗೂ ಸುಮ್ಮನಿದ್ದರು. ಅವರ ಹತ್ತಿರಕ್ಕೆ
ಬರುತ್ತಿದ್ದಂತೆ ಪೋಲೀಸರಿಗೆ ಪ್ರೇಮ್ ನ ಹೆಗಲಿನಲ್ಲಿದ್ದ ಎ.ಕೆ.47 ಬಂದೂಕು ಕಾಣಿಸಿತು. “ಫೈರ್” ಪೋಲೀಸನೊಬ್ಬ
ಕೂಗಿ ಮುಗಿಸುವಷ್ಟರಲ್ಲಿ ಪೋಲೀಸರು ಹಾರಿಸಿದ ಗುಂಡು ಪ್ರೇಮ್ ನ ಹಣೆ ಹೊಕ್ಕಿತು. ಒಂದು ಸಣ್ಣ ಕಿರುಚಾಟವನ್ನು
ಮಾಡಿ ನೆಲಕ್ಕುರುಳಿದರು ಕಾ.ಪ್ರೇಮ್.
ಆಗ 25, 2014
ಇತಿಹಾಸವನ್ನರಸುತ್ತ.....
![]() |
Making History |
ಡಾ. ಅಶೋಕ್. ಕೆ. ಆರ್.
ಇತಿಹಾಸವೆಂದರೆ ಏನು? ಶಾಲೆಯಲ್ಲಿ ಸಮಾಜ ವಿಜ್ಞಾನವೆಂದರೆ
ಆಸಕ್ತಿಯೇ ಮೂಡಿಸದ ಪಾಠಗಳ ಸರಮಾಲೆ. ಜಿಯೋಗ್ರಫಿಯಲ್ಲಿ ಮ್ಯಾಪುಗಳನ್ನು ಬರೆಬರೆದು ಅಭ್ಯಸಿಸಿ, ಸಿವಿಕ್ಸಿನಲ್ಲಿ
ಅರ್ಥವಾಗದ್ದನ್ನೆಲ್ಲಾ ಉರು ಹೊಡೆದು ಇತಿಹಾಸದ ಪುಸ್ತಕ ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು! ಆ ಇತಿಹಾಸದ
ಪುಸ್ತಕದಲ್ಲಾದರೂ ಏನಿರುತ್ತಿತ್ತು? ಒಂದಾದ ಮೇಲೊಂದರಂತೆ ಅಸಂಖ್ಯ ಇಸವಿಗಳು. ಇಂತಿಪ್ಪ ಇಸವಿಯಲ್ಲಿ
ಇಂತಿಪ್ಪ ಜಾಗದಲ್ಲಿ ಇಂತೀರ್ವ ರಾಜರು ಕಾದಾಡಿ ಇಂತಿಪ್ಪ ರಾಜ ಗೆದ್ದು ಅಂತಿಪ್ಪ ರಾಜ ಸೋತೋ – ಸತ್ತೋ
ಯುದ್ಧ ಮುಗಿಯುವುದೇ ಇತಿಹಾಸ. ಸದ್ಯ ಹತ್ತನೇ ತರಗತಿಗೆ ಆ ಪಠ್ಯದ ಇತಿಹಾಸದಿಂದ ಮುಕ್ತನಾದೆ!
ಆಗ 24, 2014
ಸಮಾಧಿಗಳ ಆಗರವಾಗುತ್ತಿರುವ ಕಲಾಗ್ರಾಮ
![]() |
ಕಲಾಗ್ರಾಮದಲ್ಲಿ ಅನಂತಮೂರ್ತಿಯವರ ಅಂತ್ಯಸಂಸ್ಕಾರ |
ಡಾ ಅಶೋಕ್ ಕೆ ಆರ್
ಸತ್ತ ಖ್ಯಾತನಾಮರನ್ನು ಸಮಾಧಿಯ ಪ್ರತಿಮೆಯೊಳಗೆ
ಬಂಧಿಸುವುದು ಹೊಸತೇನಲ್ಲ. ಕೆಲವೊಮ್ಮೆ ಈ ಸಮಾಧಿಯ ಸ್ಥಳಗಳು ಅವರ ಹಾದಿಯಲ್ಲಿ ಕೊಂಚ ದೂರವಾದರೂ
ನಡೆದು ಅನುಭೂತಿ ಪಡೆದುಕೊಳ್ಳುವವರಿಗೆ ಸಹಕಾರಿಯಾಗುತ್ತದೆ. ಬಹಳಷ್ಟು ಬಾರಿ ಈ ಸ್ಥಳಗಳು ರಂಜನೀಯ
ಪ್ರೇಕ್ಷಣೀಯ ಸ್ಥಳಗಳಾಗಿ ಪರಿವರ್ತಿತವಾಗಿ ವಾಣಿಜ್ಯ ಉದ್ದೇಶಕ್ಕೆ ಮೀಸಲಾಗಿಬಿಡುವ ಅಪಾಯವಿದೆ.
ಅನೇಕ ಕಡೆ ಈ ಅಪಾಯ ಜಾರಿಯೂ ಆಗಿಹೋಗಿದೆ.