Dr Ashok K R
ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ನಡೆಸಿದ
ಪೈಶಾಚಿಕ ಕೃತ್ಯ ಧರ್ಮ ದೇಶಗಳ ಗಡಿ ದಾಟಿ ಮೂಡಿಸಿದ ಆಘಾತ, ಸತ್ತ ಪುಟ್ಟ ಮಕ್ಕಳ ಬಗೆಗೆ ಬೆಳೆದ
ಆರ್ದ್ಯ ಭಾವದ ಕಣ್ಣೀರು ಒಣಗುವ ಮುನ್ನವೇ 2014ಕ್ಕೆ ತೆರೆಬೀಳಲಿದೆ. ಹಿಂದಿರುಗಿ ನೋಡಿದಾಗ
ನೆನಪಾಗುವ ಸಂಗತಿಗಳು ಅನೇಕ. ಭಾರತದ ಮಟ್ಟಿಗೆ ರಾಜಕೀಯವಾಗಿ ಒಂದು ಪಕ್ಷ ಉತ್ತುಂಗಕ್ಕೇರಿದರೆ
ಮತ್ತೊಂದು ಪಕ್ಷ ಪಾತಾಳಕ್ಕಿಳಿದಿದೆ. ದಶಕಗಳ ನಂತರ ಏಕಪಕ್ಷ ಬಹುಮತ ಪಡೆದಿದ್ದು ನರೇಂದ್ರ ಮೋದಿ
ನೇತೃತ್ವದ ಬಿಜೆಪಿಯ ಸಾಧನೆ. ಹಿಂದೆಂದೂ ಕಾಣದಷ್ಟು ಕಡಿಮೆ ಸೀಟುಗಳನ್ನು ದಕ್ಕಿಸಿಕೊಂಡದ್ದು
ಕಾಂಗ್ರೆಸ್ಸಿನ ಸಾಧನೆ! ಮಂಗಳಯಾನದ ಯಶಸ್ಸು ಇಡೀ ವಿಶ್ವ ಭಾರತದ ತಂತ್ರಜ್ಞಾನದೆಡೆಗೆ
ಗಮನಹರಿಸುವಂತೆ ಮಾಡಿತು.