ಆಗ 25, 2019
ಆಗ 24, 2019
ನೈತಿಕತೆಯ ಬಗೆಗೆ ಕೆಲವು ಮೂರ್ಖ ಪ್ರಶ್ನೆಗಳು!
ಅಂತೂ 'ಆಪರೇಷನ್ ಕಮಲ' ಅನ್ನುವ ರಾಕ್ಷಸೀಆಯುಧವನ್ನು ಬಳಸಿ,ಮೈತ್ರಿ ಸರಕಾರವನ್ನು ಉರುಳಿಸಿ ತನ್ನದೇ ಸರಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಆಂತರಿಕ ಭಿನ್ನಮತೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರವಿಲ್ಲವೆನ್ನುತ್ತಲೇ ನಾಟಕವಾಡುತ್ತ ಬಂದ ಬಿಜೆಪಿಯ ನಾಯಕರುಗಳ ಮಾತುಗಳನ್ನು ಜನ ನಂಬದೇ ಹೋದರೂ, ಈ ಕ್ಷಣಕ್ಕೂ ಬಿಜೆಪಿ ತಾನು ಪರಮಪವಿತ್ರವೆಂಬ ಮುಖವಾಡದಲ್ಲಿ ಸರಕಾರ ರಚಿಸಿ. ಗೆಲುವಿನ ವಿಕೃತ ನಗು ಬೀರುತ್ತಿದೆ
ಆದರೆ ಪ್ರಜಾಸತ್ತೆಯಲ್ಲಿನ ಈ ಕಪಟನಾಟಕ ಇಲ್ಲಿಗೇ ಮುಗಿಯುವುದಿಲ್ಲ. ಅಕಸ್ಮಾತ್ ಅತೃಪ್ತ ಶಾಸಕರುಗಳ(ಆತ್ಮಗಳ) ಅನರ್ಹತೆ ಬಗ್ಗೆ ನ್ಯಾಯಾಲಯದ ತೀರ್ಪೇನೆ ಬರಲಿ, ಇನ್ನು ಆರುತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಅವರುಗಳಿಗೆ ತನ್ನ 'ಬಿ'ಫಾರಂ ಕೊಟ್ಟು ಮತಬಿಕ್ಷೆಗೆ ಜನರ ಮುಂದೆ ಬರಲೇಬೇಕಾಗುತ್ತದೆ. ಆಗ ಜನ ಕೆಳಗಿನ ಪ್ರಶ್ನೆಗಳನ್ನು ಅವರಿಗೆ ಕೇಳಬೇಕಾಗುತ್ತದೆ:
ಮೊದಲಿಗೆ, ಆಡಳಿತ ಪಕ್ಷಗಳ ಶಾಸಕರುಗಳ ರಾಜಿನಾಮೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂಇಲ್ಲ. ಯಾಕೆಂದರೆ ಕಳೆದ ವರ್ಷ ವಿದಾನಸಭೆಯ ಚುನಾವಣಾ ಪಲಿತಾಂಶಗಳು ಬಂದಾಗ ತನಗೆ ಬಹುಮತವಿಲ್ಲವೆಂಬ ಸಂಗತಿ ಗೊತ್ತಿದ್ದರೂ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರ ಹಿನ್ನೆಲೆಯಲ್ಲಿ ಇದ್ದುದು, ಅನ್ಯಪಕ್ಷಗಳಿಂದ ಹಲವು ಶಾಸಕರುಗಳ ರಾಜಿನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಂಡು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಗುಪ್ತ ಕಾರ್ಯತಂತ್ರವೇ ಅಲ್ಲವೇ? ಅದೊಂದನ್ನು ಹೊರತು ಪಡಿಸಿದಂತೆ ವಿಶ್ವಾಸ ಮತ ಸಾಬೀತು ಪಡಿಸಲು ನಿಮಗೆ ಅನ್ಯ ಮಾರ್ಗವೇನಾದರು ಇತ್ತೆ? ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಒಂದು ಆಡಿಯೊ ಕ್ಲಿಪಿಂಗಿನಲ್ಲಿ ತಾವು ಈ ವ್ಯವಹಾರದ ಬಗ್ಗೆ ಮಾತಾಡಿದ್ದೂ ಇದೆ.
ಆಗ 18, 2019
ಒಂದು ಬೊಗಸೆ ಪ್ರೀತಿ - 27
ಡಾ. ಅಶೋಕ್. ಕೆ. ಆರ್.
ಬೆಳಿಗ್ಗೆ ಮೂರರ ಸಮಯಕ್ಕೆ ಒಂದು ಆಕ್ಸಿಡೆಂಟ್ ಕೇಸ್ ಬಂದಿತ್ತು. ಇಷ್ಟೊತ್ತಿಗೆಲ್ಲ ಈ ಆರ್.ಬಿ.ಐ ಕ್ಯಾಂಪಸ್ಸಿನಲ್ಲಿ ಓಡಾಡುವವರ ಸಂಖೈ ಕಡಿಮೆ, ಕಡಿಮೆಯೇನು ಇಲ್ಲವೇ ಇಲ್ಲ ಅಂತ ಹೇಳಬಹುದು. ನಾನಂತೂ ಇದುವರೆಗೂ ಇಲ್ಲಿ ಆಕ್ಸಿಡೆಂಟ್ ಕೇಸನ್ನು ನೋಡಿರಲಿಲ್ಲ, ಉಪಚರಿಸಿರಲಿಲ್ಲ. ಯಾರೋ ಟ್ರಿಪ್ಪಿಗೆ ಹೋಗಿ ವಾಪಸ್ಸಾಗ್ತಿದ್ರಂತೆ ನಿದ್ರೆಯ ಮತ್ತಲ್ಲಿದ್ರೋ ಏನೋ ಗಾಡಿ ಹಿಡಿತ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಗುದ್ದಿಬಿಟ್ಟಿದ್ದಾರೆ. ಪುಣ್ಯಕ್ಕೆ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಹಿಂದೆ ಕುಳಿತಿದ್ದ ತಾಯಿ ಮಗುವಿಗೆ ಚೂರೂ ಪೆಟ್ಟಾಗಿರಲಿಲ್ಲ. ಗಾಡಿ ಓಡಿಸುತ್ತಿದ್ದವರಿಗೆ ಮಾತ್ರ ಅಲ್ಲಲ್ಲಿ ಚರ್ಮದೊಳಗೆ ರಕ್ತ ಹೆಪ್ಪುಗಟ್ಟುವಂತೆ ಗಾಯಗಳಾಗಿವೆ. ಸಾಮಾನ್ಯ ಇಂತಹ ಸಮಯದಲ್ಲಿ ತಲೆ ಸ್ಟೀರಿಂಗ್ ವೀಲಿಗೆ ತಗುಲಿ ಪೆಟ್ಟಾಗಿರ್ತದೆ, ಗಾಡಿ ಓಡಿಸುತ್ತಿದ್ದವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದಾಗಿ ಅಂತದ್ದೇನೂ ಆಗಿರಲಿಲ್ಲ. ಒಂದಷ್ಟು ನೋವಿನ ಮಾತ್ರೆ ಕೊಟ್ಟು ಕಳುಹಿಸಿ ರೂಮಿಗೆ ವಾಪಸ್ಸಾದೆ. ಇವನಿಗೊಂದು ಗುಡ್ ಮಾರ್ನಿಂಗ್ ಹೇಳೋಣ ಅಂತನ್ನಿಸಿತು. 'ಸುಸ್ತು ಕಡಿಮೆಯಾಯಿತಾ? ಗುಡ್ ಮಾರ್ನಿಂಗ್' ಅಂತೊಂದು ಮೆಸೇಜು ಕಳುಹಿಸಿದೆ. ಮೆಸೇಜು ತಲುಪಿತ್ತೋ ಇಲ್ಲವೋ "ಗುಡ್ ಮಾರ್ನಿಂಗ್. ಸುಸ್ತ್ಯಾಕೆ?” ಅಂತ ಉತ್ತರ ರೂಪದ ಪ್ರಶ್ನೆ ಬಂತು.
'ಓಯ್! ಇಷ್ಟು ಬೇಗ ಎದ್ದು ಬಿಟ್ಟಿದ್ದಿ. ಓದ್ಕೋತಿದ್ದ'
“ಇಲ್ಲ. ಬೇಗ ಎದ್ದಿರೋದಲ್ಲ. ಇನ್ನೂ ನಿದ್ರೇನೇ ಮಾಡಿಲ್ಲ"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಆಗ 11, 2019
ಒಂದು ಬೊಗಸೆ ಪ್ರೀತಿ - 26
ಡಾ. ಅಶೋಕ್. ಕೆ. ಆರ್.
ನಾನೂ ಸಾಗರ ಲವ್ ಯು ಲವ್ ಯು ಟೂ ಅಂತೇಳಿಕೊಂಡ ಮೇಲೆ ಬರುತ್ತಿರುವ ಮೊದಲ ನೈಟ್ ಡ್ಯೂಟಿ ಇದು. ಬೆಳಿಗ್ಗೆ ಡ್ಯೂಟಿಯಿದ್ದಾಗ ಆಗೊಮ್ಮೆ ಈಗೊಮ್ಮೆ ಮೆಸೇಜು ಮಾಡಲಷ್ಟೇ ಸಾಧ್ಯವಾಗಿತ್ತು, ಸಾಗರನ ಮನವಿನ್ನೂ ಪೂರ್ಣ ತಿಳಿಯಾಗಿಲ್ಲವೇನೋ ಎಂದೇ ನನಗನ್ನಿಸುತ್ತಿತ್ತು. ಹಂಗೇನಿಲ್ವೇ, ಓದೋದ್ರಲ್ಲಿ ಸ್ವಲ್ಪ ಬ್ಯುಸಿ. ನೀ ಬಿಡುವಾದಾಗ ಫೋನ್ ಮಾಡು ಮಾತಾಡುವ ಅಂತೇಳಿದ್ದ. ಮಾತಿನಲ್ಲಿ ಉದಾಸೀನತೆಯಿರಲಿಲ್ಲವಾದರೂ ಹೊಸತಾಗಿ ಪ್ರೀತಿಗೆ ಬಿದ್ದವರಲ್ಲಿದ್ದ ಉತ್ಸಾಹವೂ ಇರಲಿಲ್ಲ. ಸರಿ ಅವನ ಮನದ ಗೊಂದಲಗಳೂ ಪೂರ್ಣ ತಪ್ಪೇನಲ್ಲವಲ್ಲ. ಎಷ್ಟು ಸಮಯ ಬೇಕೋ ಅಷ್ಟನ್ನು ಆತ ತೆಗೆದುಕೊಳ್ಳಲಿ ಎಂದುಕೊಂಡು ನಾನೂ ಹೆಚ್ಚು ಮೆಸೇಜು ಮಾಡುವುದಕ್ಕೆ ಹೋಗಲಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದರೆ ಮನೆ ಕೆಲಸದ ಸುಸ್ತು. ಜೊತೆಗೆ ಅಪ್ಪ ಅಮ್ಮ ಶಶಿ ಒಂದೇ ಸಮ ಫೋನ್ ಮಾಡಿಕೊಂಡು ಏನಂದ್ರು ಏನಂದ್ರು ಒಪ್ತಾರಂತ ಒಪ್ಪಬಹುದು ಅಂತ ನಿನಗನ್ನಿಸುತ್ತ ಅಂತ ಪಟ್ಟು ಬಿಡದೆ ಪ್ರಶ್ನೆ ಕೇಳಿ ಕೇಳಿ ಮತ್ತಷ್ಟು ಸುಸ್ತು ಮಾಡಿಸೋರು.
ರಾತ್ರಿ ಹತ್ತರವರೆಗೆ ರೋಗಿಗಳಿದ್ದರು. ಹತ್ತಕ್ಕೆ ಬಿಡುವಾದಾಗ ಸಾಗರನಿಗೆ ಮೆಸೇಜು ಮಾಡಿದೆ.
'ಏನ್ ಮಾಡ್ತಿದ್ಯೋ'
"ಊಟ ಮುಗಿಸಿ ಸಿಗರೇಟು ಹಚ್ಚಿದ್ದೆ"
'ಅಷ್ಟೊಂದೆಲ್ಲ ಸಿಗರೇಟು ಸೇದಬೇಡ್ವೋ'
ಆಗ 6, 2019
ನನ್ನವನ ನಿರೀಕ್ಷೆಯಲ್ಲಿ....
ಸ್ಪೂರ್ತಿ.
ನನ್ನೆದೆಯಲ್ಲಿ ನಡೆದಿದೆ ನಿನ್ನಯ
ಪ್ರೀತಿಯ ಕಾರುಬಾರು...
ವ್ಯಕ್ತಪಡಿಸು ಬಂದು ನಿನ್ನ
ಪ್ರೀತಿಯ ನನ್ನ ಬಳಿ ಒಂಚೂರು....
ನೆನೆದರೆ ನಮ್ಮಿಬ್ಬರ ಮೊದಲ ಬೇಟಿಯ,
ಮನಸಲ್ಲಿ ಇಂದಿಗೂ ಅವತ್ತಿನ ಅದೇ ತಳಮಳ
ಆ ನೆನಪುಗಳು ಮೂಡಿಸುತ್ತಿವೆ ನನ್ನ
ಮುಖದಲ್ಲಿ ರೋಮಾಂಚನದ ಫಳಫಳ....
ಈ ಎಲ್ಲ ನೆನಪುಗಳು ಒಟ್ಟಿಗೆ ಹರಿಸುತ್ತಿವೆ
ಕಣ್ಣಂಚಲ್ಲಿ ನೀರನ್ನು ಗಳಗಳ...
ಸಾಕಾಗಿದೆ ಅತ್ತು-ಅತ್ತು ನಿನ್ನ ನೆನೆದು...
ಬೇಗ ಬಂದು ಸೇರಿಬಿಡಬಾರದೆ ನಿನ್ನವಳ......
ಇಂತಿ ನಿನ್ನವಳು
ಆಗ 5, 2019
ಒಂದು ಬೊಗಸೆ ಪ್ರೀತಿ - 25
ಬೆಳಿಗ್ಗೆ ನಾ ಬಂದಾಗ ಶಶಿ ಜೊತೆಗೆ ಮಾತನಾಡಿದ ಬಗ್ಗೆ ಏನನ್ನೂ ತಿಳಿಸಿರಲಿಲ್ಲ ರಾಜಿ. ಸಂಜೆ ಬರಲಿ ಮನೆಗೆ ಒಂದ್ ಸುತ್ತು ಜಗಳವಾಡ್ತೀನಿ ಎಂದುಕೊಂಡಿದ್ದವಳಿಗೆ ಜಗಳವಾಡುವ ಮನಸ್ಸೂ ಇರಲಿಲ್ಲ. ಹುಂಗುಟ್ಟಿ ಹೋಗಿ ತಯಾರಾದೆ. ರಾಜಿ ಹಿಂದಿನಿಂದ ಬಂದು ಅಪ್ಪಿಕೊಂಡು "ಯಾಕೆ ಡಾರ್ಲಿಂಗ್ ಸಪ್ಪಗಿದ್ದಿ. ಅವರೇನೇನೋ ಮಾತನಾಡ್ತಾರೆ ಅಂತ ತಲೆ ಕೆಡಿಸಿಕೋಬೇಡ. ನಾನಿರ್ತೀನಲ್ಲ. ಮಾತಾಡ್ತೀನಿ" ಎಂದ್ಹೇಳುತ್ತ ಕತ್ತಿಗೊಂದು ಮುತ್ತನಿತ್ತರು. ಬೇಸರ ದೂರವಾಯಿತು. 'ಹು...ನೀವೇ ಮಾತಾಡಿ. ಅವರ ಬಾಯಲ್ಲಿ ಏನೇನು ಮಾತು ಕೇಳ್ಬೇಕೋ ಏನೋ' ಕತ್ತು ತಿರುಗಿಸಿ ಅವರ ಕೆನ್ನೆಗೊಂದು ಮುತ್ತು ಕೊಟ್ಟೆ. ಸೋನಿಯಾಗೆ ಬರುತ್ತಿರುವುದಾಗಿ ಒಂದು ಮೆಸೇಜು ಹಾಕಿದೆ.
ಸೋನಿಯಾಳ ಮನೆ ತಲುಪಿದಾಗ ಏಳರ ಹತ್ತಿರವಾಗಿತ್ತು. ಅವರ ತಂದೆ ತಾಯಿ ಮನೆಯಲ್ಲೇ ಇದ್ದರು. ನಮ್ಮಿಬ್ಬರನ್ನು ಕಂಡು ಅವರಿಬ್ಬರಿಗೂ ಅಚ್ಚರಿಯಾಯಿತು. ಪಕ್ಕದ ಮನೆಯಲ್ಲೇ ಇದ್ದರೂ ನಾನು ಅವರ ಮನೆಗೆ ಹೋಗಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಗೇಟಿನ ಬಳಿ ಕಂಡಾಗ ಕುಶಲೋಪರಿ ವಿಚಾರಿಸಿಕೊಂಡಿದ್ದೆಷ್ಟೋ ಅಷ್ಟೇ. ನಮ್ಮ ಮನೆಯಲ್ಲೇನೋ ಫಂಕ್ಷನ್ ಗಿಂಕ್ಷನ್ ಇರಬೇಕು, ಅದಕ್ಕೆ ಕರೆಯೋಕೆ ಬಂದಿದ್ದಾರೆ ಅಂದುಕೊಂಡಿರುತ್ತಾರೆ. ನಮ್ಮ ಅವರ ಮನೆಯವರು ಸೇರಿ ನಡೆಸೋ ಫಂಕ್ಷನ್ ಬಗ್ಗೆ ಮಾತನಾಡೋಕೆ ಬಂದಿದ್ದೀವಿ ಅನ್ನುವುದರ ಕಲ್ಪನೆ ಕೂಡ ಅವರಿಗಿರಲಿಕ್ಕಿಲ್ಲ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಜುಲೈ 28, 2019
ಒಂದು ಬೊಗಸೆ ಪ್ರೀತಿ - 24
“ನಾವಂಗೆ ಚೂರ್ ಸುತ್ತಿ ಬಳಸೋದ್ ಜಾಸ್ತಿ"
'ಎಲ್ಲಾದ್ರಲ್ಲೂನಾ' ತುಂಟ ನಗೆ ಮೂಡಿತು.
“ಅಂದ್ರೆ" ಮುಗ್ಧನಂತೆ ನಾಟಕವಾಡಿದ.
'ಅಂದ್ರೆ... ಎಲ್ಲಾ.....ದ್ರ.....ಲ್ಲೂ....ನಾ' ಅಂತ
“ಏನೋ ಗೊತ್ತಿಲ್ಲಪ್ಪ. ಅನುಭವ ಇಲ್ಲ. ನಾನಿನ್ನೂ ವರ್ಜಿನ್ನು"
'ಆಹಾ ವರ್ಜಿನ್ನಂತೆ....'
“ಹು ಕಣೇ ನಿಜವಾಗ್ಲೂ"
'No one is virgin by heart ಕಣೋ'
ಒಂದ್ನಿಮಿಷ ಅವ ಮಾತನಾಡಲಿಲ್ಲ.
“ಹೌದಲ್ಲ. ಭಯಂಕರ ಸತ್ಯ ಹೇಳಿದೆ ಮಾರಾಯ್ತಿ. ಮನಸ್ಸಿನಿಂದ ಯಾರೂ ವರ್ಜಿನ್ನುಗಳಾಗೋಕೆ ಸಾಧ್ಯವೇ ಇಲ್ಲ. ಆ ಲೆಕ್ಕಕ್ಕೆ ನಮ್ ವರ್ಜಿನಿಟಿ ಒಂಭತ್ತನೇ ಕ್ಲಾಸಿಗೇ ಮುಗಿದೋಯ್ತ ಅಂತ"
'ಹ. ಹ. ಯಾರಪ್ಪ ಅದು ನಮ್ ಹುಡುಗುನ್ ವರ್ಜಿನಿಟಿ ಕಿತ್ಕೊಂಡೋರು'
“ನೆನಪಿಲ್ವೇ. ಸುಮಾರ್ ಜನ ಇರ್ತಾರಲ್ಲ" ಇಬ್ಬರ ನಗು ಒಬ್ಬರಿಗೊಬ್ಬರಿಗಪ್ಪಳಿಸಿತು.
“ಒಂದೆಂತದೋ ಕೇಳ್ಲಾ... ನೀ ಬೇಸರ ಮಾಡ್ಬಾರ್ದು"
'ಕೇಳೋ... ಬೇಸರ ಯಾಕೆ'
“ನೀನ್ಯಾವಾಗ ವರ್ಜಿನಿಟಿ..... ಮನಸ್ಸಿನ ವರ್ಜಿನಿಟಿ ಅಲ್ಲ.....ದೇಹದ ವರ್ಜಿನಿಟಿ ಕಳ್ಕಂಡಿದ್ದು"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಜುಲೈ 22, 2019
ಒಂದು ಬೊಗಸೆ ಪ್ರೀತಿ - 23
ಡಾ. ಅಶೋಕ್. ಕೆ. ಆರ್.
ಬೆಳಿಗ್ಗೆ ಮನೆ ತಲುಪುವವರೆಗೂ ಸಾಗರನಿಗೆ ಮೆಸೇಜ್ ಮಾಡಲು ಆಗಿರಲಿಲ್ಲ. ರಾಜಿ ಇನ್ನೂ ಆಫೀಸಿಗೆ ಹೊರಟಿರಲಿಲ್ಲ. ಸಾಗರನಿಗೆ ರಾತ್ರಿ ಮಾಡಿದ್ದ ಕಾಲ್ ಡೀಟೇಲ್ಸನ್ನು ಡಿಲೀಟ್ ಮಾಡಿದ್ದೀನಾ ಎಂದು ಮರುಪರಿಶೀಲಿಸಿದೆ. ರಾಜಿ ನನ್ನ ಮೊಬೈಲನ್ನು ತೆಗೆದು ಪರಿಶೀಲಿಸೋರೇನಲ್ಲ. ನಾನೂ ಅವರ ಮೊಬೈಲನ್ನು ಮುಟ್ಟುವವಳಲ್ಲ. ಆದರೂ ಸುಮ್ನೆ ಯಾಕೆ ರಿಸ್ಕು ಅಂತ್ಹೇಳಿ ಡಿಲೀಟ್ ಮಾಡ್ತಿದ್ದೆ. ರಾಜಿ ಆಫೀಸಿಗೆ ಹೊರಟ ಮೇಲೆ ಸಾಗರನಿಗೊಂದು 'ಗುಡ್ ಮಾರ್ನಿಂಗ್' ಮೆಸೇಜು ಕಳುಹಿಸಿದೆ. ಅರ್ಧ ಘಂಟೆಯ ನಂತರ ಉತ್ತರಿಸಿದ್ದ. ಅಷ್ಟರಲ್ಲಿ ಗೇಟಿನ ಸದ್ದಾಯಿತು. ಮೆಸೇಜುಗಳನ್ನು ಡಿಲೀಟು ಮಾಡಿ ಬಾಗಿಲು ತೆರೆದರೆ ಶಶಿ ಬಂದಿದ್ದ, ಸೋನಿಯಾ ಕೂಡ ಜೊತೆಯಲ್ಲಿ ಬಂದಿದ್ದಳು.
'ಏನ್ರಪ್ಪಾ ಯುವಪ್ರೇಮಿಗಳು. ಕೆಲಸಕ್ ಹೋಗೋದ್ ಬಿಟ್ಟು ಇಷ್ಟು ದೂರ. ಮದುವೆಯಾಗೋಕೆ ಓಡಿಬಂದಿದ್ದೀರಾ ಹೆಂಗೆ' ನಗುತ್ತಾ ಸೋನಿಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದುಕೊಂಡೆ.
“ಅಪ್ಪ ಅಮ್ಮ ಅಕ್ಕ ಭಾವ ಒಪ್ಕಂಡ ಮೇಲೆ ಓಡೋಗಿ ಮದುವೆಯಾಗೋ ದರ್ದು ನಮಗಿಲ್ಲಪ್ಪ" ಶಶಿಯ ದನಿಯಲ್ಲಿ ಒಂದಷ್ಟು ದಿನದಿಂದ ಕಾಣೆಯಾಗಿದ್ದ ಲವಲವಿಕೆ ಮರಳಿ ಬಂದಂತಿತ್ತು. ಸೋನಿಯಾಳ ಮುಖದಲ್ಲಿ ಮಾತ್ರ ಆ ಲವಲವಿಕೆ ಪ್ರತಿಫಲಿಸಲಿಲ್ಲ.
ಒಂದಷ್ಟು ಸಮಯ ಮೂರೂ ಮಂದಿ ಸುಮ್ಮನೆ ಕುಳಿತಿದ್ದೆವು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಜುಲೈ 14, 2019
ಒಂದು ಬೊಗಸೆ ಪ್ರೀತಿ - 22
'ಹು. ನಿಂಗೇ ಗೊತ್ತಲ್ಲ. ನಾವ್ ಪಿಯುಲಿದ್ದಾಗ ಇಂಜಿನಿಯರಿಂಗ್ ಬೂಮ್ ನಲ್ಲಿತ್ತು. ಸಾಫ್ಟ್ ವೇರು, ಇನ್ಫೋಸಿಸ್ಸು, ಅಮೆರಿಕಾ ಅಮೆರಿಕಾ ಬಹಳಷ್ಟು ಜನರ ಕನಸಾಗಿತ್ತಲ್ಲ. ನಂಗೂ ಹಂಗೇ ಇತ್ತು. ಇಂಜಿನಿಯರಿಂಗ್ ಮಾಡ್ಕಂಡು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡ್ಕಂಡು ಆಮೇಲೆ ಪರಶುವಿನ ಜೊತೆ ವಿದೇಶಕ್ಕೋಗಿ ದುಡಿದು ದುಡಿದು ಕೈತುಂಬಾ ದುಡ್ಡು ಮಾಡ್ಕಂಡು ಬಂದು ಸೆಟಲ್ ಆಗಿಬಿಡಬೇಕು ಅಂತಿತ್ತು. ನಿಂಗಿರಲಿಲ್ವಾ'
“ಇಲ್ಲಪ್ಪ. ನಂಗೆ ಮೊದಲಿಂದಾನೂ ಡಾಕ್ಟರ್ ಆಗಬೇಕು ಅಂತಲೇ ಇತ್ತು" ಸಾಗರನ ಮಾತಿಗೆ ಮ್ ಎಂದೊಂದು ನಿಟ್ಟುಸಿರುಬಿಟ್ಟೆ.
“ಮತ್ತೆ ನೀನ್ಯಾಕೆ ಇಂಜಿನಿಯರಿಂಗ್ ಬಿಟ್ಟು ಮೆಡಿಕಲ್ ಸೇರಿದೆ"
'ಹು. ಅಲ್ಲಿಗೇ ಬಂದೇ ಇರು. ಪಿಯು ರಿಸಲ್ಟು ಬಂತು. ನಂಗೇ ಅಚ್ಚರಿಯಾಗುವಂತೆ ತೊಂಭತ್ತನಾಲ್ಕು ಪರ್ಸೆಂಟ್ ತೆಗೆದೆ. ಅಪ್ಪನ ಕೈಲಿ ಶಹಬ್ಬಾಸ್ ಅನ್ನಿಸಿಕೊಂಡೆ. ಪರಶು ಮೆಚ್ಚುಗೆಯಿಂದ ನೋಡಿದ. ಅವನು ಅರವತ್ತು ಪರ್ಸೆಂಟು ತೆಗೆದುಕೊಂಡು ಪಾಸಾಗಿದ್ದ. ನನ್ನ ತೊಂಭತ್ತನಾಲ್ಕಕ್ಕಿಂತಲೂ ಅವನ ಅರವತ್ತು ದೊಡ್ಡದೆಂದನ್ನಿಸಿತು ನನಗೆ'
“ಮ್. ಅಶ್ವಿನಿಗಿಂತಾ ಜಾಸ್ತಿ ತೆಗೆದಾ ಇಲ್ಲವಾ?” ವ್ಯಂಗ್ಯದಲ್ಲೇ ಕೇಳಿದ ಸಾಗರ.
'ಆಹಾ.... ವ್ಯಂಗ್ಯ ನೋಡು! ನಾವ್ ಒಂದ್ಸಲ ಡಿಸೈಡ್ ಮಾಡಿಬಿಟ್ರೆ ನಮ್ ಮಾತ್ ನಾವೇ ಕೇಳಲ್ಲ'
“ಪಿಚ್ಚರ್ ಡೈಲಾಗು"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಜುಲೈ 11, 2019
ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ
ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು
ಕಮರಲೆಂದೆ ಕನಸು ಹುಟ್ಟುವುದು
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು
ಬರಲಿರುವ ಸಖನಿಗಾಗಿ.
ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು
ಬರಲಿರುವ ಸಖನ ಮೂಗಿಗೆ ಘಮಿಸಲೆಂದು
ಬರಡು ಎದೆಗೆ ವಸಂತನ ಕನವರಿಸಿ
ಹೊಸ ಕನಸು ಚಿಗುರಿಸಿಕೊಂಡಳು
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು




