ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.

ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು
ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?