ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್ಗಳು ನೈತಿಕ ಸಂಬಂಧಗಳ ಸಿಗ್ನಲ್ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.



