ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಿಹಾರದಲ್ಲಿನ ಮಹಾಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಬಾಜಪ ನೇತೃತ್ವದ ಎನ್.ಡಿ.ಎ.ಜೊತೆ ಸೇರಿ ಸರಕಾರ ರಚಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದರ ರಚನೆಯ ಕನಸು ಮೇಲ್ನೋಟಕ್ಕಂತು ಕರಗಿಹೋಗಿದೆ. ಇಂತಹ ಗಾಡಾಂಧಕಾರದಲ್ಲಿ ಮುಳುಗಿರುವ ಕಾಂಗ್ರೇಸ್ಸೇತರ ವಿರೋಧಪಕ್ಷಗಳ ಸ್ಥಿತಿ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕನರ್ಾಟಕದಲ್ಲಿನ ಶ್ರೀ ದೇವೇಗೌಡರ ನೇತೃತ್ವದ 'ಜಾತ್ಯಾತೀತಜನತಾದಳ' ಒಂದೇ ಕನಿಷ್ಠ ನಮ್ಮ ರಾಜ್ಯದ ಮಟ್ಟಗಾದರೂ ಬಾಜಪವನ್ನು ದೃಢವಾಗಿ ನಿಂತು ಎದುರಿಸಬಲ್ಲಂತಹ ಶಕ್ತಿಯನ್ನು ಹೊಂದಿರುವಂತೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನಾವು ಉಳಿದ ವಿರೋಧಪಕ್ಷಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿನೋಡಬೇಕಾಗಿದೆ: