ನವೆಂ 17, 2017

ಅಮೃತಯಾನ.

ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ. 
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ. 

ಅಜ್ಜಮನೆ

ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.

ನವೆಂ 14, 2017

ಮತಾಂದರುಗಳನ್ನು ಇಲ್ಲಿಗೆ ಕರೆತನ್ನಿ

ಕು.ಸ.ಮಧುಸೂದನರಂಗೇನಹಳ್ಳಿ
ಒಮ್ಮೆಯಾದರು ಅಲ್ಲಿಗೆ ನಮ್ಮ ಎಲ್ಲ ಧರ್ಮಗಳ ಮತಾಂದರನ್ನು ಕರೆದುಕೊಂಡು ಹೋಗಬೇಕು ಅನಿಸುತ್ತಿದೆ.

ಅದು ಅಷ್ಟೇನೂ ಪ್ರಸಿದ್ದವಲ್ಲದ, ರಾಜ್ಯದ ಭೂಪಟದಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳದ ಪುಟ್ಟ ಊರು! ಹೆಸರು ಹಣೆಗೆರೆ ಕಟ್ಟೆ-ನೀವು ಶಿವಮೊಗ್ಗದಿಂದ ಆಯನೂರಿಗೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗಿ ಕಾಡಿನೊಳಗೆ ಇಪ್ಪತ್ತು ಕಿಲೊಮೀಟರ್ ಪ್ರಯಾಣ ಮಾಡಿದರೆ ಆ ಊರುಸಿಗುತ್ತದೆ. ಊರಪ್ರವೇಶದಿಂದಲೇ ರಸ್ತೆಯ ಬಲ ಬದಿಯಲ್ಲಿ ಹೂವು, ಹಣ್ಣು,ಕಾಯಿ,

ನವೆಂ 3, 2017

ಗೂಗಲ್ ಮ್ಯಾಪಿಗೆ ಕನ್ನಡದ ಹೆಸರುಗಳನ್ನು ಸೇರಿಸುವ ಬಗೆ || How to add kannada name...









ಪುರುಸೊತ್ತಾದಾಗಲೆಲ್ಲ ಗೂಗಲ್ ಮ್ಯಾಪಿನಲ್ಲಿ ಕನ್ನಡದ ಹೆಸರುಗಳನ್ನು ಸೇರಿಸುತ್ತಾ ಹೋಗಿ. 

ಕನ್ನಡದ ಹೆಸರುಗಳನ್ನು ಮೊಬೈಲಿನಲ್ಲಿ ಸೇರಿಸಲು ಸುಲಭ ವಿಧಾನವನ್ನರಿಯಲು ಈ ವೀಡಿಯೋ ನೋಡಿ 

ಅಕ್ಟೋ 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು

ಅಕ್ಟೋ 13, 2017

ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.


ಡಾ. ಅಶೋಕ್. ಕೆ. ಆರ್

ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.

ಅಕ್ಟೋ 12, 2017

ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.

ಅಕ್ಟೋ 11, 2017

ಈ ಸರ್ಕಾರಿ ಹತ್ಯೆಗಳಿಗೆ ಕೊನೆ ಎಂದು?

ಬೆಂಗಳೂರಿನ ಗುಂಡಿಗಳು.
ಚಿತ್ರ: ರವಿಸೂರ್ಯ ಈಶ್ವರ 
ಡಾ. ಅಶೋಕ್. ಕೆ. ಆರ್.
ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತಷ್ಟು ಬಲಿ ಪಡೆದುಕೊಂಡಿವೆ. ಹುಷಾರು ತಪ್ಪಿದ್ದ ಮೊಮ್ಮಗಳನ್ನು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸಾಗುತ್ತಿದ್ದ ದಂಪತಿಗಳು ರಸ್ತೆ ಗುಂಡಿಯ ಸಮೀಪ ವಾಹನದ ವೇಗವನ್ನು ಕಡಿಮೆ ಮಾಡಿದ್ದಷ್ಟೇ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಅವರ ವಾಹನದ ಮೇಲರಿದು ಇಬ್ಬರೂ ದಂಪತಿಗಳನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟವಶಾತ್ ಮೊಮ್ಮಗಳು ಬದುಕುಳಿದಿದ್ದಾಳೆ. ಈ ಸಾವಿಗೆ ಹೊಣೆ ಯಾರು? ಪೋಲೀಸರ ಡೈರಿಗಳಲ್ಲಿ, ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳಲ್ಲಿ ಬಸ್ಸು ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಶರಾ ಬರೆಯಲಾಗುತ್ತದೆ. ಬಸ್ಸು ಚಾಲಕನ ಕೆಲಸ ಹೋಗುತ್ತದೆ, ವಿಚಾರಣೆಯ ನಂತರ ಆತನಿಗೊಂದಷ್ಟು ಶಿಕ್ಷೆಯೂ ಆಗಬಹುದು. ಅಥವಾ ಸ್ಕೂಟರಿನವರ ಅಜಾಗರೂಕ ಚಾಲನೆಯಿಂದ ಇದಾಯಿತೇ ಹೊರತು ಬಸ್ಸು ಚಾಲಕನ ತಪ್ಪೇನಿರಲಿಲ್ಲ ಎಂದು ಆತನಿಗೆ ಬಿಡುಗಡೆಯೂ ಸಿಕ್ಕಬಹುದು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬ ಚಾಲಕನ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎಂಬ ಅಭಿಪ್ರಾಯದೊಂದಿಗೆ ವಿಚಾರಣೆ ಮುಗಿಯುತ್ತದೆ. ಆದರದು ಪೂರ್ಣ ಸತ್ಯವೇ?

ಅಕ್ಟೋ 6, 2017

ಕವಿತೆಗಳ ಕೊಂದವರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಕತ್ತಲಲೆ ಸ್ಪರ್ಶಿಸಿದೆ

ಸೆಪ್ಟೆಂ 28, 2017

ತುತ್ತು...

ಈ ಕವಿತೆಯನ್ನು ಈ ಮುಂಚೆ ರಘು ಮಾಗಡಿಯವರು ಹಿಂಗ್ಯಾಕೆಯ ಮಿಂಚೆಗೆ ಕಳುಹಿಸಿದ್ದರು. ಅವರು ಈ ಮುಂಚೆಯೂ ಕೆಲವು ಕವಿತೆಗಳನ್ನು ಕಳುಹಿಸಿದ್ದರು, ಅದನ್ನು ಹಿಂಗ್ಯಾಕೆಯಲ್ಲಿ ಪ್ರಕಟಿಸಲಾಗಿತ್ತೂ ಕೂಡ. ಇತ್ತೀಚೆಗೆ ಗೀತಾ ಹೆಗ್ಡೆಯವರು ಫೇಸ್ಬುಕ್ಕಿನಲ್ಲಿ ಈ 'ತುತ್ತು' ಕವಿತೆಯು ತಮ್ಮದೆಂದು ಹಾಗೂ ರಘು ಮಾಗಡಿಯವರು ತಮ್ಮ ಕವಿತೆಯನ್ನು ಕದ್ದು ಬಳಸಿಕೊಂಡಿದ್ದರೆಂದು ಆರೋಪಿಸಿದ್ದರು. ಗೀತಾರವರ ಆರೋಪದ ಬಗ್ಗೆ ರಘು ಮಾಗಡಿಯವರಲ್ಲಿ ವಿಚಾರಿಸಲಾಗಿ 'ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ, ಆದರೂ ಅವರು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ' ಎಂದು ಹೇಳಿದರೇ ಹೊರತು ಕವಿತೆ ಅವರದ್ದಾ ಅಥವಾ ತಾವೇ ರಚಿಸಿದ್ದಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೇ ಇಲ್ಲ. ಕದ್ದ ಕವಿತೆಯೊಂದನ್ನು ಪ್ರಕಟಿಸಿದ್ದಕ್ಕೆ ಹಿಂಗ್ಯಾಕೆ ವಿಷಾದಿಸುತ್ತದೆ. ಈ ಕವಿತೆಯ ಲೇಖಕಿಯ ಕ್ಷಮೆ ಕೇಳುತ್ತದೆ. ಹಿಂಗ್ಯಾಕೆಯಲ್ಲಿ ಪ್ರಕಟವಾಗಿರುವ ರಘು ಮಾಗಡಿಯವರ ಇನ್ನಿತರೆ ಕವಿತೆಗಳನ್ನು ತೆಗೆದುಹಾಕಲಾಗುತ್ತದೆ. ಇದೊಂದು ಕವಿತೆಯನ್ನು ಗೀತಾ ಹೆಗ್ಡೆಯವರ ಕ್ಷಮೆ ಕೇಳುವ ಸಲುವಾಗಿ ಉಳಿಸಿಕೊಳ್ಳಲಾಗಿದೆ. ಅಂತರ್ಜಾಲದ ಯುಗದಲ್ಲಿ ಕದಿಯುವಿಕೆ ಸುಲಭದ ಕೆಲಸ. ಆದರೆ ಮನಸ್ಸಾಕ್ಷಿ ಇರುವ ಬರಹಗಾರರ್ಯಾರು ಆ ಕೆಲಸವನ್ನು ಮಾಡಬಾರದು. ಕದ್ದ ಲೇಖಕರದು ಎಷ್ಟು ತಪ್ಪೋ ಕದ್ದ ಕವಿತೆಯನ್ನು ಪ್ರಕಟಿಸಿದ್ದು ಅಷ್ಟೇ ದೊಡ್ಡ ತಪ್ಪು. ಇನ್ನೊಮ್ಮೆ ಇಂಥಹ ತಪ್ಪುಗಳಾಗದಂತೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಲಾಗುವುದು - ಹಿಂಗ್ಯಾಕೆ. 
ಗೀತಾ ಹೆಗ್ಡೆ.
ಬೀದಿ ಬದಿ ಆಯ್ದ ಹೊಲಿದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.

ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವರು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.