ಅಂತರ್ಜಾಲದ ಸ್ಪೀಡು ಕಡಿಮೆಯಿದ್ದಾಗ ಯುಟ್ಯೂಬಿನಲ್ಲಿರುವ ವೀಡಿಯೋಗಳನ್ನು ಸರಾಗವಾಗಿ ನೋಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ಯುಟ್ಯೂಬಿನಿಂದ ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ನಂತರ ನೋಡುವುದು ಅನುಕೂಲಕರ. ಈ ಉದ್ದೇಶಕ್ಕಾಗಿ ಯುಟ್ಯೂಬ್ ಡೌನ್ ಲೋಡರ್, ರಿಯಲ್ ಡೌನ್ ಲೋಡರುಗಳನ್ನು ಕಂಪ್ಯೂಟರಿಗೆ ಇನ್ ಸ್ಟಾಲ್ ಮಾಡಿಕೊಂಡು ಉಪಯೋಗಿಸಬಹುದು. ಇನ್ ಸ್ಟಾಲ್ ಮಾಡಿಕೊಳ್ಳುವ ಕಷ್ಟ ಬೇಡವೆನ್ನುವವರಿಗೆ ಆನ್ ಲೈನಿನಲ್ಲೇ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸುಲಭ ವಿಧಾನವೊಂದನ್ನು ಇಲ್ಲಿ ನೀಡಲಾಗಿದೆ.
ಜನ 28, 2015
ಜನ 24, 2015
ಜನ 22, 2015
ಅಭಿವ್ಯಕ್ತಿ ಸ್ವಾತಂತ್ರ್ಯವೂ ಉಡಾಫೆಯ ಸ್ವೇಚ್ಛಾಚಾರವೂ
![]() |
ದಿನೇಶ್ ಅಮೀನ್ |
Dr Ashok K R
ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆ. ಉಗ್ರರ ಈ ದುಷ್ಕೃತ್ಯ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಬಗ್ಗೆ ಮತ್ತಷ್ಟು
ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಪೆರುಮಾಳ್ ಮುರುಗನ್ ಎಂಬ
ಕಾದಂಬರಿಕಾರ – ಲೇಖಕ ಹಿಂದೂ ಮೂಲಭೂತವಾದಿಗಳ ನಿರಂತರ ಕಿರುಕುಳದಿಂದ ನೊಂದು ನನ್ನೊಳಗಿನ ಲೇಖಕ
ಸತ್ತಿದ್ದಾನೆ ಎಂದು ಘೋಷಿಸಿದ್ದಾರೆ. ನಿಲುಮೆಯೆಂಬ ಫೇಸ್ ಬುಕ್ಕಿನ ಗುಂಪಿನಲ್ಲಿ ಅನೇಕ
ನೆಟ್ಟಿಗರು ಸತತವಾಗಿ ಅವಹೇಳನಕಾರಿ ಭಾಷೆಯನ್ನು ಬಳಸಿ ಟೀಕಿಸಿದ್ದರಿಂದ ಬೇಸರಗೊಂಡು ದಿನೇಶ್
ಅಮೀನ್ ಮಟ್ಟು ಐಟಿ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಹಿಂದೂವಾದದಿಂದ ಪ್ರಭಾವಿತರಾದವರು ಈ
ಅಶ್ಲೀಲ ಭಾಷೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ತಾವು ಕೊಡಲು ಪ್ರಯತ್ನಿಸುತ್ತಿರುವ
ದಿನಮಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉಡಾಫೆಯ ಸ್ವೇಚ್ಛಾಚಾರದ ನಡುವಿನ ತೆಳುವಾದ
ಗೆರೆಯನ್ನು ಗುರುತಿಸುವ ಕೆಲಸ ಕಷ್ಟಕರವಾಗಿ ಪರಿಣಮಿಸುತ್ತಿದೆ.
ಜನ 20, 2015
ಗೆದ್ದ ಚಿತ್ರವೊಂದು 'ಯಶಸ್ವಿ'ಯಾಗದ ಕಥೆ!
2014ರ ಡಿಸೆಂಬರ್ ತಿಂಗಳಂತ್ಯದಲ್ಲಿ ಬಿಡುಗಡೆಗೊಂಡ ಸಂತೋಷ್ ಆನಂದರಾಮ್ ನಿರ್ದೇಶನದ 'ಮಿ ಅಂಡ್ ಮಿಸೆಸ್ ರಾಮಚಾರಿ' ಚಿತ್ರ ನಾಗಲೋಟದಿಂದ ಗೆಲುವು ಸಾಧಿಸಿದೆ. ಚಿತ್ರದ ನಾಯಕ ಯಶ್ ರನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಈ ರಾಮಾಚಾರಿ ಚಿತ್ರ. ಕಳೆದ ವರ್ಷ ಗೆದ್ದ ಅನೇಕ ರೀಮೇಕ್ ಚಿತ್ರಗಳ ನಡುವೆ ಸಂತೋಷ್ ಆನಂದರಾಮ್ ರ ಈ ರಾಮಾಚಾರಿ ಸ್ವಮೇಕ್ ಎಂಬುದು ಕನ್ನಡ ಸಿನಿಪ್ರಿಯರು ಒಂದಷ್ಟು ಸಮಾಧಾನ ಪಡಬಹುದಾದ ಅಂಶ! ಗೆಲುವು ಕಾಣುವ ಸ್ವಮೇಕುಗಳಲ್ಲಿ ಎರಡು ವಿಧ, ಮೊದಲ ರೀತಿಯ ಗೆಲುವು ಚಿತ್ರರಂಗಕ್ಕೆ ಬಹಳಷ್ಟು ಹೊಸತನ್ನು ನೀಡಿ ಆ ಹೊಸ ದಾರಿಯಲ್ಲಿ ಇಡೀ ಚಿತ್ರರಂಗ ಮತ್ತೊಂದು ಹೊಸತನದ ಚಿತ್ರ ಬರುವವರೆಗೆ ಸಾಗುತ್ತದೆ. ಎರಡನೆಯದು ಹಳೆಯ ಹಾದಿಯಲ್ಲೇ ತೆಗೆದ ಚಿತ್ರ ಬೋರು ಹೊಡೆಸದ ತನ್ನ ನಿರೂಪಣೆಯಿಂದ ಗೆಲುವು ಸಾಧಿಸುವುದು. ಚಿತ್ರದ ಮಟ್ಟಿಗೆ, ಅದರಲ್ಲಿ ಭಾಗಿಯಾದ ಕಲಾವಿದರು - ತಂತ್ರಜ್ಞರ ಮಟ್ಟಿಗೆ ಅದು ಗೆಲುವಾದರೂ ಒಟ್ಟಾರೆಯಾಗಿ ಚಿತ್ರರಂಗದ ಮುನ್ನಡೆಗೆ ವಿಶೇಷ ಸಹಾಯವಾಗುವುದಿಲ್ಲ. ಅನುಮಾನವಿಲ್ಲದೇ ಹೇಳಬಹುದು ಈ ರಾಮಾಚಾರಿ ಎರಡನೇ ವಿಭಾಗಕ್ಕೆ ಸೇರಿರುವ ಚಿತ್ರ.
ಬಣ್ಣಗಳ ನಡುವೆ ಕಳೆದುಹೋಗಿರುವ "ದೇವರ" ನಾಡಲ್ಲಿ!
1998ರಲ್ಲಿ ನಡೆದ ಒಂದು ನೈಜ ಘಟನೆಯಿಂದ ಪ್ರೇರೇಪಿತರಾಗಿ ಕಥೆ ಹೆಣೆದಿರುವುದಾಗಿ ಹೇಳಿಕೆ ಕೊಟ್ಟಿದ್ದ ಬಿ.ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಿತ್ರದ ಟ್ರೇಲರ್ ಯೂಟ್ಯೂಬಿನಲ್ಲಿ ಕಾಣಿಸಿಕೊಂಡು ಸಿನಿಮಾಸಕ್ತರ ಗಮನ ಸೆಳೆಯುತ್ತಿದೆ. ಕೇಸರಿ ಹಿಂದೂ ಧರ್ಮಕ್ಕೆ, ಹಸಿರು - ಕಪ್ಪು ಮುಸ್ಲಿಂ ಧರ್ಮಕ್ಕೆ, ಬಿಳಿ ಕ್ರಿಶ್ಚಿಯನ್ ಧರ್ಮಕ್ಕೆ ಪರ್ಯಾಯವಾಗಿಬಿಟ್ಟಿರುವ ದಿನಗಳಲ್ಲಿ ಬಣ್ಣಗಳ ಗೋಜಲುಗಳ ಹಿಂದೆ ದೇವರು ಮರೆಯಾಗಿಬಿಟ್ಟಿದ್ದಾರೆ! ದೇವರ ನಾಡಲ್ಲಿ ಚಿತ್ರದ ಟ್ರೇಲರ್ ನಲ್ಲಿ ಮೂರು ಧರ್ಮದ ಬಣ್ಣಗಳ ನಡುವೆ ಕಮ್ಯುನಿಷ್ಟರ ಕೆಂಪು ಬಣ್ಣವೂ ಅಲ್ಲಲ್ಲಿ ಇಣುಕಿದೆ! ಒಟ್ಟಿನಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವಂತಹ ಎಲ್ಲಾ ಅಂಶಗಳೂ ಟ್ರೇಲರ್ರಿನಲ್ಲಿವೆ. ಪ್ರಕಾಶ್ ರೈ, ಅಚ್ಯುತ್ ಕುಮಾರ್ ಮತ್ತು ಸಿಹಿಕಹಿ ಚಂದ್ರುರವರ ಅಭಿನಯದ ಬಗ್ಗೆ ಮತ್ತೆ ಮತ್ತೆ ಹೇಳುವ ಅವಶ್ಯಕತೆಯಿಲ್ಲ! "ಮನುಷ್ಯ ಮೂಲತಃ ಕೇಡಿಗನಿರುತ್ತಾನೆ. ಒಳ್ಳೆಯವನ ಥರ ಕಾಣೋನೇ ಬಾಂಬ್ ಇಟ್ಟಿರ್ತಾನೆ" ಎಂದು ಟ್ರೇಲರ್ರಿನ ಕೊನೆಯಲ್ಲಿ ಪ್ರಕಾಶ್ ರೈ ಹೇಳುವ ಮಾತು ಚಿತ್ರಕ್ಕೆ ಕಾಯುವಂತೆ ಮಾಡುತ್ತವೆ!
ಜನ 14, 2015
ನನ್ನೊಳಗಿನ ಲೇಖಕ ಸತ್ತಿದ್ದಾನೆ - ಪೆರುಮಾಳ್ ಮುರುಗನ್
![]() |
ಪೆರುಮಾಳ್ ಮುರುಗನ್ |
ಚಾರ್ಲಿ ಹೆಬ್ಡೋ ಮೇಲೆ ಉಗ್ರರು ಪೈಶಾಚಿಕ ದಾಳಿ ನಡೆಸಿ ವ್ಯಂಗ್ಯಚಿತ್ರಕಾರರನ್ನು ಹತ್ಯೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲನೇಕರು ಹೇಗೆ ಹಿಂದೂ ಧರ್ಮ ಶಾಂತಿಯ ಪರವಾಗಿದೆ ಮತ್ತು ಆ ಕಾರಣಕ್ಕಾಗಿ ಹಿಂದೂ ಧರ್ಮದ ಹುಳುಕುಗಳ ಬಗ್ಗೆಯಷ್ಟೇ ಲೇಖಕರು ಸಿನಿಮಾ ಮಂದಿ ಅವಹೇಳನ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಎಲ್ಲೋ ಒಂದೆಡೆ ಅವರುಗಳ ಮನಸ್ಸಿನಲ್ಲಿ ಹಿಂದೂ ಧರ್ಮದ ರೂಢಿ - ಆಚರಣೆಗಳ ವಿರುದ್ಧ ಮಾತನಾಡುವವರಿಗೆ ಚಾರ್ಲಿ ಹೆಬ್ಡೋಗಾದ ಗತಿಯೇ ಆಗಬೇಕು ಎಂದಿತ್ತಾ? ಅಂತಹ ಹಿಂದೂ ಮೂಲಭೂತವಾದಿಗಳಿಗೆಲ್ಲ ಸಂತಸವಾಗುವಂತಹ ಸುದ್ದಿ ತಮಿಳುನಾಡಿನ ತಿರುಚಿನಗೊಡೆಯಿಂದ ಬಂದಿದೆ! ಈ ಊರಿನ ಪೆರುಮಾಳ್ ಮುರುಗನ್ ಎಂಬ ಮನುಷ್ಯನ ಒಳಗಿದ್ದ ಲೇಖಕ, ಕಾದಂಬರಿಕಾರನನ್ನು ಹತ್ಯೆ ಮಾಡಲಾಗಿದೆ. ಕಾರಣ ಆತ ಬರೆದ ಕಾದಂಬರಿಯೊಂದು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿತ್ತಂತೆ. ಚಾರ್ಲಿ ಹೆಬ್ಡೋದ ವಿರುದ್ಧ ನಡೆದ ಕೃತ್ಯಕ್ಕೆ ಕಣ್ಣೀರಾಕಿದ ಅನೇಕರಿಗೆ ಇದು ಸಮ್ಮತ ಕೃತ್ಯದಂತೆ ಕಾಣಿಸುತ್ತದೆ!
ಜನ 13, 2015
ದುಸ್ಥಿತಿಯಲ್ಲೂ ಗಮನ ಸೆಳೆಯುವ ಮಂಜರಾಬಾದ್ ಕೋಟೆ
![]() |
ಮಂಜರಾಬಾದ್ ಕೋಟೆ, ಸಕಲೇಶಪುರ |
ತನ್ನ
ವಿಶಿಷ್ಟ ರೀತಿಯ ವಾಸ್ತುವಿನಿಂದ, ಹಿಂದಿನ ಕಾಲದವರ ಬುದ್ಧಿವಂತಿಕೆಯ ಸಾಕ್ಷಿಯಾಗಿ ಇನ್ನೂರು
ವರುಷಗಳಿಂದ ಅಚಲವಾಗಿ ನಿಂತಿರುವುದು ಮಂಜರಾಬಾದ್ ಕೋಟೆ. ಈಗಿನ ಜನರ ಮತ್ತು ಆಡಳಿತಗಾರರ ದುರ್
ದೃಷ್ಟಿಗೆ ಬಿದ್ದು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತ ಸಾಗಿದೆ. ಐತಿಹಾಸಿಕ ತಾಣಗಳನ್ನು
ಅತ್ಯುತ್ತಮ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸುವ ಕಲೆ ನಮಗಿನ್ನೂ ಸಿದ್ಧಿಸಿಲ್ಲವೇನೋ. ಅಂದಹಾಗೆ
ಈ ಮಂಜರಾಬಾದ್ ಕೋಟೆ ಇರುವುದು ಸಕಲೇಶಪುರ ತಾಲ್ಲೂಕಿನಲ್ಲಿ.
ಜನ 9, 2015
ಕಣಗಾಲಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ!
ಚಲನಚಿತ್ರ ನಿರ್ದೇಶಕನಾಗುವುದೆಂದರೆ ಹತ್ತು ಸರ್ಕಸ್ಸು ಕಂಪನಿಗಳನ್ನು ನಡೆಸಿದಂತೆ ಎಂದು ಬರೆದಿದ್ದು ರವಿ ಬೆಳಗೆರೆ! ಒಂದು ಚಿತ್ರಕ್ಕೆ ನಾಯಕ ನಾಯಕಿ ಸಂಗೀತ ತಾಂತ್ರಿಕ ತಂಡದ್ದು ಒಂದು ತೂಕವಾದರೆ ನಿರ್ದೇಶಕ ಸ್ಥಾನದ್ದೇ ಒಂದು ತೂಕ. Director is Captain of the Ship ಎಂಬ ಮಾತು ಸುಖಾಸುಮ್ಮನೆ ಹುಟ್ಟಿದ್ದಲ್ಲ. ಪ್ರಪಂಚದ ಅತಿ ಉತ್ತಮ ಚಿತ್ರಗಳ ಹೆಸರು ಕೇಳಿದಾಗಲೆಲ್ಲ ನೆನಪಾಗುವುದು ಅದರ ನಿರ್ದೇಶಕರು. ಅಕಿರಾ ಕುರಸೋವಾ, ಮಾಜಿದ್ ಮಾಜಿದಿ ನೆನಪಲ್ಲಿರುವಷ್ಟು ಅವರ ಚಿತ್ರಗಳ ಕಲಾವಿದರು ನೆನಪಿನಲ್ಲಿರುವುದಿಲ್ಲ. ಕಥೆಯಾಧಾರಿತ ಚಿತ್ರಗಳಲ್ಲಿ ನಿರ್ದೇಶಕರು ಮಿಂಚಿದರೆ ಭಾರತದ ಬಹುತೇಕ ಚಲನಚಿತ್ರಗಳಲ್ಲಿ ಮಿಂಚುವುದು ಕಲಾವಿದರು. ಇದಕ್ಕೆ ಬಹುಮುಖ್ಯ ಕಾರಣ ಭಾರತದ ಮನೋರಂಜನಾತ್ಮಕ ಚಿತ್ರಗಳು ಕಲಾವಿದನ ಅದರಲ್ಲೂ ನಾಯಕನಟನ ಸುತ್ತ ಸುತ್ತುವುದು. ಕಥೆಗಾಗಿ ತಮ್ಮ ಇಮೇಜನ್ನು ಮೀರುವ ನಟರ ಸಂಖೈ ಕಡಿಮೆಯೆಂದೇ ಹೇಳಬೇಕು. ಇಮೇಜಿರುವ ಕಲಾವಿದರ ಆರಾಧಕರ ಸಂಖೈಯೂ ಹೆಚ್ಚಿರುವುದು ಇದೇ ಕಾರಣಕ್ಕೆ.
ಜನ 8, 2015
ಚಾರ್ಲಿ ಹೆಬ್ಡೋ ಮತ್ತು ಇಸ್ಲಾಮಿನೊಳಗಿನ ಸೈತಾನರು
ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆ.
ಪೀಸ್ ಫುಲ್ಲಾಗಿಲ್ಲದ 'ಮಾಸ್ಟರ್ ಪೀಸ್' ಫಸ್ಟ್ ಲುಕ್!
![]() |
ಮಂಜು ಮಾಂಡವ್ಯ |
ಕಳೆದ ಒಂದೆರಡು ವರ್ಷದಿಂದ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ಸ್ಥಾನದ ಪಟ್ಟ ಯಶ್ ಗೇ ಸಿಗಬೇಕು ಎಂದು ಯಾವುದೇ ಅನುಮಾನವಿಲ್ಲದೇ ಹೇಳ್ಬೋದು.ವೆರೈಟಿ ಚಿತ್ರಗಳು, ರಿಮೇಕೂ ಯಶಸ್ಸಾಗಿ ಸ್ವಮೇಕೂ ಯಶಸ್ಸಾಗಿ ಯಶ್ ನಂಬರ್ ಒನ್ ಸ್ಥಾನಕ್ಕೆ ಬಹುಶಃ ಈಗಾಗಲೇ ತಲುಪಿಬಿಟ್ಟಿದ್ದಾರೆ, ಇಲ್ಲಾ ಒಂದೆರಡು ಹೆಜ್ಜೆಯಷ್ಟೇ ಹಿಂದಿದ್ದಾರೆ. ಮೊಗ್ಗಿನ ಮನಸ್ಸು ಗೆಲುವು ಕಂಡಿತ್ತಾದರೂ ಅದರಲ್ಲಿ ರಾಧಿಕಾ ಪಂಡಿತ್ ಪಾತ್ರ ಹೆಚ್ಚಿತ್ತು. ಮೊದಲ ಸಲ ತಾಜಾತನದಿಂದ ಹೆಸರು ಮಾಡಿತಾದರೂ ಯಶ್ ಗೆಲುವು ಕಂಡ ಚಿತ್ರ 'ಕಿರಾತಕ'. ರಿಮೇಕ್ ಚಿತ್ರ ಗೆದ್ದ ತಕ್ಷಣ ರಿಮೇಕ್ ಹಿಂದೆಯೇ ಬೀಳುವ ಚಾಳಿ ಬೆಳೆಸಿಕೊಳ್ಳದ ಯಶ್ ನಂತರ ಸ್ವಮೇಕ್ ಚಿತ್ರಗಳಾದ ಡ್ರಾಮಾ, ಗೂಗ್ಲಿಯಲ್ಲಿ ಮಿಂಚಿದರು. ಮತ್ತೆ ದೊಡ್ಡ ಮಟ್ಟದ ಯಶಸ್ಸು ಕಂಡದ್ದು ರಾಜಾಹುಲಿ ಎಂಬ ರೀಮೇಕ್ ಚಿತ್ರದಲ್ಲಿ! ಲವ್ ಸ್ಟಾರ್ ಇಮೇಜಿನಿಂದ ಮಾಸ್ ಸ್ಟಾರ್ ಇಮೇಜಿಗೆ ಬದಲಿಸಿದ ಖ್ಯಾತಿಯೂ ರಾಜಾಹುಲಿಯದ್ದೇ!