ಆಗ 21, 2014
ಆಗ 20, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 37

ಆದರ್ಶವೇ ಬೆನ್ನು ಹತ್ತಿ .... ಭಾಗ 36 ಓದಲು ಇಲ್ಲಿ ಕ್ಲಿಕ್ಕಿಸಿ
‘ಆತ್ಮ’ – ಕಥೆ
ಏನೆಂದರೆ ಏನೂ ಕೆಲಸ ಮಾಡದೆ
ಸತ್ತು ಹೋಗ್ತೀನಿ ಅಂತ ಕನಸುಮನಸಿನಲ್ಲೂ ನಾನು ಎಣಿಸಿರಲಿಲ್ಲ. ನಮ್ಮ ಸಾವಿನಿಂದ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ
ಎಂಬುದೇನೋ ನಿಜ. ಆದರೆ..... ನಾ ಕಂಡ ಕನಸುಗಳಲ್ಲಿ ಕೊಂಚವನ್ನೂ ಸಾಧಿಸಲಾಗದೆ ಸತ್ತು ಹೋದೆನಲ್ಲಾ ಎಂಬುದನ್ನು
ನೆನೆಸಿಕೊಂಡಾಗಲೆಲ್ಲಾ ಬೇಸರವಾಗುತ್ತದೆ. ಈ ಕಾಡಿಗೆ ಬರದೇ ಇದ್ದಲ್ಲಿ ಏನನ್ನಾದರೂ ಮಾಡಬಹುದಿತ್ತೇನೋ
ಎಂದೊಮ್ಮೆಮ್ಮೆ ಅನ್ನಿಸುತ್ತದೆ. ನಾಡಿನಲ್ಲಿ ನಾ ನಡೆದುಕೊಂಡಿದ್ದ ರೀತಿಯಿಂದ ಅದೂ ಸಾಧ್ಯವಾಗುತ್ತಿರಲಿಲ್ಲವೇನೋ?
ಆಗ 19, 2014
ವಾಣಿಜ್ಯ ಮಂಡಳಿಯನ್ನೊರತು ಪಡಿಸಿ ಎಲ್ಲವನ್ನೂ ನಿಷೇಧಿಸಲು ಹಿರಿತೆರೆಯ ನಿರ್ಧಾರ!
ಅಪರೂಪದ ವಿದ್ಯಮಾನವೊಂದರಲ್ಲಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯು ಧೃಡ ನಿರ್ಧಾರವೊಂದರ ಸಮೀಪ ಬಂದು ನಿಂತಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಮತ್ತು ಗ್ರಾಹಕ ಹಕ್ಕು ಮಣ್ಣು ಮಸಿ ಅಂಥ ಬೊಬ್ಬೆ ಹೊಡೆಯುವವರು ವೈಲೆಂಟಾಗದೆ ಸೈಲೆಂಟಾಗಿ ಸೈಡಿಗೋದರೆ ಈ ಧೃಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ವಾಣಿಜ್ಯ ಮಂಡಳಿಯ ಗೋಡೆಗಳು ಪಿಸುಗುಟ್ಟುತ್ತಿದ್ದುದಾಗಿ ಅನಧಿಕೃತ ಮೂಲಗಳು ತಿಳಿಸಿವೆ.
ಆಗ 18, 2014
ಕನ್ನಡ ಇ-ಪುಸ್ತಕಗಳ ಸಂಖೈ ಹೆಚ್ಚಿಸುವಲ್ಲಿ ನಿಮ್ಮದೂ ಪಾತ್ರವಿರಲಿ.
ಡಾ ಅಶೋಕ್ ಕೆ ಆರ್
ನಮಗಿಷ್ಟವಿದೆಯೋ ಇಲ್ಲವೋ, ನಮಗೆ ಬೇಕೋ ಬೇಡವೋ ತಂತ್ರಜ್ಞಾನವೆಂಬುದು
ಇವತ್ತು ಎಲ್ಲ ಕ್ಷೇತ್ರಗಳನ್ನೂ ಹಾಸು ಹೊಕ್ಕಾಗಿದೆ. ಪುಸ್ತಕಗಳನ್ನು ಮುದ್ರಣ ರೂಪದಲ್ಲಿಯೇ ಖರೀದಿಸಿ
ಹೊಚ್ಚ ಹೊಸ ಪುಟಗಳ ಸ್ವಾದವನ್ನಾಸ್ವಾದಿಸಿ ಒಳಪುಟದಲ್ಲಿ ಹೆಸರು ಬರೆದು ಪುಟ ತಿರುವುತ್ತಾ ಓದುವ ಸಂತಸವನ್ನು
ಯಾವ ಫೋನುಗಳಾಗಲೀ ಟ್ಯಾಬ್ಲೆಟ್ಟುಗಳಾಗಲೀ ಮತ್ತಿತರ ಗ್ಯಾಡ್ಜೆಟ್ಟುಗಳಾಗಲೀ ಕೊಡಲು ಸಾಧ್ಯವೇ ಇಲ್ಲ.
ಗ್ಯಾಡ್ಜೆಟ್ಟುಗಳಲ್ಲಿ ಓದುವುದು ಕಣ್ಣಿಗೆ ಅಷ್ಟು ಹಿತಕರವೆಲ್ಲವೆಂಬುದು ಸತ್ಯವಾದರೂ ಗ್ಯಾಡ್ಜೆಟ್ಟುಗಳ
ಮೇಲಿನ ನಮ್ಮ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂಬುದು ವಾಸ್ತವ. ದಿನಪತ್ರಿಕೆಗಳನ್ನು
ಓದುವುದಕ್ಕೆ ಫ್ಯಾಬ್ಲೆಟ್ಟುಗಳ ಉಪಯೋಗ ಹೆಚ್ಚುತ್ತಿದೆ. ಕಷ್ಟವಾದರೂ, ಸಮಾಧಾನವಾಗದಿದ್ದರೂ ಮುದ್ರಣ
ಆವೃತ್ತಿಯನ್ನು ಮರೆತು ಇ-ಆವೃತ್ತಿಯ ಪುಸ್ತಕಗಳನ್ನು ಓದುವವರ ಸಂಖೈ ಕ್ರಮೇಣ ಹೆಚ್ಚಾಗುವುದರಲ್ಲಿ ಸಂಶಯವಿರಲಾರದು.
ಮೇಲಾಗಿ ಈ ಇ-ಆವೃತ್ತಿಗಳು ವಿಶ್ವಾದ್ಯಂತ ಕ್ಷಣಮಾತ್ರದಲ್ಲಿ ದೊರಕುವ ಸಾಧ್ಯತೆಗಳು ಕೂಡ ಕನ್ನಡ ಪುಸ್ತಕಗಳ
ಇ-ಆವೃತ್ತಿ ಹೆಚ್ಚಬೇಕೆಂಬ ಆಶಯಕ್ಕೆ ಪೂರಕವಾಗುತ್ತದೆ.
ಆಗ 17, 2014
ಆಗ 16, 2014
ಆಗ 15, 2014
ಆಗ 14, 2014
ಅವರೆಲ್ಲರೂ ಪ್ರತಿಭಾವಂತರೇ ಆದರೆ…..
ಡಾ ಅಶೋಕ್ ಕೆ ಆರ್
ಭಾರತದಲ್ಲಿ ಹಗರಣಗಳು ಹೊಸದಲ್ಲ,
ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ
ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು
ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ
ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ
ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು
ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು
ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.