ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 33 ಓದಲು ಇಲ್ಲಿ ಕ್ಲಿಕ್ಕಿಸಿ
ಸ್ನೇಹಾಳಿಗೆ
ಬಂದಿದ್ದ ಪತ್ರವನ್ನು ಓದಿದಳು ಪೂರ್ಣಿಮಾ. ಸಿಂಚನಾ ಕೂಡ ಓದಿದಳು. ಲೋಕಿ ಹೋಗಿದ್ದೆಲ್ಲಿಗೆ ಎಂದು ಈಗ
ತಿಳಿಯಿತು. ಸ್ನೇಹ ಪೂರ್ಣಿಮಾಳ ಹೆಗಲನ್ನು ಆಸರೆಯಾಗಿಸಿಕೊಂಡು ಕುಳಿತಿದ್ದಳು. ಯಾರಿಗ್ಯಾರು ಸಮಾಧಾನಿಸಬೇಕೆಂದು
ತಿಳಿಯಲಿಲ್ಲ.
“ನಿನಗೆ ಪತ್ರ
ಯಾವಾಗ ತಲುಪಿತು ಸ್ನೇಹಾ?”
“ಈಗ ಒಂದರ್ಧ
ಘಂಟೆಯಾಯಿತು. ನಿಮಗೆ?”