![]() |
ಚಿತ್ರ 1: ಕಾಡು ಮೈನಾ |
ನಾಡಿಗೆ ಹೊಂದಿಕೊಳ್ಳುತ್ತಿರುವ ಮತ್ತೊಂದು ಕಾಡು ಪಕ್ಷಿಯಿದು. ಕಾಡು ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿ 'ಮೈನಾ' ಪಕ್ಷಿಯನ್ನೇ ಹೋಲುತ್ತದೆ, ಕೆಲವೊಂದು ವ್ಯತ್ಯಾಸಗಳಿವೆ ಅಷ್ಟೇ.
ಆಂಗ್ಲ ಹೆಸರು: - Jungle myna
ವೈಜ್ಞಾನಿಕ ಹೆಸರು: - Acridotheres fuscus
ಇನ್ನೂ ಹೆಚ್ಚಿನ ಪಕ್ಷಿಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಬೂದು - ಕಂದು ಮಿಶ್ರಿತ ಬಣ್ಣದ ದೇಹದ ಪಕ್ಷಿಯಿದು. ಎದೆಯಿಂದ ತಲೆಯ ಕಡೆಗೆ ಸಾಗಿದಂತೆ ಬಣ್ಣಗಳು ಗಾಢವಾಗುತ್ತಾ ಸಾಗಿ ತಲೆ ಪೂರ ಕಪ್ಪು ಬಣ್ಣವಾಗಿ ಕಾಣಿಸುತ್ತದೆ. ನೀಟಾಗಿ ಕ್ರಾಪು ತೆಗೆದಂತೆ ಪುಟ್ಟ ಕಪ್ಪು ಕಿರೀಟವಿದೆ. ಕೊಕ್ಕಿನ ಮುಂದರ್ಧ ಹಳದಿ ಬಣ್ಣವಿದ್ದರೆ ಹಿಂದಿನ ಭಾಗ ಕಪ್ಪು ಬಣ್ಣವನ್ನೊಂದಿದೆ. ತೆಳು ನೀಲಿ ಬಣ್ಣದ ಕಣ್ಣು ಆಕರ್ಷಣೀಯ. ಹಳದಿ ಬಣ್ಣದ ಕಾಲುಗಳನ್ನೊಂದಿದೆ. ರೆಕ್ಕೆಗಳಲ್ಲಿ ಕಂದು - ಬೂದು ಬಣ್ಣದ ಜೊತೆಗೆ ಬಿಳಿ ಪಟ್ಟಿಗಳೂ ಇವೆ. ಆದರಿವು ಕಾಣಿಸುವುದು ಕಾಡು ಮೈನಾ ಹಾರಾಟದಲ್ಲಿದ್ದಾಗ ಮಾತ್ರ. ಬಾಲದ ತುದಿಯೂ ಬೆಳ್ಳಗಿದೆ.